AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News; ಮೊಬೈಲ್​ ನೆಟ್ ವರ್ಕ್ ಸಮಸ್ಯೆ ಸರಿ ಮಾಡಲು ಹೋಗಿ 3 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮೊಬೈಲ್​ ನೆಟ್ ವರ್ಕ್ ಸಮಸ್ಯೆ ಸರಿ ಮಾಡಿಕೊಳ್ಳಲು ಹೋಗಿ ಬೆಂಗಳೂರಿನ 50 ವರ್ಷದ ಗೃಹಿಣಿಯೊಬ್ಬರು 3 ಲಕ್ಷ ರೂಗಳನ್ನು ಕಳೆದುಕೊಂಡಿದ್ದಾರೆ. ಸದ್ಯ ಸೈಬರ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

Bengaluru News; ಮೊಬೈಲ್​ ನೆಟ್ ವರ್ಕ್ ಸಮಸ್ಯೆ ಸರಿ ಮಾಡಲು ಹೋಗಿ 3 ಲಕ್ಷ ರೂ. ಕಳೆದುಕೊಂಡ ಮಹಿಳೆ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Jul 05, 2023 | 10:19 AM

Share

ಬೆಂಗಳೂರು: ಮೊಬೈಲ್​ಗಳಲ್ಲಿ ನೆಟ್ ವರ್ಕ್ ಸಮಸ್ಯೆಯಾಗಿ(Mobile Network Issue) ಆಗಾಗ ಕಾಲ್ ಕಟ್ಟಾಗುವುದು ಸಾಮಾನ್ಯ. ಆದ್ರೆ ಬೆಂಗಳೂರಿನ ಮಹಿಳೆಯೊಬ್ಬರು ನೆಟ್ ವರ್ಕ್ ಸರಿ ಮಾಡಿಸಿಕೊಳ್ಳಲು ಹೋಗಿ ಹಣ ಕಳೆದುಕೊಂಡಿದ್ದಾರೆ. ತಾನು ಬಳಸುತ್ತಿದ್ದ ಮೊಬೈಲ್ ಫೋನ್​ನಲ್ಲಿನ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹೋಗಿ ಬೆಂಗಳೂರಿನ 50 ವರ್ಷದ ಗೃಹಿಣಿಯೊಬ್ಬರು ₹3 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಬಾಬುಸಾಪಾಳ್ಯ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಫೋನ್​ನ ನೆಟ್ ವರ್ಕ್ ಸಮಸ್ಯೆಯಿಂದ, ಯಾರೊಂದಿಗೂ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತೀರ ನೊಂದಿದ್ದರು. ಹೀಗಾಗಿ ಜೂ.22ರಂದು ತಮ್ಮ ಸಿಮ್​ಗೆ ಸಂಬಂಧಿಸಿದ ಸೇವಾ ಪೂರೈಕೆದಾರರ ಕಸ್ಟಮರ್ ಕೇರ್ ಸಂಖ್ಯೆಯನ್ನು ಗೂಗಲ್​ನಲ್ಲಿ ಹುಡುಕಿದ್ದಾರೆ. ಈ ವೇಳೆ ಅವರಿಗೊಂದು ನಂಬರ್ ಸಿಕ್ಕಿದೆ. ಬಳಿಕ ಆ ನಂಬರ್‌ಗೆ ಕಾಲ್ ಮಾಡಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡ ವ್ಯಕ್ತಿಯ ಬಳಿ ತಾವು ಅನುಭವಿಸುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ.

ಸಮಸ್ಯೆ ಆಲಿಸಿದ ವ್ಯಕ್ತಿ ಮಹಿಳೆಗೆ ರಿಮೋಟ್ ಆಕ್ಸೆಸ್ ಅಥವಾ ರಿಮೋಟ್ ಕಂಟ್ರೋಲ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ತಿಳಿಸಿದ್ದಾನೆ. ಆಗ ಮಹಿಳೆ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಬಳಿಕ ತನ್ನ ಮೊಬೈಲ್ ಸ್ಕ್ರೀನನ್ನು ಷೇರ್ ಮಾಡಿದ್ದಾರೆ. ಇಷ್ಟಲ್ಲಾ ಆದ ಬಳಿಕ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ, ಮಹಿಳೆಯ ಮೊಬೈಲ್ ಆ್ಯಕ್ಸೆಸ್ ಪಡೆದಿದ್ದಾನೆ. ನಂತರ 9583929517 ನಂಬರ್​ಗೆ 2 ರೂಪಾಯಿ Google Pay ಮಾಡಲು ವ್ಯಕ್ತಿ ತಿಳಿಸುತ್ತಾನೆ. ಅದರಂತೆಯೇ ಮಹಿಳೆ 2ರೂಪಾಯಿ ಹಾಕುತ್ತಾರೆ.

ಇದನ್ನೂ ಓದಿ: ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಬ್ಯಾಂಕ್ ಖಾತೆಯಿಂದಲೇ 89 ಸಾವಿರ ರೂ. ದೋಚಿದ ಸೈಬರ್ ಕಳ್ಳರು

ಮಹಿಳೆ ಹಣ ಹಾಕುವುದನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿ ನಂತರ, ಅಪ್ಲಿಕೇಶನ್‌ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಮಹಿಳೆಯ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಹಂತ ಹಂತವಾಗಿ ಮೂರು ಬಾರಿ ಸುಮಾರು ₹ 2.52 ಲಕ್ಷವನ್ನು ವರ್ಗಾಯಿಸಿಕೊಂಡಿದ್ದಾನೆ.  ನಳಿಕ ಮತ್ತೆ 75 ಸಾವಿರ ರೂಗಳನ್ನು ಮತ್ತೊಂದು ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದಾನೆ. ಆದ್ರೆ ಮಹಿಳೆಗೆ ಈ ಬಗ್ಗೆ ಮನವರಿಕೆ ಆಗಿಲ್ಲ. ಅವರು ನೆಟ್ ವರ್ಕ್ ಸರಿಮಾಡಲು ಏನು ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದಾರೆ.

ಮಹಿಳೆಯ ಮೊಬೈಲ್​ನಲ್ಲಿ ಆಕ್ಸೆಸ್ ಇದ್ದ ಆಕೆಯ ಹಾಗೂ ಆಕೆಯ ಮಗಳ ಎರಡು ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಖಾಲಿ ಮಾಡಿದ್ದಾನೆ. ಬಳಿಕ ಹಣ ಕಟ್ ಆದ ಬಗ್ಗೆ ಬ್ಯಾಂಕ್​ನಿಂದ ಮೊಬೈಲ್​ಗೆ ಮೆಸೇಜ್​ಗಳು ಬಂದದನ್ನು ಗಮನಿಸಿದ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ತನ್ನ ಖಾತೆಯಿಂದ ಹಣ ತೆಗೆದುಕೊಂಡಿದ್ದೀರಿ ಎಂದು ನಕಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಬಳಿ ಪ್ರಶ್ನಿಸಿದ್ದಾರೆ. ಆಗ ಇನ್ನು 24 ಗಂಟೆಗಳೊಳಗೆ ನಿಮ್ಮ ಹಣ ವಾಪಾಸ್ ಬರುತ್ತೆ. ನೀವು ಚಿಂತಿಸಬೇಡಿ ಎಂದು ಸಮಾಧಾನವಾಗಿ ಉತ್ತರಿಸಿ ಕಾಲ್ ಕಟ್ ಮಾಡಿದ್ದಾನೆ. ಎಷ್ಟೇ ಕಾದರೂ ಮಹಿಳೆಗೆ ಹಣ ಬಾರದ ಹಿನ್ನೆಲೆ ಮಹಿಳೆ ಮತ್ತೆ ಅದೇ ನಂಬರ್​ಗೆ ಕಾಲ್ ಮಾಡಿದ್ದಾರೆ. ಆದ್ರೆ ಸಂಪರ್ಕ ಸಿಗದ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Wed, 5 July 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್