ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಬ್ಯಾಂಕ್ ಖಾತೆಯಿಂದಲೇ 89 ಸಾವಿರ ರೂ. ದೋಚಿದ ಸೈಬರ್ ಕಳ್ಳರು
Cyber Crime: ಒಟಿಪಿ ಪಡೆದು ಅಕೌಂಟ್ನಲ್ಲಿದ್ದ 89 ಸಾವಿರ ರೂಪಾಯಿ ವಂಚನೆ ಮಾಡಿದ್ದಾರೆ. ಆಗ್ನೇಯ ವಿಭಾಗದ CEN ಠಾಣೆಗೆ ಶಂಕರ್ ಬಿದರಿ ದೂರು ನೀಡಿದ್ದಾರೆ. ಬಿದರಿ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು: ನಿವೃತ್ತ ಡಿಜಿ & ಐಜಿಪಿ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ. ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆಮಾಡಿ ಕಳ್ಳರು ವಂಚಿಸಿದ್ದಾರೆ. ನಿವೃತ್ತ ಡಿಜಿ & ಐಜಿಪಿ ಶಂಕರ್ ಬಿದರಿಗೆ ಕಳ್ಳರು ವಂಚನೆ ಮಾಡಿದ್ದಾರೆ. ನಿಮ್ಮ ಅಕೌಂಟ್ಗೆ ಪಾನ್ ಕಾರ್ಡ್ ಲಿಂಕ್ ಮಾಡಬೇಕು. ಲಿಂಕ್ ಮಾಡದಿದ್ದರೆ ಖಾತೆ ಬಂದಾಗುತ್ತದೆ ಎಂದು ಹೇಳಿ ಒಟಿಪಿ ಪಡೆದು ಅಕೌಂಟ್ನಲ್ಲಿದ್ದ 89 ಸಾವಿರ ರೂಪಾಯಿ ವಂಚನೆ ಮಾಡಿದ್ದಾರೆ. ಆಗ್ನೇಯ ವಿಭಾಗದ CEN ಠಾಣೆಗೆ ಶಂಕರ್ ಬಿದರಿ ದೂರು ನೀಡಿದ್ದಾರೆ. ಬಿದರಿ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸೈಬರ್ ಹಾಗೂ ಇನ್ನಿತರ ವಿಧಾನ, ಆಮಿಷದ ಮೂಲಕ ವಂಚನೆ ನಡೆಸುವುದು ಇತ್ತೀಚೆಗೆ ತುಂಬಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮೊಬೈಲ್ ಫೋನ್, ಇಂಟರ್ನೆಟ್ನಲ್ಲಿ ಹಲವು ರೀತಿಯಿಂದ ಜನರನ್ನು ವಂಚನೆ ಮಾಡಲಾಗುತ್ತಿದೆ. ನಕಲಿ ಫೇಸ್ಬುಕ್ ಖಾತೆಯಲ್ಲಿ ಹಣ ಕೇಳುವುದು, ಮೆಸೇಜ್ ಮೂಲಕ, ನಿಮಗೆ ಲಾಟರಿ ಬಂದಿದೆ, ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ ಆಗಿದೆ, ನಾವು ಇಂತಹ ಕಚೇರಿ ಸಿಬ್ಬಂದಿ.. ಹೀಗೆ ಹತ್ತಾರು ಬಗೆಯಲ್ಲಿ ಮಾತನಾಡಿ ಅಥವಾ ಮೆಸೇಜ್ ಮಾಡಿ ಜನರನ್ನು ಮೋಸದ ಜಾಲಕ್ಕೆ ಬೀಳಿಸಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿ ಹಣ ಕಳೆದುಕೊಂಡು ನೊಂದಿದ್ದಾರೆ.
ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಜನರು, ಇಂಟರ್ನೆಟ್ ಬಳಕೆದಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಯಾರೂ ಕೂಡ ಅನಗತ್ಯವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅಥವಾ ಯಾವುದೇ ಮಾಹಿತಿ ನೀಡಬಾರದು. ಏನೇ ವಿವರ ಪಡೆಯುವುದಿದ್ದರೂ ಅಥವಾ ಕೊಡುವುದು ಇದ್ದರೂ ಅದು ಅಧಿಕೃತ ಸಿಬ್ಬಂದಿ ಎಂದು ತಿಳಿದ ಬಳಿಕವೇ ಕಾರ್ಯೋನ್ಮುಖರಾಗಬೇಕು. ಲಾಟರಿ ಬಂತು, ಜಾಕ್ಪಾಟ್ ಹೊಡೀತು ಎಂದು ಭ್ರಮೆಗೆ ಒಳಗಾಗಿ ನಿಮ್ಮ ಖಾತೆ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಎಟಿಎಂ ಕಾರ್ಟ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಶಾಪಿಂಗ್ ಕಾರ್ಡ್ಗಳು ಅಥವಾ ಯುಪಿಐ ಐಡಿ, ಫೋನ್ ಪೇ, ಗೂಗಲ್ ಪೇ ಇತ್ಯಾದಿಗಳು ಮತ್ತು ಆನ್ಲೈನ್ ಬ್ಯಾಂಕಿಂಗ್ ನಡೆಸುವಾಗಲೂ ಎಚ್ಚರದಿಂದಿರಿ. ನಿಮ್ಮ ಖಾತೆಯ ವಿವರಗಳು, ಪಾಸ್ವರ್ಡ್ ನಿಮ್ಮ ಬಳಿ ಮಾತ್ರ ಇರಲಿ. ಯಾವುದೇ ಕಾರಣಕ್ಕೂ ಯಾರೋ ಕೇಳಿದರು ಎಂದು ನಿಮ್ಮ ಮೊಬೈಲ್ಗೆ ಬರುವ ಒಟಿಪಿಯನ್ನು ಸುಮ್ಮನೆ ಹಂಚಿಕೊಳ್ಳಬೇಡಿ.
ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಜಾವೇದ್ ಅಖ್ತರ್ ಸಹಿ ನಕಲು ಮಾಡಿ ವಂಚನೆ, ವಿಧಾನಸೌಧ ಪೊಲೀಸರಿಂದ ಆರೋಪಿ ಅರೆಸ್ಟ್
ಇದನ್ನೂ ಓದಿ: ನಿರ್ದೇಶಕ ಎಸ್. ನಾರಾಯಣ್ ಹೆಸರಲ್ಲಿ ವಂಚನೆಗೆ ಯತ್ನ; ಹಣ ಕಳೆದುಕೊಳ್ಳಬೇಡಿ ಹುಷಾರ್
Published On - 7:57 pm, Fri, 15 October 21