ಪರಪ್ಪನ ಅಗ್ರಹಾರದಲ್ಲಿ ಜೈಲಧಿಕಾರಿಗಳ ದುರಾಡಳಿತ ಆರೋಪ, ಖೈದಿಗಳ ಉಪವಾಸ ಪ್ರತಿಭಟನೆ; ಟಿವಿ9 ವಿಶೇಷ ವರದಿ ಇಲ್ಲಿದೆ

Parappana Agrahara: ಬೆಂಗಳೂರಿನಲ್ಲಿರುವಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ ಎಂದು ಖೈದಿಗಳು ಆರೋಪಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ನೆರವಾಗಿ ಎಂದು ಅವರು ಕೋರಿಕೊಂಡಿದ್ದಾರೆ. ಈ ಕುರಿತ ಟಿವಿ9 ವಿಶೇಷ ವರದಿ ಇಲ್ಲಿದೆ.

ಪರಪ್ಪನ ಅಗ್ರಹಾರದಲ್ಲಿ ಜೈಲಧಿಕಾರಿಗಳ ದುರಾಡಳಿತ ಆರೋಪ, ಖೈದಿಗಳ ಉಪವಾಸ ಪ್ರತಿಭಟನೆ; ಟಿವಿ9 ವಿಶೇಷ ವರದಿ ಇಲ್ಲಿದೆ
ಪರಪ್ಪನ ಅಗ್ರಹಾರ ಜೈಲು (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Oct 16, 2021 | 11:17 AM

ಬೆಂಗಳೂರು: ನಗರದಲ್ಲಿರುವ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನೊಳಗೆ ನಡೆಯುತ್ತಿರುವ ಕರಾಳ ಕೃತ್ಯಗಳ ಕುರಿತು ಈ ಹಿಂದೆ ಟಿವಿ9 ವಿಶೇಷ ವರದಿ ಪ್ರಸಾರ ಮಾಡಿತ್ತು. ಅಪರಾಧಿಗಳು ಜೈಲಿನೊಳಗೆ ಕುಳಿತು ಏನೆಲ್ಲಾ ಸವಲತ್ತು ಪಡೆಯುತ್ತಾ, ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗೂ ಜೈಲಿನ ಕೆಲವು ಸಿಬ್ಬಂದಿಗಳು ಅಕ್ರಮ ಎಸಗುತ್ತಿರುವುದರ ಬಗ್ಗೆ ವರದಿಯಲ್ಲಿ ತಿಳಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂದಿನ ಗೃಹ ಸಚಿವ, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜೈಲಿನಲ್ಲಿ ಪ್ರಿಸನ್ ವೆಲ್​ಫೇರ್ ಬೋರ್ಡ್ ಸ್ಥಾಪಿಸುವುದಾಗಿಯೂ ಅವರು ತಿಳಿಸಿದ್ದರು. ಆದರೆ ಅದ್ಯಾವುದೂ ಸಾಕಾರವಾಗಿಲ್ಲ. ಅಷ್ಟೇ ಅಲ್ಲದೇ, ಇದೀಗ ಜೈಲಿನೊಳಗೆ ಬಹಳ ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ಖೈದಿಗಳು ಟಿವಿ9ನೊಂದಿಗೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದು, ಜೈಲಧಿಕಾರಿಗಳ ವಿರುದ್ಧ ಉಪವಾಸ ಪ್ರತಿಭಟನೆ ನಡೆಸಿದ್ದಾರೆ.

ಟಿವಿ9ನಲ್ಲಿ ಈ ಹಿಂದೆ ಬಯಲಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಪ್ರಪಂಚ:

ಪ್ರಸ್ತುತ ಖೈದಿಗಳು ಎದುರಿಸುತ್ತಿರುವ ಸಮಸ್ಯೆಗಳೇನು? ಜೈಲಿನಲ್ಲಿ ಸಿಬ್ಬಂದಿಗಳ ಅಕ್ರಮ ದಂಧೆ ಇನ್ನೂ ನಿಂತಿಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ. ಕಾರಣ, ಜೈಲಧಿಕಾರಿಗಳ ವಿರುದ್ಧ ಖೈದಿಗಳು ಉಪವಾಸ ಪ್ರತಿಭಟನೆ ನಡೆಸಿದ್ದಾರೆ. ಜೈಲಿನಲ್ಲಿ ಇಬ್ಬರು ಖೈದಿಗಳು ಸಾವನ್ನಪ್ಪಿದ್ಧಾರೆ. ಇದರಿಂದಾಗಿ ಅಲ್ಲಿರುವ ಇತರ ಖೈದಿಗಳಿಗೆ ಆತಂಕ ಪ್ರಾರಂಭವಾಗಿದೆ. ಜೈಲು ಅಧೀಕ್ಷಕ ರಂಗನಾಥ್ ವಿರುದ್ಧ ಕೈದಿಗಳು ದುಡ್ಡಿಗಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೈದಿಗಳ ಸಾವಿಗೆ ಅಧಿಕಾರಿಗಳು ನೀಡುತ್ತಿರುವ ಚಿತ್ರಹಿಂಸೆಯೇ ಕಾರಣ ಎಂದೂ ಆರೋಪಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿಯೋರ್ವ ಟಿವಿ9ಗೆ ಆಡಿಯೋ ಮೆಸೇಜ್ ಕಳುಹಿಸಿ ಅಲ್ಲಿನ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.

ಖೈದಿಗಳು ಆರೋಪಿಸಿರುವ ಆಡಿಯೋ ಇಲ್ಲಿದೆ:

ಖೈದಿಗಳ ಆರೋಪಕ್ಕೆ ಬೇರೊಂದು ಆಯಾಮ ಇದೆಯೇ? ಖೈದಿಗಳು ಜೈಲು ಅಧೀಕ್ಷಕ ರಂಗನಾಥ್ ವಿರುದ್ಧ ಆರೋಪ ಮಾಡಿದ್ದಕ್ಕೆ ಮತ್ತೊಂದು ರೀತಿಯ ಚರ್ಚೆಯೂ ನಡೆದಿದೆ. ಹಲವು ಸುಧಾರಣಾ ಕ್ರಮಗಳನ್ನು ರಂಗನಾಥ್ ಜೈಲಿನಲ್ಲಿ ಜಾರಿಗೊಳಿಸಿದ್ದರು. ಇದರಿಂದಾಗಿ ಜೈಲಿನೊಳಗೆ ಕುಳಿತು ದುಷ್ಕೃತ್ಯ ಎಸಗುತ್ತಿದ್ದವರಿಗೆ ಸಮಸ್ಯೆಯಾಗಿತ್ತು. ಆದ್ದರಿಂದಲೇ ರಂಗನಾಥ್ ವಿರುದ್ಧ ಜೈಲಿನೊಳಗಿನ ಅಧಿಕಾರಿಗಳೇ ಕತ್ತಿ ಮಸೆಯುತ್ತಿದ್ದಾರೆಯೇ? ಎಂಬ ಆಯಾಮದಲ್ಲಿ ಚರ್ಚೆಯೂ ಹುಟ್ಟಿಕೊಂಡಿದೆ.

ಜೈಲು ಸುಧಾರಣೆಗೆ ಕಮಿಟಿ ವಿಶೇಷ ಗಮನ ಕೊಡಲಾಗುವುದು. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನಿಂದ ವರದಿಯನ್ನು ತರಿಸಿಕೊಳ್ಳುತ್ತೇನೆ. ಜೈಲಿನಲ್ಲಿ ದುರಾಡಳಿತದಲ್ಲಿ ಭಾಗಿಯಾದವರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಗೃಹ ಸಚಿವರ ಆರಗ ಜ್ಞಾನೇಂದ್ರ ಮಾತನಾಡಿರುವ ವಿಡಿಯೋ ಇಲ್ಲದೆ:

ಇದನ್ನೂ ಓದಿ:

ಮುಸ್ಮಿಮರನ್ನಾದ್ರು ಮಾಡ್ಲಿ, ದಲಿತರನ್ನಾದರೂ ಸಿಎಂ ಮಾಡಲಿ; ಅದು ಹೈಕಮಾಂಡ್, ಶಾಸಕರಿಗೆ ಬಿಟ್ಟ ವಿಚಾರ: ಸಿದ್ದರಾಮಯ್ಯ

Sunny Deol: ‘ಗದರ್​ 2’ ಚಿತ್ರ ಘೋಷಿಸಿದ ಸನ್ನಿ ಡಿಯೋಲ್​: ಮೋಷನ್​ ಪೋಸ್ಟರ್​ ಜತೆ ರಿಲೀಸ್​ ಬಗ್ಗೆಯೂ ಸಿಕ್ತು ಮಾಹಿತಿ

Published On - 11:05 am, Sat, 16 October 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್