ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್

ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌

ವಿದ್ಯುತ್ ದರ ಏರಿಕೆ ನಡುವೆ ಜಲಮಂಡಳಿಗೆ ಮತ್ತೊಂದು ಹೊಡೆತ; ಸರ್ಕಾರಿ ಸಂಸ್ಥೆಗಳಿಂದಲೇ ಬರಬೇಕಿದೆ ಕೋಟಿ ಕೋಟಿ ರೂ. ಬಿಲ್
BWSSB
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Jul 05, 2023 | 9:35 AM

ಬೆಂಗಳೂರು: ಜನರು ಕೇವಲ ಒಂದು ತಿಂಗಳ ವಾಟರ್ ಬಿಲ್(Water Bill) ಬಾಕಿ ಉಳಿಸಿಕೊಂಡ್ರೆ ಸಾಕು ವಾಟರ್ ಸಪ್ಲೈ ಕಟ್ ಮಾಡುವ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದ್ರೂ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.‌ ಸರ್ಕಾರಿ ಸಂಸ್ಥೆಗಳಿಂದ ಜಲಮಂಡಳಿಗೆ(BWSSB) ಬರೋಬ್ಬರಿ 16201.89 ಕೋಟಿ ಬಿಲ್ ಬರಬೇಕಿದೆ. ಆದ್ರೆ ವಸೂಲಿ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗಾಗಲೇ ಜಲಮಂಡಳಿ ನಷ್ಟದಲ್ಲಿದ್ದು, ಜಲಮಂಡಳಿ ಬರುವ ಆದಾಯ ಸಧ್ಯ ಬೆಸ್ಕಾಂ ಬಿಲ್ ಕಟ್ಟುವುದುಕ್ಕೆ ಸರಿಹೊಂದುತ್ತಿದೆ. ಇದನ್ನ ಸರಿಪಡಿಸುವ ಸಲುವಾಗಿ ಜಲಮಂಡಳಿ ವಾಟರ್ ಬಿಲ್‌ ಏರಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಹ ಸಲ್ಲಿಸಿದೆ.‌ ಜಲಮಂಡಳಿಯ ಮಾಹಿತಿಯ ಪ್ರಕಾರ ಶೇ. 25% ರಷ್ಟು ನೀರಿನ ದರ ಪರಿಷ್ಕರಣೆಗೆ ಮಾಡುವ ಸಾಧ್ಯತೆ ಇದೆ. ಆದ್ರೆ ಮತ್ತೊಂದು ಕಡೆ ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ.‌ ಅಲ್ಲದೇ ಬಾಕಿ ಬಿಲ್ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಬಾಕಿ ಮೊತ್ತದ ಮೇಲೆ ಎಷ್ಟೇ ದಂಡ ವಿಧಿಸಿದ್ರೂ ಕೂಡಾ ಡೋಂಟ್ ಕೇರ್ ಎನ್ನುತ್ತಿವೆ ಇಲಾಖೆಗಳು. ಹೀಗಾಗಿ ಜಲಮಂಡಳಿಗೆ ದೊಡ್ಡ ಟೆಕ್ಷನ್ ಶುರುವಾಗಿದೆ.

ಯಾವೆಲ್ಲ ಇಲಾಖೆಗಳು ನೀರಿನ ಬಿಲ್ ಕಟ್ಟಿಲ್ಲ ಅಂತ ನೋಡೋದಾದ್ರೆ

ಇನ್ನು, ಈ ಕುರಿತಾಗಿ ಜಲಂಡಳಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಆದಷ್ಟು ಬೇಗ ಬಾಕಿ ಪಾವತಿಸುಂತೆ ಪತ್ರವನ್ನು ಕೂಡಾ ಬರೆಯಲಾಗಿದೆ. ಆಸ್ಪತ್ರೆಗಳಲ್ಲೂ ಕೂಡಾ ಬಿಲ್ ಬಾಕಿ ಇದೆ, ಎಲ್ಲವನ್ನೂ ನಾವು ಕಟ್ಟಿಸಲು ತಳಿಸಿದ್ದೇವೆ. ಆದ್ರೆ ಬಜೆಟ್ ಮಂಡನೆಯ ನಂತರ ಪಾವತಿ ಮಾಡ್ತಿವಿ ಅಂತಿದ್ದಾರೆ‌. ಇದು ಕೇವಲ ಒಂದು ವರ್ಷದಲ್ಲಿ ಬಾಕಿ ಉಳಿದ ಬಿಲ್‌ ಅಲ್ಲ . ಹಲವು ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ನಾವು ಕೂಡ ನೋಟಿಸ್ ಕೊಟ್ಟಿದ್ದೀವಿ ಅಂತ ಜಲಮಂಡಳಿ ಮುಖ್ಯ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದರು.‌

ಒಟ್ನಲ್ಲಿ, ಸರ್ಕಾರಿ ಸಂಸ್ಥೆಗಳ ಮೇಲೆ ಜಲಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಸಂಸ್ಥೆಗಳಿಗೆ ಚೆಲ್ಲಾಟವಾದ್ರೆ, ಜಲಮಂಡಳಿಗೆ ಪ್ರಾಣ ಸಂಕಟವಾಗಿದ್ದು, ನೋಟಿಸ್ ಕೊಟ್ಟ ಬಳಿಕವಾದ್ರು ವಾಟಾಲ್ ಬಿಲ್ ಪೇ ಮಾಡ್ತಾವಾ ಸಂಸ್ಥೆಗಳು ಅಂತ ಕಾದು ನೋಡ್ಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ