AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಪಕ್ಷದ ಪೂರ್ಣಾವಧಿ ಅಧ್ಯಕ್ಷೆ..ನನ್ನ ಬಳಿಯೇ ನೇರವಾಗಿ ಮಾತನಾಡಿ’-ಜಿ23 ನಾಯಕರಿಗೆ ತಿರುಗೇಟು ನೀಡಿದ ಸೋನಿಯಾ ಗಾಂಧಿ

ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆ, ಸದ್ಯದ ರಾಜಕೀಯ ಪರಿಸ್ಥಿತಿ ಸೇರಿ ಮತ್ತಿತರ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಇಂದು ಕಾಂಗ್ರೆಸ್​ ಉನ್ನತಮಟ್ಟದ ಸಭೆ ನಡೆಸಿತ್ತು. 

‘ನಾನು ಪಕ್ಷದ ಪೂರ್ಣಾವಧಿ ಅಧ್ಯಕ್ಷೆ..ನನ್ನ ಬಳಿಯೇ ನೇರವಾಗಿ ಮಾತನಾಡಿ’-ಜಿ23 ನಾಯಕರಿಗೆ ತಿರುಗೇಟು ನೀಡಿದ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ
TV9 Web
| Updated By: Lakshmi Hegde|

Updated on: Oct 16, 2021 | 1:17 PM

Share

ನಾನು ಕಾಂಗ್ರೆಸ್​​ನ ಹಂಗಾಮಿ ಅಧ್ಯಕ್ಷೆಯಲ್ಲ. ಪೂರ್ಣಾವಧಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಸೋನಿಯಾಗಾಂಧಿ (Sonia Gandhi) ಇಂದು ಹೇಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ (CWC Meeting)ಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿರುವ ಪ್ರತಿಯೊಬ್ಬರಿಗೂ ಒಂದು ಸ್ಪಷ್ಟತೆಯನ್ನು ನೀಡಲು ಈ ಸಭೆ ಕರೆಯಲಾಗಿದೆ. ಪಕ್ಷದ ಪ್ರತಿ ಸದಸ್ಯನೂ ಈಗ ಕಾಂಗ್ರೆಸ್​​ನ ಪುನರುಜ್ಜೀವನವನ್ನು ಬಯಸುತ್ತಿದ್ದಾರೆ. ಹಾಗೇ ಕಾಂಗ್ರೆಸ್​ ಮತ್ತೆ ಪುಟಿದೇಳಬೇಕೆಂದರೆ ನಮ್ಮಲ್ಲಿ ಏಕತೆ ಇರಬೇಕು. ಪಕ್ಷದ ಹಿತಾಸಕ್ತಿಯನ್ನು ಪ್ರಧಾನವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. 

ಇದೇ ವೇಳೆ ಸೋನಿಯಾ ಗಾಂಧಿ ಜಿ23 ನಾಯಕರಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದರು. ನಾನೀಗ ಕಾಂಗ್ರೆಸ್​​ನ ಪೂರ್ಣಾವಧಿ ಅಧ್ಯಕ್ಷೆಯಂತೆಯೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾಯಕರು ಯಾರೇ ಇರಲಿ, ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮೂಲಕ ಮಾತನಾಡಿ, ಅದನ್ನು ನನಗೆ ತಲುಪಿಸುವ ಅಗತ್ಯವಿಲ್ಲ. ಏನೇ ಇದ್ದರೂ ನನ್ನ ಬಳಿ ನೇರವಾಗಿ ಮಾತನಾಡಿ. ನನ್ನ ಬಳಿ ಯಾವುದೇ ವಿಷಯ ಚರ್ಚೆ ಮಾಡಲು ನಿಮಗೆಲ್ಲ ಸ್ವಾತಂತ್ರ್ಯವಿದೆ. ನಾವು ನಂತರ ಅದರ ಬಗ್ಗೆ ಪ್ರಾಮಾಣಿಕವಾಗಿ ಚರ್ಚೆ ನಡೆಸೋಣ ಎಂದು ಕರೆ ನೀಡಿದರು.

ಸೋನಿಯಾ ಗಾಂಧಿ ತಾನು ಕಾಂಗ್ರೆಸ್​​ನ ಪೂರ್ಣಾವಧಿ ಸದಸ್ಯೆ ಮತ್ತು ಯಾವುದೇ ವಿಷಯವನ್ನೂ ನೇರವಾಗಿ, ಮುಕ್ತವಾಗಿ ನನ್ನ ಬಳಿ ಮಾತನಾಡಿ ಎಂದು ಹೇಳಲು ಕಾರಣವಿದೆ.  ಜಿ 23 ನಾಯಕರಲ್ಲಿ ಒಬ್ಬರಾದ ಕಪಿಲ್​ ಸಿಬಲ್​ ಕಳೆದ ತಿಂಗಳು ಸೋನಿಯಾ ಗಾಂಧಿಯವರಿಗೆ ಒಂದು ಪತ್ರ ಬರೆದಿದ್ದರು.  ಕಾಂಗ್ರೆಸ್​​ಗೆ ಇನ್ನೂ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ್ಯೂ ಪಕ್ಷ ಯಾರ ನೇತೃತ್ವದಲ್ಲಿ ಮಹತ್ವದ ವಿಚಾರಗಳ ನಿರ್ಧಾರ ಕೈಗೊಳ್ಳುತ್ತಿದೆ. ಪೂರ್ಣಾವಧಿ ಅಧ್ಯಕ್ಷ ಅನುಪಸ್ಥಿತಿಯಲ್ಲಿ ಯಾರು ನಿರ್ಣಯಗಳನ್ನು ರೂಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಈ ಪತ್ರಕ್ಕೆ ಉಳಿದ ಜಿ23 ನಾಯಕರು ಸಹಿಯನ್ನೂ ಹಾಕಿದ್ದರು. ಈ ಪತ್ರ ಬರೆದ ಜಿ23 ನಾಯಕರನ್ನು ಗುರಿಯಾಗಿಸಿ ಇಂದಿನ ಸಭೆಯಲ್ಲಿ ಅವರು ತಿರುಗೇಟು ನೀಡಿದ್ದಾರೆ.

ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆ, ಸದ್ಯದ ರಾಜಕೀಯ ಪರಿಸ್ಥಿತಿ ಸೇರಿ ಮತ್ತಿತರ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಇಂದು ಕಾಂಗ್ರೆಸ್​ ಉನ್ನತಮಟ್ಟದ ಸಭೆ ನಡೆಸಿತ್ತು.  ಇದರಲ್ಲಿ ಮಾತನಾಡಿದ ಸೋನಿಯಾ ಗಾಂಧಿ,  ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆರ್ಥಿಕ ಹಿಂಜರಿತ ಮುಚ್ಚಿಡಲು ಸರ್ಕಾರಿ ಆಸ್ತಿ ಮಾರಾಟ ಆಗುತ್ತಿದೆ. ಎಸ್​ಎಸ್​ಟಿ, ಹಿಂದುಳಿದ ವರ್ಗದವರ ಉದ್ಯೋಗಕ್ಕೂ ಹೊಡೆತ ಬಿದ್ದಿದೆ. ಪೆಟ್ರೋಲ್​​ ದರ, ಡೀಸೆಲ್​ ದರವೆಲ್ಲ ಗಗನಕ್ಕೇರಿದೆ. ಇದರಿಂದಾಗಿ ಸಾರ್ವಜನಿಕರ ಜೀವನಕ್ಕೆ ತೊಂದರೆಯಾಗಿದೆ ಎಂದು ಹೇಳಿದರು. ಹಾಗೇ, ಭಾರತಕ್ಕೆ ಗಡಿಯಲ್ಲಿ ಗಂಭೀರವಾದ ಸಮಸ್ಯೆ ಎದುರಾಗಿದೆ. ಚುನಾವಣೆಗೂ ವಿದೇಶಾಂಗ ನೀತಿಯನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಗಡಿ ಸಮಸ್ಯೆ ಪರಿಹರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Bangalore Crime: ಸೈಡ್ ಕೊಡದ ಬೆಂಗಳೂರಿನ ಬೈಕ್ ಸವಾರನಿಗೆ ಶೂಟ್ ಮಾಡಿದ ಲ್ಯಾಂಡ್ ರೋವರ್ ಕಾರು ಚಾಲಕ

Kalaburagi Earthquake: ಲಘು ಭೂಕಂಪನ; ಬೆಳಿಗ್ಗೆ 11.40ರ ಸುಮಾರಿಗೆ ಭೂಮಿಯಿಂದ ಭಾರೀ ಸದ್ದು

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!