ಪರಪ್ಪನ ಅಗ್ರಹಾರ ಜೈಲಿನಿಂದ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆ
ಐದು ವರ್ಷಗಳ ಜೈಲು ಶಿಕ್ಷಯೆ ಬಳಿಕ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಆನೇಕಲ್: ಸುಮಾರು ಐದು ವರ್ಷಗಳ ಬಳಿಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalitha) ದತ್ತುಪುತ್ರ ಸುಧಾಕರನ್ (Sudhakaran) ಇಂದು (ಅ.16) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಐದು ವರ್ಷಗಳ ಜೈಲು ಶಿಕ್ಷೆಯ ನಂತರ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸುಧಾಕರನ್ ರಿಲೀಸ್ ಆಗುತ್ತಿದ್ದಂತೆ ಬೆಂಬಲಿಗರು ಸುಧಾಕರನ್ ಪರವಾಗಿ ಘೋಷಣೆ ಕೂಗಿ ಬರಮಾಡಿಕೊಂಡಿದ್ದಾರೆ. ಇನ್ನು ಜೈಲಿನಿಂದ ಬಿಡುಗಡೆಗೊಂಡ ಸುಧಾಕರನ್ ಸ್ವಾಗತಕ್ಕಾಗಿ ಬೆಂಬಲಿಗರು ತಮಿಳುನಾಡಿನಿಂದ ಆಗಮಿಸಿದ್ದರು.
ಚಿನ್ನಮ್ಮ ಶಶಿಕಲಾ ನಟರಾಜನ್ ಜೊತೆಯೇ ಸುಧಾಕರನ್ ಬಿಡುಗಡೆ ಆಗಬೇಕಿತ್ತು. ಆದರೆ ದಂಡ ಕಟ್ಟೋಕೆ ಆಗದ ಹಿನ್ನೆಲೆ ಒಂದು ವರ್ಷ ಹೆಚ್ಚು ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು.
ಅಕ್ರಮ ಆಸ್ತಿ ಸಂಪಾದಿಸದ್ದ ಆರೋಪದ ಮೇಲೆ ಶಶಿಕಲಾ ನಟರಾಜನ್ಗೆ ಜೈಲು ವಾಸ ನೀಡಲಾಗಿತ್ತು. ಸುಮಾರು ನಾಲ್ಕು ವರ್ಷಗಳ ನಂತರ ಅಂದರೆ ಇದೇ ವರ್ಷ ಜನವರಿ 27ಕ್ಕೆ ಇವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು. ಶಶಿಕಲಾ ರಿಲೀಸ್ ಆದ ದಿನವೇ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ ದಂಡ ಕಟ್ಟದ ಕಾರಣ ಬಿಡುಗಡೆಯಾಗಿರಲಿಲ್ಲ.
ಇನ್ನು ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿತ್ತು. 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಫೆಬ್ರವರಿ 10ಕ್ಕೆ ಸುಧಾಕರನ್ ಆಸ್ತಿಗೆ ಮುಟ್ಟುಗೋಲು ಹಾಕಿತ್ತು.
ಇದನ್ನೂ ಓದಿ
ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!
Published On - 11:59 am, Sat, 16 October 21