ಜನವರಿ-ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ವಸತಿ ಮಾರಾಟದಲ್ಲಿ ಕುಸಿತ..!
2023ರ ಮೊದಲಾರ್ಧದಲ್ಲಿ ಭಾರತದ ಎಂಟು ಪ್ರಮುಖ ನಗರಗಳ ಭಾರತದ ಪ್ರಾಪರ್ಟಿ ಮಾರುಕಟ್ಟೆಯಲ್ಲಿ ಮನೆಗಳ ಮಾರಾಟ ಪ್ರಮಾಣ ಕುಸಿತ ಕಂಡಿದೆ. ಇನ್ನು ಗುತ್ತಿಗೆ ಆಧಾರದ ಮೇಲೆ ಕಚೇರಿಗಳನ್ನು ಪಡೆಯುವುದು ಏಕರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾದ ವರದಿ ತಿಳಿಸಿದೆ.
2023ರ ಮೊದಲಾರ್ಧದಲ್ಲಿ ಭಾರತದ (India) ಎಂಟು ಪ್ರಮುಖ ನಗರಗಳ ಭಾರತದ ಪ್ರಾಪರ್ಟಿ ಮಾರುಕಟ್ಟೆಯಲ್ಲಿ (India’s property market) ಮನೆಗಳ ಮಾರಾಟ (House Sale) ಪ್ರಮಾಣ ಕುಸಿತ ಕಂಡಿದೆ. ಇನ್ನು ಗುತ್ತಿಗೆ ಆಧಾರದ ಮೇಲೆ ಕಚೇರಿಗಳನ್ನು (Office Space Leasing) ಪಡೆಯುವುದು ಏಕರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾದ ವರದಿ ತಿಳಿಸಿದೆ. ಭಾರತದಲ್ಲಿ ಮನೆಗಳ ಮಾರಾಟ 1 ಪ್ರತಿಶತದಷ್ಟು ಕಡಿಮೆಯಾಗಿದೆ. ಆದರೆ ಗುತ್ತಿಗೆ ಆಧಾರದ ಮೇಲೆ ಕಚೇರಿ ಪಡೆಯುವುದು ಶೇಕಡಾ 3 ರಷ್ಟು ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮನೆಗಳ ಬೆಲೆಗಳು ಶೇಕಡಾ 2 ರಿಂದ 10 ರಷ್ಟು ಹೆಚ್ಚಾಗಿದೆ. ಸಂಸ್ಥೆಯು ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ದೆಹಲಿ-ಎನ್‌ಸಿಆರ್, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ನಗರಗಳಲ್ಲಿ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿ ನೀಡಿದೆ.
ಬೆಂಗಳೂರು ನಗರದಲ್ಲಿ ಮನೆಗಳ ಮಾರಾಟ ಮತ್ತು ಕಚೇರಿ ಗುತ್ತಿಗೆ ಎರಡರಲ್ಲೂ ಅನುಕ್ರಮವಾಗಿ ಶೇಕಡಾ 2 ಮತ್ತು 10 ರಷ್ಟು ಕುಸಿತ ಕಂಡಿದೆ. ವಸತಿ ಪ್ರಾಪರ್ಟಿ ಮಾರಾಟವು 26,677 ಯೂನಿಟ್‌ಗಳಿಂದ 26,247 ಯೂನಿಟ್‌ಗೆ ಇಳಿಕೆಯಾಗಿದೆ. ಆದರೆ ಕಚೇರಿ ಗುತ್ತಿಗೆ 7.7 ಮಿಲಿಯನ್ ಚದರ ಅಡಿಯಿಂದ 7 ಮಿಲಿಯನ್ ಚದರ ಅಡಿಗಳಿಗೆ ಇಳಿದಿದೆ.
ಮುಂಬೈನಲ್ಲಿ ಮನೆಗಳ ಮಾರಾಟವು 44,200 ಯೂನಿಟ್‌ಗಳಿಂದ 40,798 ಯೂನಿಟ್ ಅಂದರೇ ಶೇ. 8 ಪ್ರತಿಶತದಷ್ಟು ಕಡಿಮೆಯಾಗಿದೆ. ಒಟ್ಟು ಕಚೇರಿ ಜಾಗವು 3 ಮಿಲಿಯನ್ ಚದರ ಅಡಿಗಳಿಂದ 3.2 ಮಿಲಿಯನ್ ಚದರ ಅಡಿಗೆ, ಅಂದರೇ ಶೇಕಡಾ 9 ರಷ್ಟು ಏರಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೇ ದೆಹಲಿಯ ಎನ್‌ಸಿಆರ್‌ನಲ್ಲಿ ವಸತಿ ಮಾರಾಟ ಮತ್ತು ಕಚೇರಿ ಸ್ಥಳದ ಗುತ್ತಿಗೆಯು ಕ್ರಮವಾಗಿ ಶೇಕಡಾ 3ರಿಂದ 24ಕ್ಕೆ ಹೆಚ್ಚಾಗಿದೆ. ಇನ್ನು ಪುಣೆಯಲ್ಲಿ ವಸತಿ ಮಾರಾಟವು ಶೇಕಡಾ 1 ರಷ್ಟು ಕಡಿಮೆಯಾಗಿದೆ. ಹಾಗೇ ಕಚೇರಿ ಸ್ಥಳದ ಗುತ್ತಿಗೆಯು ಶೇಕಡಾ 30 ರಷ್ಟು ಕುಸಿದಿದೆ.
ತಮಿಳುನಾಡು ರಾಜಧಾನಿ ಚೆನ್ನೈ ಕಚೇರಿ ಸ್ಥಳಾವಕಾಶದ ಗುತ್ತಿಗೆಯಲ್ಲಿ ಎರಡು ಪಟ್ಟು ಜಿಗಿತವನ್ನು ಕಂಡಿದೆ. 2.2 ಮಿಲಿಯನ್ ಚದರ ಅಡಿಗಳಿಂದ 4.5 ಮಿಲಿಯನ್ ಚದರ ಅಡಿಗೆ ಏರಿಕೆಯಾಗಿದೆ. ವಸತಿ ಮಾರಾಟವು 6,951 ಯುನಿಟ್‌ಗಳಿಂದ 7,150 ಯೂನಿಟ್‌ಗೆ ಅಂದರೇ ಶೇಕಡಾ 3 ರಷ್ಟು ವೇಗವನ್ನು ಪಡೆದುಕೊಂಡಿದೆ.
ಹೈದರಾಬಾದ್‌ನ ವಸತಿ ಮಾರಾಟವು ಶೇಕಡಾ 5 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಚೇರಿ ಸ್ಥಳದ ಗುತ್ತಿಗೆಯು ಶೇಕಡಾ 8 ರಷ್ಟು ಕುಸಿತ ಕಂಡಿದೆ. ಏತನ್ಮಧ್ಯೆ, ಕೋಲ್ಕತ್ತಾದಲ್ಲಿ ಮಾರಾಟವು ಶೇಕಡಾ 3 ರಷ್ಟು ಏರಿದೆ. ಆದರೆ ಕಚೇರಿ ಬೇಡಿಕೆಯು ಶೇಕಡಾ 3 ರಷ್ಟು ಕಡಿಮೆಯಾಗಿದೆ.
ಅಹಮದಾಬಾದ್‌ನ ಆಫೀಸ್ ಸ್ಪೇಸ್ ಲೀಸಿಂಗ್ ಶೇಕಡಾ 59 ರಷ್ಟು ಕುಸಿದಿದೆ ಆದರೆ ವಸತಿ ಮಾರಾಟವು ಶೇಕಡಾ 3 ರಷ್ಟು ಕಡಿಮೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ