E-Autos: ಇ-ಆಟೋ ಖರೀದಿಗೆ ಬೇಕಿದೆ ಮತ್ತಷ್ಟು ಉತ್ತೇಜನ, ಎಲೆಕ್ಟ್ರಿಕ್ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳೇನು?

ನಗರದ ರಸ್ತೆಗಳಲ್ಲಿ ಸಂಚರಿಸುವ ಲಕ್ಷಗಟ್ಟಲೆ ಆಟೋ-ರಿಕ್ಷಾಗಳ ಪೈಕಿ ಕೆಲವೇ ಸಂಖ್ಯೆಗಳಿರುವ ಇ-ಆಟೋಗಳು  ಮಾತ್ರ ವಿದ್ಯುತ್ ಶಕ್ತಿಯಿಂದ ಓಡುತ್ತವೆ.

E-Autos: ಇ-ಆಟೋ ಖರೀದಿಗೆ ಬೇಕಿದೆ ಮತ್ತಷ್ಟು ಉತ್ತೇಜನ, ಎಲೆಕ್ಟ್ರಿಕ್ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳೇನು?
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Apr 12, 2023 | 7:40 AM

ಬೆಂಗಳೂರು: ನಗರದ ರಸ್ತೆಗಳಲ್ಲಿ ಸಂಚರಿಸುವ ಲಕ್ಷಗಟ್ಟಲೆ ಆಟೋ-ರಿಕ್ಷಾಗಳ ಪೈಕಿ ಕೆಲವೇ ಸಂಖ್ಯೆಗಳಿರುವ ಇ-ಆಟೋಗಳು  ಮಾತ್ರ ವಿದ್ಯುತ್ ಶಕ್ತಿಯಿಂದ ಓಡುತ್ತವೆ. ಆದ್ರೆ ಇ-ಆಟೋಗಳ ಚಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರ್ಶ ಆಟೋ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ ಸಂಪತ್ ಮಾತನಾಡಿದ್ದು, ಕೇವಲ 1% ಆಟೋ ರಿಕ್ಷಾಗಳು ಎಲೆಕ್ಟ್ರಿಕ್ ಆಗಿವೆ ಎಂದು ಅಂದಾಜಿಸಿದ್ದಾರೆ. ನಗರದಲ್ಲಿ ಸುಮಾರು 1.5 ಲಕ್ಷ ಆಟೋಗಳಿವೆ ಮತ್ತು ಅವುಗಳಲ್ಲಿ 1,500 ರಿಂದ 2,000 ಇ-ಆಟೋಗಳಾಗಿವೆ ಎಂದು ಅವರು ತಿಳಿಸಿದರು.

ನಾರ್ಮಲ್​ ಆಟೋಗಿಂತ ಇ-ಆಟೋ ದರ ಹೆಚ್ಚಾಗಿದ್ದರಿಂದ ಇದರ ವೆಚ್ಚ ಹೆಚ್ಚಿದೆ ಎಂದು ಚಾಲಕರು ಹೇಳಿದರು. ಒಂದು ಹೊಸ ಆಟೋಗೆ ಸುಮಾರು 2.5 ಲಕ್ಷ ರೂ., ಇ-ಆಟೋಗೆ 3.5 ಲಕ್ಷ ರೂ ಆಗುತ್ತೆ. ಹಳೆಯ ಆಟೋ ನೀಡಿ ಹೊಸದನ್ನು ಖರೀದಿಸಲು 1.5 ದಿಂದ 1.75 ಲಕ್ಷ ರೂ ಆಗುತ್ತದೆ. ಯಾವುದೇ ಬ್ಯಾಂಕ್ ನಮಗೆ ಸಾಲ ನೀಡುವುದಿಲ್ಲ ಮತ್ತು ಸಬ್ಸಿಡಿ ತುಂಬಾ ಕಡಿಮೆಯಾಗಿದೆ, ನಮ್ಮಲ್ಲಿ ಅನೇಕರು ಉಳಿದ ಹಣವನ್ನು ಪಾವತಿಸಲು ಮತ್ತು ಇ-ಆಟೋಗಳನ್ನು ಖರೀದಿಸಲು ಸಾಧ್ಯವಿಲ್ಲ’ ಎಂದು ಆಟೋ ಚಾಲಕ ರುದ್ರಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯು ಇ-ಆಟೋಗಳಿಗೆ ಮತ್ತೊಂದು ಅಡಚಣೆಯಾಗಿದೆ. “ಪ್ರತಿ ಏರಿಯಾಗಳನ್ನು ನಮಗೆ ಬೇಕಾದಷ್ಟು ಚಾರ್ಜಿಂಗ್ ಸ್ಟೇಷನ್‌ಗಳು ಲಭ್ಯವಿಲ್ಲ ಮತ್ತು ಬೆಸ್ಕಾಂ ಸ್ಥಾಪಿಸಿರುವ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಹೆಚ್ಚಾಗಿ ಕಾರುಗಳೇ ಇಡೀ ಜಾಗವನ್ನು ಆಕ್ರಮಿಸಿಕೊಂಡಿರುತ್ತವೆ. ವೈಯಕ್ತಿಕ ಬಳಕೆಯ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗಿಂತ ಭಿನ್ನವಾಗಿ, ನಮ್ಮ ಕೆಲಸಕ್ಕೆ ತೊಂದರೆಯಾಗುತ್ತದೆ. ಸಮಯ ಹರಣ ಎಂಬ ಕಾರಣ ವಾಹನಗಳನ್ನು ಚಾರ್ಜ್ ಮಾಡಲು ನಾವು ಸಾಲಿನಲ್ಲಿ ಕಾಯಲು ಸಾಧ್ಯವಿಲ್ಲ. ಆಟೋಗಳಿಗೆ ಮೀಸಲಾದ ಲೈನ್ ಇರಬೇಕು ”ಎಂದು 2021 ರಲ್ಲಿ ತನ್ನ ಆಟೋ ರಿಕ್ಷಾವನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಯೋಗೇಶ್ ತಿಳಿಸಿದರು.

ಇದನ್ನೂ ಓದಿ: ಮಾ.29ರಿಂದ ರಾಜ್ಯದಲ್ಲಿ ಈವರೆಗೆ 126.14 ಕೋಟಿ ರೂ. ಹಣ, ವಸ್ತು ಜಪ್ತಿ: ಬೆಂಗಳೂರು ಪಾಲೆಷ್ಟು? ಇಲ್ಲಿದೆ ಅಂಕಿ ಅಂಶ

ಸಾರ್ವಜನಿಕರ ಸಲಹೆಗಳಿಗೆ ಮುಕ್ತ ಅವಕಾಶವಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಚಾರ್ಜಿಂಗ್ ಕೇಂದ್ರಗಳು ಅಸಮರ್ಪಕವಾಗಿರುವ ಪ್ರದೇಶಗಳನ್ನು ಆಟೋ ಚಾಲಕರು ಸೂಚಿಸಿದರೆ, ನಾವು ಅವರ ಸಲಹೆಗಳನ್ನು ಪರಿಗಣಿಸುತ್ತೇವೆ” ಎಂದು ಅಧಿಕಾರಿ ಹೇಳಿದರು. ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯ ನಿರ್ದೇಶಕ ಪವನ್ ಮುಲುಕುಟ್ಲ ಮಾತನಾಡಿ, ಈ ವಲಯದಲ್ಲಿ ಸರ್ಕಾರದ ಉತ್ತೇಜನದ ಅಗತ್ಯವಿದೆ. ಆಟೋಗಳಿಗೆ ಸಂಬಂಧಿಸಿದಂತೆ EV ಬೆಳವಣಿಗೆಯು ನಿಧಾನವಾಗಿದೆ. ಬೃಹತ್ ವೆಚ್ಚಗಳು ಪ್ರತಿಬಂಧಕವಾಗಿರುವುದರಿಂದ, ಸರ್ಕಾರವು ಒತ್ತು ನೀಡಬೇಕಾಗಿದೆ. ಸಬ್ಸಿಡಿ, ಜಾಗೃತಿ ಕಾರ್ಯಕ್ರಮ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲಗಳು ದತ್ತು ದರವನ್ನು ಸುಧಾರಿಸುತ್ತದೆ ಎಂದರು.

ಪ್ರಯೋಜನಗಳು

ಇನ್ನು ಇ-ಆಟೋಗಳ ಪ್ರಯೋಜನಗಳು ಅಗಾಧವಾಗಿವೆ. ಹೇಗೆಂದರೆ ಒಮ್ಮೆ ಇ-ಆಟೋವನ್ನು ಚಾರ್ಜ್ ಮಾಡಲು 50 ಅಥವಾ 60 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತೆ. ಆದ್ರೆ ಇದರಿಂದ ಆಟೋ ಚಾಲಕರು 1,000 ರೂಗಳ ದುಡಿಮೆ ಮಾಡಬಹುದು. ಅಲ್ಲದೆ ಇ-ಆಟೋಗಳಿಗೆ ಅಗತ್ಯವಿರುವ ನಿರ್ವಹಣೆಯ ಹಣವನ್ನೂ ಸಹ ಉಳಿಸಬಹುದು. ಹೀಗಾಗಿ ಇ-ಆಟೋಗಳ ಖರ್ಚು, ಮೆಂಟೆನೆನ್ಸ್ ಚಾರ್ಜ್ ಕಡಿಮೆ.

ಚಾರ್ಜಿಂಗ್ ಕೇಂದ್ರಗಳು

ಡಿಸೆಂಬರ್ 31, 2022 ರಂತೆ, ಬೆಂಗಳೂರು 126 ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ.

ಆರ್ಥಿಕ ಸಹಾಯಧನ

ಸಾಮಾನ್ಯ ಆಟೋವನ್ನು ಎಲೆಕ್ಟ್ರಿಕ್ ಆಟೋಗಳಿಗೆ ಬದಲಾಯಿಸಲು ಸಾರಿಗೆ ಇಲಾಖೆಯು 60,000 ರೂ ಆರ್ಥಿಕ ಸಹಾಯಧನವನ್ನು ನೀಡುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:40 am, Wed, 12 April 23

ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ