ಬೇರೆಯವರಿಂದ ಹಣ ಪಡೆದು ಕಷ್ಟಪಟ್ಟು ಓದಿಸಿದ ಪೋಷಕರು; ಆ ಬಾಲಕನೀಗ ಭಾರತದ ಓರ್ವ ಖ್ಯಾತ ನಿರ್ದೇಶಕ!

Anurag Kashyap: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ವಿಶಿಷ್ಟ ಶೈಲಿಯ ಸಿನಿಮಾಗಳಿಂದ ಖ್ಯಾತರಾದವರು. ಇತ್ತೀಚೆಗೆ ಅವರು ತಮ್ಮ ಬಾಲ್ಯ ಹಾಗೂ ಪೋಷಕರ ಕುರಿತು ಬರೆದುಕೊಂಡಿದ್ದಾರೆ. ಈ ಕುರಿತ ಬರಹ ಇಲ್ಲಿದೆ.

ಬೇರೆಯವರಿಂದ ಹಣ ಪಡೆದು ಕಷ್ಟಪಟ್ಟು ಓದಿಸಿದ ಪೋಷಕರು; ಆ ಬಾಲಕನೀಗ ಭಾರತದ ಓರ್ವ ಖ್ಯಾತ ನಿರ್ದೇಶಕ!
ಅನುರಾಗ್ ಕಶ್ಯಪ್ (ಎಡ), ಅನುರಾಗ್ ಹಂಚಿಕೊಂಡ ಅವರ ಪೋಷಕರ ಚಿತ್ರ (ಬಲ)
Follow us
TV9 Web
| Updated By: shivaprasad.hs

Updated on: Jan 23, 2022 | 7:00 AM

ಪ್ರಸ್ತುತ ಬಾಲಿವುಡ್​ನ ಖ್ಯಾತ ನಿರ್ದೇಶಕರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು ಅನುರಾಗ್ ಕಶ್ಯಪ್. ತಮ್ಮದೇ ವಿಶಿಷ್ಟ ಶೈಲಿಯ ಸಿನಿಮಾಗಳಿಂದ ಅವರು ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಬಾಲ್ಯದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಬದುಕಿನ ಜರ್ನಿಯನ್ನು ಕೇಳಿದ ಅಭಿಮಾನಿಗಳಿಗೆ ನಿರ್ದೇಶಕನ ಬದುಕಿನ ಬಗ್ಗೆ ಹೆಮ್ಮೆ ಎನಿಸಿದೆ. ತಂದೆ ಹಾಗೂ ತಾಯಿಯ ಮದುವೆಯ ಚಿತ್ರಗಳನ್ನು ಹಂಚಿಕೊಂಡಿರುವ ಅನುರಾಗ್ ಕಶ್ಯಪ್ (Anurag Kashyap), ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಜನಿಸಿದ ಅನುರಾಗ್, 1993ರಲ್ಲಿ ಮುಂಬೈಗೆ ಕೇವಲ 5,000 ರೂಗಳನ್ನಿಟ್ಟುಕೊಂಡು ಪ್ರವೇಶಿಸಿದವರು. ತಿಂಗಳುಗಳ ಕಾಲ ಬೀದಿಯಲ್ಲಿ ಅಲೆದು, ಬೀಚ್​ನಲ್ಲಿ ಮಲಗಿದ್ದ ಅನುರಾಗ್ ಕಶ್ಯಪ್ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದವರು. 1998ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ‘ಸತ್ಯ’ ಅನುರಾಗ್​ ಕಶ್ಯಪ್​ಗೆ ಬರಹಗಾರರಾಗಿ ಹೆಸರು ತಂದುಕೊಟ್ಟ ಚಿತ್ರ. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುರಾಗ್, ತಮ್ಮನ್ನು ಓದಿಸಲು ಪೋಷಕರು ಎಷ್ಟು ಕಷ್ಟಪಟ್ಟರು ಎಂಬುದನ್ನು ವಿವರಿಸಿದ್ದಾರೆ.

ಅನುರಾಗ್ ಹಂಚಿಕೊಂಡ ಪೋಸ್ಟ್​​​ನಲ್ಲಿ ಏನೇನಿದೆ? ತಂದೆ ಹಾಗೂ ತಾಯಿಯ ವಿವಾಹದ ಸಂದರ್ಭದ ಚಿತ್ರವನ್ನು ಹಂಚಿಕೊಂಡಿರುವ ಅನುರಾಗ್ ಕಶ್ಯಪ್, ಅದರಲ್ಲಿ ದೀರ್ಘ ಬರಹದ ಮೂಲಕ ಬಾಲ್ಯದ ಕುರಿತು ಬರೆದುಕೊಂಡಿದ್ದಾರೆ. ‘‘1970ರಲ್ಲಿ ನನ್ನ ಪೋಷಕರು ಗ್ರಾಮವೊಂದರಲ್ಲಿ ವಿವಾಹವಾದರು (ಚಿತ್ರದಲ್ಲಿ ತಲೆಯ ಮೇಲೆ ಸೆರಗು ಹಾಕಿಕೊಂಡಿರುವ ಮಹಿಳೆ). ಅವರು (ತಾಯಿ) ಮದುವೆಯ ನಂತರ ಪದವಿ ವ್ಯಾಸಂಗವನ್ನು ಪೂರ್ಣಗೊಳಿಸಿದರು ಮತ್ತು ನಾನು ಜನಿಸಿದ ನಂತರ ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದರು. ಅದನ್ನು ಹೇಗೆ ಪೂರ್ಣಗೊಳಿಸಿದರು ಎಂದು ನನಗೆ ತಿಳಿದಿಲ್ಲ. ಇಬ್ಬರೂ ಬೇರೆ ಬೇರೆ ಹಳ್ಳಿಗಳಿಂದ ಬನಾರಸ್ ವಿಶ್ವವಿದ್ಯಾಲಯಕ್ಕೆ ಓದಲು ತೆರಳಿದ್ದರು. ಅದರಲ್ಲೂ ನನ್ನನ್ನು ಪ್ರತಿಷ್ಠಿತ ಸಿಂಧಿಯಾ ಶಾಲೆಗೆ ಕಳುಹಿಸಿದ್ದರು’’

‘‘ಸಿಂಧಿಯಾ ಶಾಲೆಗೆ ಕಳುಹಿಸುವುದು ನನ್ನ ಪೋಷಕರ ಸಾಮರ್ಥ್ಯಕ್ಕಿಂತ ಹಿರಿದಾಗಿತ್ತು. ಅತ್ಯುತ್ತಮ ಶಾಲೆಗೆ ನನ್ನನ್ನು ಕಳುಹಿಸಬೇಕು ಎಂಬ ಒಂದೇ ಉದ್ದೇಶದಿಂದ ಅವರು ಬೇರೆಯವರಿಂದ ಹಣ ಪಡೆದು ನನ್ನನ್ನು ಭಾರತದ ಅತ್ಯುತ್ತಮ ಶಾಲೆಗೆ ಕಳುಹಿಸಿದರು. ನಾನು ಇಂದು ಏನಾಗಿದ್ದೇನೋ ಅದಕ್ಕೆ ಅವರ ತ್ಯಾಗವೇ ಕಾರಣ. ಅದಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ’’ ಎಂದು ಅನುರಾಗ್ ಕಶ್ಯಪ್ ಬರೆದುಕೊಂಡಿದ್ದಾರೆ.

ಅನುರಾಗ್ ಹಂಚಿಕೊಂಡ ಪೋಸ್ಟ್:

ಅನುರಾಗ್ ಕಶ್ಯಪ್ ಬರಹಕ್ಕೆ ತಾರೆಯರ ಮೆಚ್ಚುಗೆ: ಅನುರಾಗ್ ಕಶ್ಯಪ್ ಚಿತ್ರದಿಂದಲೇ ಹಿಂದಿ ಚಿತ್ರರಂಗದಲ್ಲಿ ಪ್ರಸ್ತುತ ಗುರುತಿಸಿಕೊಂಡಿರುವ ಅನೇಕ ಕಲಾವಿದರು ಬೆಳಕಿಗೆ ಬಂದವರು. ಪ್ರಸ್ತುತ ಅನುರಾಗ್ ಬರೆದ ಬರಹಕ್ಕೆ ಕಲಾವಿದರೂ ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲಿ ಅಮೃತಾ ಸುಭಾಷ್, ಪುಲ್ಕಿತ್ ಸಾಮ್ರಾಟ್, ಶ್ಲೋಕ್ ಶರ್ಮಾ ಸೇರಿದಂತೆ ಅನೇಕರು ಅನುರಾಗ್ ಪೋಷಕರ ನಿಲುವು ಹಾಗೂ ಅವರ ಬರಹವನ್ನು ಕಾಮೆಂಟ್​ನಲ್ಲಿ ಹೊಗಳಿದ್ದಾರೆ.

ಇದನ್ನೂ ಓದಿ:

ಬೋಲ್ಡ್ ಸೀನ್​ಗೆ ಒಪ್ಪಬೇಕು ಎಂಬ ಕಂಡೀಷನ್ ಹಾಕಿ‌ ‘ಸೇಕ್ರೆಡ್ ಗೇಮ್ಸ್ 3’ರ ಮಹಿಳಾ ಪಾತ್ರಗಳಿಗೆ ನಕಲಿ ಜಾಹಿರಾತು!; ನಿರ್ದೇಶಕ ಹೇಳಿದ್ದೇನು?

ರೀಲ್ಸ್ ಮಾಡುವಾಗ ಬಿಗ್ ಬಾಸ್ ಸ್ಪರ್ಧಿ ಧರಿಸಿದ ಬಟ್ಟೆ ನೋಡಿ ಶಾಕ್ ಆದ ಅಭಿಮಾನಿಗಳು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ