ಬೆಳ್ಳುಳ್ಳಿ ರೀತಿ ಕಾಣಿಸುವ ಈ ವಸ್ತು ಮಾದಕ ಲೋಕದ ರಾಣಿ; ಸಿಲಿಕಾನ್ ಸಿಟಿಯಲ್ಲಿ ಹೊಸ ಮಾದರಿ ಡ್ರಗ್ಸ್ ಹವಾ, ಬೇಟೆಗಿಳಿದ ಪೊಲೀಸರು
ಗಾಂಜಾ ಆಯ್ತು, ಬ್ರೌನ್ ಎಂಡಿಎಂಎ ಆಯ್ತು ಈಗ ನಾನ್ ಸಿಂಥೆಟಿಕ್ ಡ್ರಗ್ಸ್ ಎಂಬ ಹೊಸ ಮಾದರಿಯ ಮಾದಕ ವಸ್ತು ಬೆಂಗಳೂರಿನ ವ್ಯಸನಿಗಳಿಗೆ ನಶೆಯಲ್ಲಿ ತೇಲಾಡಿಸುತ್ತಿದೆ.
ಬೆಂಗಳೂರು: ಐಟಿ ಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಡ್ರಗ್ಸ್(Drugs) ಹಾವಳಿ ಹೆಚ್ಚಾಗಿದ್ದು ಪೊಲೀಸರು ಒಂದಲ್ಲಾ ಒಂದು ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸತತ ಪ್ರಯತ್ನಪಡುತ್ತಿದ್ದಾರೆ. ಆದರೆ ಬೆಂಗಳೂರಿನ ಮಾದಕಲೋಕಕ್ಕೆ ಮತ್ತೊಂದು ಡ್ರಗ್ ಎಂಟ್ರಿ ಕೊಟ್ಟಿದೆ(Non Synthetic Drugs). ಪೊಲೀಸರ ಸಾಲು ಸಾಲು ಭೇಟೆಗಳ ನಡುವೆಯೂ ಡ್ರಗ್ ಹಾವಳಿ ನಿಂತಿಲ್ಲ. ರಾಜಸ್ಥಾನದಿಂದ ಹೊಸ ಮಾದರಿಯ ಮಾದಕ ವಸ್ತು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಹೊಸ ಮಾದರಿಗೆ ಡ್ರಗ್ಸ್ಗೆ ವಿದೇಶದಲ್ಲಿದೆ ಭಾರಿ ಬೆಲೆ ಇದೆ.
ಗಾಂಜಾ ಆಯ್ತು, ಬ್ರೌನ್ ಎಂಡಿಎಂಎ ಆಯ್ತು ಈಗ ನಾನ್ ಸಿಂಥೆಟಿಕ್ ಡ್ರಗ್ಸ್ ಎಂಬ ಹೊಸ ಮಾದರಿಯ ಮಾದಕ ವಸ್ತು ಬೆಂಗಳೂರಿನ ವ್ಯಸನಿಗಳಿಗೆ ನಶೆಯಲ್ಲಿ ತೇಲಾಡಿಸುತ್ತಿದೆ. ಪಪ್ಪಿಸ್ಟ್ರಾ, ಮಾರ್ಫೀನ್ ಎಂಬ ಮಾದಕ ವಸ್ತುಗಳು ರಾಜಸ್ಥಾನದಿಂದ ಸದ್ದಿಲ್ಲದೇ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿವೆ.
ಇದನ್ನೂ ಓದಿ: International day against drug abuse: ಬೆಂಗಳೂರಲ್ಲಿ ಕಳೆದ ಒಂದು ವರ್ಷದಲ್ಲಿ 57 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ
ನಾನ್ ಸಿಂಥೆಟಿಕ್ ಡ್ರಗ್ಸ್ ಬಳಕೆ ಹೇಗೆ?
ಬೆಳ್ಳುಳ್ಳಿ ಆಕಾರದಲ್ಲಿ ಸಿಗುವ ಈ ನಾನ್ ಸಿಂಥೆಟಿಕ್ ಡ್ರಗ್ಸ್ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಬೆಳ್ಳುಳ್ಳಿ ಮಾದರಿ ಇರುವ ಪಪ್ಪಿಸ್ಟ್ರಾವನ್ನು ಜಜ್ಜಿ ಪೌಡರ್ ಆಗಿ ಬದಲಾವಣೆ ಮಾಡಿ ಬಳಿಕ ಅದನ್ನು ಬಹಳಷ್ಟು ದಿನ ಒಣಗಿಸಿ ನಂತರ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುತ್ತಾರೆ. ನಾನ್ ಸಿಂಥೆಟಿಕ್ ಪಪ್ಪಿ ಸ್ಟ್ರಾ ಹೆಚ್ಚು ಪಾರ್ಟಿಗಳಲ್ಲಿ ಬಳಕೆ ಮಾಡಲಾಗುತ್ತೆ.
ಮತ್ತೊಂದೆಡೆ ಪಪ್ಪಿ ಸ್ಟ್ರಾ ಗಳಿಂದ ಮಾರ್ಫಿನ್ ಎಂಬ ಮತ್ತೊಂದು ರೀತಿಯ ಡ್ರಗ್ಸ್ ತಯಾರಿಸಲಾಗುತ್ತೆ. ಪಪ್ಪಿ ಸ್ಟ್ರಾ ನಿಂದ ಎಣ್ಣೆಯನ್ನು ತೆಗೆದು ಬಳಿಕ ಅದನ್ನು ನಶೆ ಏರಿಸೊ ವಸ್ತುವಾಗಿ ಬಳಕೆ ಮಾಡಲಾಗುತ್ತೆ. ಮಾರ್ಫಿನ್ ಕ್ಯಾನ್ಸರ್ ರೋಗಕ್ಕೂ ಸಹ ಮದ್ದಾಗಿ ಬಳಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಈ ಎರಡು ಮಾದರಿಯ ಡ್ರಗ್ಸ್ಗಳಿ ವ್ಯಸನಿಗಳಿಗೆ ನಶೆಯಲ್ಲಿ ತೇಲಿಸುತ್ತಿವೆ. ಹೀಗಾಗಿ ಪೊಲೀಸರು ಕೂಡ ಅಲರ್ಟ್ ಆಗಿದ್ದು ನಾನ್ ಸಿಂಥೇಟಿಕ್ ಡ್ರಗ್ ಭೇಟೆಗೆ ಇಳಿದಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ