Bengaluru Police: ಪೊಲೀಸ್ ಠಾಣೆ, ಪೊಲೀಸರ ಬಗ್ಗೆ ಫೀಡ್ಬ್ಯಾಕ್ ಕೊಡಲು ಕ್ಯುಆರ್ ಕೋಡ್; ಬೆಂಗಳೂರು ಪೊಲೀಸರಿಂದ ‘ಲೋಕಸ್ಪಂದನ’
ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ಯುಆರ್ ಕೋಡ್ ಅನ್ನು ಪ್ರದರ್ಶಿಸಲಾಗುತ್ತಿದ್ದು, ಅದರ ಮೂಲಕ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ.
ಬೆಂಗಳೂರು: ಪೊಲೀಸ್ ಠಾಣೆ ಮತ್ತು ಪೊಲೀಸರ ಬಗ್ಗೆ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ಪೊಲೀಸರು (Bengaluru Police) ‘ಲೋಕಸ್ಪಂದನ’ ಎಂಬ ಕ್ಯುಆರ್ ಕೋಡ್ (QR Code) ಸೇವೆಯನ್ನು ಆರಂಭಿಸಿದ್ದಾರೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ಯುಆರ್ ಕೋಡ್ ಅನ್ನು ಪ್ರದರ್ಶಿಸಲಾಗುತ್ತಿದ್ದು, ಅದರ ಮೂಲಕ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಈ ವಿಚಾರವಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು. ಜನರಿಗೆ ಉತ್ತಮ ಸೇವೆ ಒದಗಿಸಲು ಇದು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಹೊಸ ಉಪಕ್ರಮದ ಕುರಿತು ‘ನ್ಯೂಸ್ 9’ನೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಇದು ವಿವಿಧ ಪೊಲೀಸ್ ಠಾಣೆಗಳ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಡಿಸಿಪಿಗಳ ನೇತೃತ್ವದಲ್ಲಿ ಎಲ್ಲಾ ವಿಭಾಗಗಳಲ್ಲಿ ಮತ್ತು ಕಮಿಷನರೇಟ್‌ನಲ್ಲಿರುವ ಕಮಾಂಡ್ ಸೆಂಟರ್‌ನಲ್ಲಿ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾವುದೇ ಉದ್ದೇಶಕ್ಕಾಗಿ ಪೊಲೀಸ್ ಠಾಣೆಗಳಿಗೆ ಹೋಗುವ ಜನರಿಗೆ ಏನಾಗುತ್ತದೆ ಎಂಬುದನ್ನು ನಾವು ಈ ಮೂಲಕ ಅರ್ಥಮಾಡಿಕೊಳ್ಳಬಹುದು. ಸೇವೆಯಲ್ಲಿ ಯಾವುದೇ ವಿಳಂಬವಾಗಿದೆಯೇ ಮತ್ತು ಅವರು ಸಂಬಂಧಪಟ್ಟ ಅಧಿಕಾರಿಗಳ ಕೆಲಸದಿಂದ ತೃಪ್ತರಾಗಿದ್ದಾರೆಯೇ ಎಂಬುದನ್ನು ನಾವು ಟ್ರ್ಯಾಕ್ ಮಾಡಬಹುದು. ಇದರಿಂದ ಠಾಣೆ ಮಟ್ಟದಲ್ಲಿನ ಕಾರ್ಯವೈಖರಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ದಯಾನಂದ ಅವರು ತಿಳಿಸಿದ್ದಾರೆ.
A QR code based feedback mechanism has been introduced in all police stations of @BlrCityPolice. Avail this to give your honest feedback about our delivery of service. This will help us to serve you better. It’s simple quick and objective.#lokasphandana pic.twitter.com/QiuAhrwm7j
— B Dayananda IPS CP Bengalur ಪೊಲೀಸ್ ಆಯುಕ್ತ ಬೆಂಗಳೂರು (@CPBlr) July 11, 2023
ಪ್ರತಿಕ್ರಿಯೆಯ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಕೌನ್ಸೆಲಿಂಗ್ ಅಥವಾ ಶಿಸ್ತು ಕ್ರಮದ ರೂಪದಲ್ಲಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳುಳ್ಳಿ ರೀತಿ ಕಾಣಿಸುವ ಈ ವಸ್ತು ಮಾದಕ ಲೋಕದ ರಾಣಿ; ಸಿಲಿಕಾನ್ ಸಿಟಿಯಲ್ಲಿ ಹೊಸ ಮಾದರಿ ಡ್ರಗ್ಸ್ ಹವಾ, ಬೇಟೆಗಿಳಿದ ಪೊಲೀಸರು
ಜನರ ಪ್ರತಿಕ್ರಿಯೆಯ ಆಧಾರದ ಮೇಲೆ, ಯಾವ ಪೊಲೀಸ್ ಠಾಣೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದು ಕೆಟ್ಟದಾಗಿದೆ ಎಂದು ನಮಗೆ ತಿಳಿಯುತ್ತದೆ. ಯಾವುದೇ ವರ್ತನೆಯ ಸಮಸ್ಯೆಗಳು ಅಥವಾ ಇತರ ಕೆಲವು ಸಮಸ್ಯೆಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಸರಿಪಡಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಆಯುಕ್ತರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ