ನೈಟ್ ಕರ್ಫ್ಯೂ ಸಯಮ ಬದಲಾವಣೆಗೆ ಸಿಎಂ ಬೊಮ್ಮಾಯಿಗೆ ಮನವಿ; ಶೀಘ್ರದಲ್ಲೇ 50:50 ನಿಮಯ ರದ್ದು ಸಾಧ್ಯತೆ

| Updated By: sandhya thejappa

Updated on: Jan 23, 2022 | 11:36 AM

ರಾಜ್ಯದಲ್ಲಿ 50-50 ನಿಯಮ ಜಾರಿಯಲ್ಲಿದೆ. ನಿಯಮ ಜಾರಿಯಲ್ಲಿದ್ದರು ಹೋಟೆಲ್​ನವರು ಪಾಲನೆ ಮಾಡುತ್ತಿಲ್ಲ. ಹೋಟೆಲ್​‘ಗಳಲ್ಲಿ ಯಥಾಸ್ಥಿತಿ ವ್ಯಾಪಾರ ವಹಿವಾಟು ನಡೆಯುತ್ತಿದೆ.

ನೈಟ್ ಕರ್ಫ್ಯೂ ಸಯಮ ಬದಲಾವಣೆಗೆ ಸಿಎಂ ಬೊಮ್ಮಾಯಿಗೆ ಮನವಿ; ಶೀಘ್ರದಲ್ಲೇ 50:50 ನಿಮಯ ರದ್ದು ಸಾಧ್ಯತೆ
ನೈಟ್​ ಕರ್ಫ್ಯೂ ವೇಳೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕುತ್ತಿದ್ದಾರೆ
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿಲ್ಲ. ಹೀಗಾಗಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂನ ಸರ್ಕಾರ ತೆರವುಗೊಳಿಸಿದೆ. ಸದ್ಯ ನೈಟ್ ಕರ್ಫ್ಯೂ (Night Curfew) ಜಾರಿಯಲ್ಲಿದ್ದು, ಸಮಯ ವಿಸ್ತರಣೆ ಮಾಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ. ರಾತ್ರಿ 11.30 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸುವಂತೆ ಸಿಎಂ ಬೊಮ್ಮಾಯಿಗೆ (Basavaraj Bommai) ಮನವಿ ಸಲ್ಲಿಸಲು ವಿವಿಧ ವಲಯಗಳ ಉದ್ಯಮಿಗಳು ನಿರ್ಧರಿಸಿದ್ದಾರೆ. ಮುಂದಿನ ಬುಧವಾರ ಉದ್ಯಮಿಗಳು ಮುಖ್ಯಮಂತ್ರಿಗೆ ಈ ಬಗ್ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಸದ್ಯ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇದೆ. ಆದರೆ ಈ ಸಮಯವನ್ನು ಒಂದೂವರೆ ಗಂಟೆ ಮುಂದೂಡಿಕೆ ಮಾಡುವಂತೆ ಹೋಟೆಲ್ ಮಾಲೀಕರ ಸಂಘ, ಬಾರ್, ಪಬ್ ಆ್ಯಂಡ್ ರೆಸ್ಟೊರೆಂಟ್, ಬೇಕರಿ ಆ್ಯಂಡ್ ಕಾಂಡಿಮೆಂಟ್ಸ್ ಸಂಘ, ಮಾಲ್ ಅಸೋಸಿಯೇಷನ್, ಥಿಯೇಟರ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳ ಸಂಘ, ಕ್ಯಾಟರಿಂಗ್ ಉದ್ಯಮ ಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ನೈಟ್ ಕರ್ಫ್ಯೂ ಸಮಯ ಬದಲಾವಣೆಗೆ ನೀಡುತ್ತಿರುವ ಕಾರಣ
* ಥಿಯೇಟರ್​ಗಳಲ್ಲಿ ಸೆಕೆಂಡ್ ಶೋಗೆ ಕತ್ತರಿ ಬಿದ್ದಿದೆ.
* ರಾತ್ರಿ ಪಾಳಿ ಕೆಲಸ ಮುಗಿಸಿ ಬರುವವರಿಗೆ ಹೋಟೆಲ್​ನಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ.
* ಬಾರ್​ಗಳಲ್ಲಿ ರಾತ್ರಿ 8ರ ನಂತರ ವ್ಯಾಪಾರ ಶುರುವಾಗುತ್ತದೆ.
* ಸಂಜೆ ಪಾರ್ಟಿಯ ಊಟದ ಸಮಯ 8ಕ್ಕೆ ಶುರುವಾಗಿ 11ರವರೆಗೂ ಇರುತ್ತದೆ

ಶೀಘ್ರದಲ್ಲೇ 50-50 ರೂಲ್ಸ್ ರದ್ದು?
ರಾಜ್ಯದಲ್ಲಿ 50-50 ನಿಯಮ ಜಾರಿಯಲ್ಲಿದೆ. ನಿಯಮ ಜಾರಿಯಲ್ಲಿದ್ದರು ಹೋಟೆಲ್​ನವರು ಪಾಲನೆ ಮಾಡುತ್ತಿಲ್ಲ. ಹೋಟೆಲ್​‘ಗಳಲ್ಲಿ ಯಥಾಸ್ಥಿತಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೀಗಾಗಿ ಕೇವಲ ಸಭೆ, ಸಮಾರಂಭಗಳಲ್ಲಿ ಅನ್ವಯವಾಗುವಂತೆ 50-50 ನಿಮಯ ಜಾರಿಗೊಳಿಸಿ, ಹೋಟೆಲ್, ಥಿಯೇಟರ್​ಗಳಿಗೆ ಈ ನಿಮಯದಿಂದ ಮುಕ್ತಿ ನೀಡುವ ಸಾಧ್ಯತೆಯಿದೆ.

ರಾಜ್ಯದಲ್ಲಿ ನೈಟ್ ಕರ್ಫ್ಯೂ ಸಂಪೂರ್ಣವಾಗಿ ಕೈಬಿಡಬೇಕು. ಇಲ್ಲದಿದ್ದರೆ ನೈಟ್ ಕರ್ಫ್ಯೂ ಅವಧಿ ಬದಲಿಸಬೇಕೆಂದು ಅಂತ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಮನವಿ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಭೇಟಿಯಾಗುತ್ತೇವೆ. ಈ ವೇಳೆ ನೈಟ್ ಕರ್ಫ್ಯೂ ಸಮಯ ಬದಲಾವಣೆಗೆ ಮನವಿ ಮಾಡುತ್ತೇವೆ. ಸಿಎಂ ಅಥವಾ ಸಿಎಸ್‌ರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ವೀಕೆಂಡ್ ಕರ್ಫ್ಯೂ ತೆಗೆದಿರುವುದರಿಂದ ಅನುಕೂಲವಾಗಿದೆ. 20 ಲಕ್ಷ ಹೋಟೆಲ್ ಮಾಲೀಕರ ಜೀವ ಉಳಿಸಿದೆ ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ

Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

ಬೇರೆಯವರಿಂದ ಹಣ ಪಡೆದು ಕಷ್ಟಪಟ್ಟು ಓದಿಸಿದ ಪೋಷಕರು; ಆ ಬಾಲಕನೀಗ ಭಾರತದ ಓರ್ವ ಖ್ಯಾತ ನಿರ್ದೇಶಕ!

Published On - 9:18 am, Sun, 23 January 22