ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು

ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು
ಕೆಂಪೇಗೌಡ ಪಾರ್ಕ್‌ನಲ್ಲಿ ಮತ್ತೊಂದು ಅವಘಡ: ಕೋಟೆ ಗೋಡೆ ಕುಸಿತ; 3 ವರ್ಷ ಹಿಂದಷ್ಟೇ ಬಿಬಿಎಂಪಿ ನಿರ್ಮಿಸಿದ್ದ ಗೋಡೆ ಇದು

BBMP: ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ 13 ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕ್​ನಲ್ಲಿ ಕಳಪೆ ಕಾಮಗಾರಿಯಿಂದ 25 ಅಡಿ ಎತ್ತರದ ಕೋಟೆಯ ಗೋಡೆ ಕುಸಿದಿದೆ. ಸರ್ವೆ ನಂಬರ್ 33ರಲ್ಲಿ, 7ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕೆಂಪೇಗೌಡ ಬೃಹತ್ ಪಾರ್ಕ್ ಇದಾಗಿದೆ.

TV9kannada Web Team

| Edited By: sadhu srinath

Oct 16, 2021 | 1:32 PM


ಬೆಂಗಳೂರು: ಕೇವಲ 3 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿದ್ದ ಗೋಡೆಯೊಂದು ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಕುಸಿದಿದೆ. ಕೆಂಪೇಗೌಡ ಪಾರ್ಕ್ ನಲ್ಲಿ ಕೋಟೆಯ ಪಶ್ಚಿಮ ದಿಕ್ಕಿನ‌ ಗೋಡೆ ಕುಸಿದಿದ್ದಯ, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಗೋಡೆ ಸಡಿಲಗೊಂಡು ಮತ್ತಷ್ಟು ಬಿದ್ದರೆ ಬಯಲು ರಂಗಮಂದಿರಕ್ಕೆ ತೊಂದರೆಯಾಗುವುದು ಖಚಿತ ಎನ್ನಲಾಗಿದೆ.

ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ 13 ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕ್​ನಲ್ಲಿ ಕಳಪೆ ಕಾಮಗಾರಿಯಿಂದ 25 ಅಡಿ ಎತ್ತರದ ಕೋಟೆಯ ಗೋಡೆ ಕುಸಿದಿದೆ. ಸರ್ವೆ ನಂಬರ್ 33ರಲ್ಲಿ, 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕೆಂಪೇಗೌಡ ಬೃಹತ್ ಪಾರ್ಕ್ ಇದಾಗಿದ್ದು, ಪಾರ್ಕ್​ನಲ್ಲಿ ಆಡಿಟೋರಿಯಂ, ಪ್ರತಿಮೆಗಳು ಸೇರಿದಂತೆ 24 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು BBMP ಕೈಗೊಂಡಿತ್ತು.

ನಿರಂತರವಾಗಿ ಅವಘಡಗಳು ಸಂಭವಿಸುತ್ತಲೇ ಇದೆ, ಹೊಣೆ ಯಾರು, ಸ್ಥಳೀಯರು ಕಿಡಿಕಿಡಿ:
ಕುತೂಹಲದ ಸಂಗತಿಯೆಂದರೆ ಪಾರ್ಕ್​ಗಾಗಿ BBMPಗೆ ಜಮೀನು ಇನ್ನೂ ಹಸ್ತಾಂತರವಾಗಿಲ್ಲ. ಆದರೂ KRIDL ಯೋಜನೆ ಅಡಿ ಅಭಿವೃದ್ದಿ ಕಾಮಗಾರಿ ನಿರ್ಮಾಣವಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ (29/08/2020) ಸ್ಥಳೀಯ ಜನಪ್ರತಿನಿಧಿಗಳ ವಿರೋಧದ ನಡುವೆ ಪಾರ್ಕ್ ಉದ್ಘಾಟನೆಯಾಗಿತ್ತು. ಪ್ರತಿಭಟನೆ ಮಾಡುತ್ತಿದ್ದವರನ್ನ ಬಂಧಿಸಲಾಗಿತ್ತು. ಇದರ ನಡುವೆಯೇ ಬಿಜೆಪಿ ಸಂಸದ ಸದಾನಂದ ಗೌಡ, ಬಿಜೆಪಿ ಕಾರ್ಪೊರೇಟ್ ಲೋಕೇಶ್ ನೇತೃತ್ವದಲ್ಲಿ ಪಾರ್ಕ್​ ಉದ್ಘಾಟನೆ ಶಾಸ್ತ್ರ ಮುಗಿದಿತ್ತು.

ಆಗಿನ ಕಾರ್ಪೊರೇಟರ್ ಲೋಕೇಶ್ ಟೆಂಡರ್ ಕರೆಯದೆ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ತಮ್ಮ ಬೇನಾಮಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ಇದೀಗ ಹೀಗೆ ಕಟ್ಟಿದ ಗೋಡೆಗಳೇ ಮೂರೇ ವರ್ಷಕ್ಕೆ ಕುಸಿಯುತ್ತಿದೆ. ನಿರಂತರವಾಗಿ ಅವಘಡಗಳು ಸಂಭವಿಸುತ್ತಲೇ ಇದೆ. ಇದಕ್ಕೆ ಹೊಣೆ ಯಾರು ಎಂದು ಸ್ಥಳೀಯರು ಕಿಡಿಕಿಡಿಯಾಗಿದ್ದಾರೆ. ಇದೇ ತಿಂಗಳು 8ನೇ ತಾರೀಖು ಪಾರ್ಕ್ ನ ಹೊಂಡಕ್ಕೆ ಬಿದ್ದು 6 ವರ್ಷದ ಬಾಲಕ ಮೃತಪಟ್ಟಿದ್ದ.

ಬೆಳಗ್ಗೆ 6.30ಕ್ಕೆ ಉರುಳಿದ ಮರ‌

ಬೆಂಗಳೂರಿನಲ್ಲಿ ಸುರಿದ ಮಹಾ ಮಳೆಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬೀಳುತ್ತಿವೆ. ಯಶವಂತಪುರದ ಮೈಸೂರು ಲ್ಯಾಂಪ್ಸ್ ರಸ್ತೆಯಲ್ಲಿ ಬೃಹತ್​ ಮರ ಉರುಳಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಎರಡೂ ರಸ್ತೆಗಳಿಗೆ ಸಂಪೂರ್ಣ ಅಡ್ಡಲಾಗಿ ಪುಟ್ ಪಾತ್​ನಲ್ಲಿದ್ದ ಮರ ಬಿದ್ದಿದೆ.

Tree fall in yeshwanthpur

ಯಶವಂತಪುರದ ಮೈಸೂರು ಲ್ಯಾಂಪ್ಸ್ ರಸ್ತೆಯಲ್ಲಿ ಬೃಹತ್​ ಮರ ಉರುಳಿದೆ

ಗೋಡೆ ಕುಸಿದು ಓರ್ವ ಕಾರ್ಮಿಕ ಸಾವು
ಕೋಲಾರ: ನಿರ್ಮಾಣ ಹಂತದ ಕಟ್ಟಡದ ಗೋಡೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಕೋಲಾರ ತಾಲೂಕಿನ ವೇಮಗಲ್‌ ಹೋಬಳಿಯ ‌ಕುರುಬರಹಳ್ಳಿ ಬಳಿ ತಮಿಳುನಾಡಿನ ಸುಂದರಮೂರ್ತಿ (32) ಮೃತಪಟ್ಟ ವ್ಯಕ್ತಿ. ಸ್ಥಳಕ್ಕೆ ವೇಮಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:
ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ

ಇದನ್ನೂ ಓದಿ:
ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!

Another Multi Storey Building Tilts In Bengaluru! ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿರುವ 7ಅಂತಸ್ತಿನ ಕಟ್ಟಡ

ನಿಮ್ಮ ಫ್ಯಾಮಿಲಿಯಲ್ಲಿ ದಿನವೂ ಖುಷಿಯಾಗಿರಲು ಹೀಗೆ ಮಾಡಿ|Dr.SowjanyaVasista|TV9 counselling

(another tragedy in bbmp kempegowda park in dasarahalli wall collapse)

Follow us on

Related Stories

Most Read Stories

Click on your DTH Provider to Add TV9 Kannada