ಬೆಂಗಳೂರು: ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳನ್ನು(Congress Guarantee) ಒಂದೊಂದಾಗಿ ಜಾರಿಗೆ ತರುತ್ತಿದೆ. ಶಕ್ತಿ ಯೋಜನೆ(Shakti Yojana) ಜಾರಿಯಾಗಿ ಒಂದು ತಿಂಗಳು ಕಳೆದಿದ್ದು ಮಹಿಳೆಯರು ಈ ಯೋಜನೆಯ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ(Gruha Jyothi Scheme) ಅರ್ಜಿ ಸಲ್ಲಿಕೆ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಆದ್ರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಯೋಜನೆಗಳಿಗೆ ನಕಲಿ ಆ್ಯಪ್‌ಗಳು ತಲೆ ಎತ್ತಿವೆ(Fake Apps).
ರಾಜ್ಯದ ಜನರೇ ಎಚ್ಚರ ಎಚ್ಚರ. ಸರ್ಕಾರದ ಉಚಿತ ಯೋಜನೆಗಳಿಗೆ ಅಪ್ಲಿಕೇಶನ್ ಹಾಕುವಾಗ ಎಚ್ಚರ ವಹಿಸಿ. ಸರ್ಕಾರದಿಂದ ಹೊಸ ಆ್ಯಪ್ ಬಿಟ್ಟಿದ್ದಾರೆ ಅಂತ ಆ್ಯಪ್ ಮೊರೆ ಹೊದ್ರೆ ಸಂಕಷ್ಟಕ್ಕೆ ಸಿಲುಕುತ್ತೀರ. ನಿಮ್ಮ ಮೊಬೈಲ್ ಪರ್ಸನಲ್ ಡೇಟೇಲ್ಸ್ ಹಾಗೂ ಡೇಟಾ ಥೆಪ್ಟ್ ಆಗಬಹುದು ಜೋಪಾನ. ಮೊಬೈಲ್ ಪ್ಲೈ ಸ್ಟೋರ್ ನಲ್ಲಿ ಒಂದೊಂದು ಸ್ಕೀಮ್ ಹೆಸರಿನಲ್ಲಿ ಐದಾರು ಫೇಕ್ ಆ್ಯಫ್ ಗಳು ತಲೆ ಎತ್ತಿವೆ. ಈ ಆ್ಯಪ್ ಗಳಲ್ಲಿ ನೀವು ಅಪ್ಲಿಕೇಷನ್ ಹಾಕಿದ್ದೆ ಆದಾಲ್ಲಿ ನಿಮ್ಮ ಅಕೌಂಟ್ ನಲ್ಲಿರುವ ಹಣದ ಜೊತೆಗೆ ನಿಮ್ಮ ಪರ್ಸನಲ್ ಡಿಟೇಲ್ಸ್ಗಳು ಕೂಡ ಲೀಕ್ ಆಗಬಹುದು. ಸಧ್ಯ ಗೃಹಲಕ್ಷ್ಮಿ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಐದು ಫೇಕ್ ಆ್ಯಪ್ ಗಳಿವೆ. ಜೊತಗೆ ಗೃಹಜ್ಯೋತಿಯ ಹೆಸರಿನಲ್ಲಿಯು ಐದು ಆ್ಯಪ್ ಗಳಿವೆ. ಅನ್ನಭಾಗ್ಯ ಯೋಜನೆಯ ಹೆಸರಿನಲ್ಲಿಯು ಒಂದು ಆ್ಯಪ್ ಇದ್ದು ಪ್ಲೈ ಸ್ಟೋರ್ ಗಳಲ್ಲಿ ಅಪ್ಲೀಕೇಶನ್ ಹಾಕುವುದಕ್ಕೆ ಮುಂಚೆ ಯೋಚಿಸಿ. ಸರ್ಕಾರದ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಿ.
ಅಲ್ಲದೇ ಇನ್ನು ಜಾರಿಯಾಗದ ಯುವನಿಧಿ ಸ್ಕೀಮ್ ಹೆಸರಿನಲ್ಲಿಯು ಫೇಕ್ ಆ್ಯಪ್ ಓಪನ್ ಮಾಡಲಾಗಿದೆ. ಪ್ಲೈ ಸ್ಟೋರ್ ನಲ್ಲಿ ಫೇಕ್ ಯುವ ನಿಧಿ ಆ್ಯಪ್ ಇದೆ.
ಗೂಗಲ್ ಹಾಗೂ ಪ್ಲೈ ಸ್ಟೋರ್‌ನಲ್ಲಿ ಇರುವ ಉಚಿತ ಯೋಜನೆಗಳ ಆ್ಯಪ್‌ಗಳು ಫೇಕ್ ಆಗಿದ್ದು ಯಾರೂ ಕೂಡ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಡಿ. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಅದು ಸರ್ಕಾರಕ್ಕೆ ತಲುಪುದಿಲ್ಲ. ಬದಲಿಗೆ ಸೈಬರ್ ಖದೀಮರಿಗೆ ನಿಮ್ಮ ಡೇಟಾ, ಮಾಹಿತಿ ಪಡೆದು ಮೋಸ ಮಾಡಲು ಸಹಾಯ ಮಾಡುತ್ತೆ. ಹೀಗಾಗಿ ಸರ್ಕಾರದ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಿ. ಸರ್ಕಾರದಿಂದ ಇನ್ನೂ ಕೂಡ ಯಾವುದೇ ಬೇರೆ ಆ್ಯಪ್ಗಳನ್ನು ರಿಲೀಸ್ ಮಾಡಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ