ಏರೋನಿಕ್ಸ್ ಎಂಡಿ, ಸಿಇಒ ಹತ್ಯೆ ಪ್ರಕರಣ: ಆ ಜೋಡಿ ಕೊಲೆಯ ಹಿಂದಿತ್ತು ಏಳು ತಿಂಗಳ ಹಿಂದಿನ ದ್ವೇಷ!

ಇದರ ನಡುವೆ ಈ ಹಿಂದೆ ಜಿ ನೆಟ್ ಕಂಪನಿಯಲ್ಲಿ ಹೆಚ್​​ಆರ್ ಆಗಿದ್ದ ಪಣೀಂದ್ರ ಯುವತಿಯೋರ್ವಳ ಜೊತೆ ಸಲುಗೆಯಿಂದ ಮಾತನಾಡಿದ್ದ, ಇದು ಫಿಲಿಕ್ಸ್ ಕೊಪ ಮತ್ತಷ್ಟು ಹೆಚ್ಚಿಸಿ ಆಗಲೂ ಸಹ ಗಲಾಟೆ ಮಾಡಿದ್ದ ಅನ್ನೊ ಮಾತುಗಳು ಕೇಳಿ ಬಂದಿವೆ. ಸದ್ಯ ಇವೆಲ್ಲಾ ಮಾಹಿತಿ ಸಂಗ್ರಹಿಸಿರುವ ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಏರೋನಿಕ್ಸ್ ಎಂಡಿ, ಸಿಇಒ ಹತ್ಯೆ ಪ್ರಕರಣ: ಆ ಜೋಡಿ ಕೊಲೆಯ ಹಿಂದಿತ್ತು ಏಳು ತಿಂಗಳ ಹಿಂದಿನ ದ್ವೇಷ!
ಫಣೀಂದ್ರ ಹಾಗೂ ಆರೋಪಿ ಫಿಲೆಕ್ಸ್
Follow us
| Updated By: ಗಣಪತಿ ಶರ್ಮ

Updated on: Jul 12, 2023 | 4:54 PM

ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆಗೆ (Double Murder Case) ಏಳು ತಿಂಗಳ ಹಿಂದಿನ ದ್ವೇಷ ಕಾರಣ ಎನ್ನಲಾಗುತ್ತಿದೆ. ಒಂದು ಕೊಲೆಗೆ ಮಚ್ಚು ಹಿಡಿದ ಗ್ಯಾಂಗ್​​ಗೆ ಸಂಬಂಧವೇ ಇಲ್ಲದ ಮತ್ತೋರ್ವ ವ್ಯಕ್ತಿ ಸಹ ಸಾವನಪ್ಪಿದ್ದಾನೆ. ಈ ಭೀಕರ ಕೃತ್ಯ ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಪಂಪಾ ಬಡಾವಣೆಯಲ್ಲಿ ನಡೆದಿದೆ. ಏರೋನಿಕ್ಸ್ ಮೀಡಿಯಾ ಎಂಬ ಇಂಟರ್ ನೆಟ್ ಬ್ರಾಡ್ ಬ್ಯಾಂಡ್ ಕಂಪನಿಯ ಎಂಡಿ ಪಣೀಂದ್ರ ಹಾಗೂ ಕಂಪನಿಯ ಸಿಇಒ ವಿನುಕುಮಾರ್ ಎಂಬುವವರನ್ನು ಕಚೇರಿಗೆ ಮಾತನಾಡಿಸೊ ನೆಪದಲ್ಲಿ ಬಂದಿದ್ದ ಮೂವರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಅಮೃತಹಳ್ಳಿ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧಿಸಿದ್ದು, ಆರೋಪಿಗಳ ವಿಚಾರಣೆ ವೇಳೆ ಹಲವು ಅಂಶಗಳು ಬೆಳಕಿಗೆ ಬಂದಿವೆ.

ಅಸಲಿಗೆ ಪಣೀಂದ್ರ ಈ ಹಿಂದೆ ಬನ್ನೇರುಘಟ್ಟದ ಅರುಣ್ ಎಂಬಾತನ ಮಾಲೀಕತ್ವದ ಜಿ ನೆಟ್ ಎಂಬ ಖಾಸಗಿ ಕಂಪನಿಯ ಎಚ್ ಆರ್ ಆಗಿದ್ದ. ಅದೇ ಕಂಪನಿಯಲ್ಲಿ ವಿನು ಕುಮಾರ್ ಸಿಇಒ ಆಗಿದ್ದ. ಈ ವೇಳೆ ಕಂಪನಿಯಲ್ಲಿ ಕೆಲಸ ಮಾಡೊದು ಬಿಟ್ಟು ರೀಲ್ಸ್, ಹರಟೆ ಅಂತ ಹೆಚ್ಚು ಸಮಯ ಹಾಳು ಮಾಡುತಿದ್ದ ಓರ್ವ ಸಿಬ್ಬಂದಿಯನ್ನು ಕ್ಲಾಸ್ ತೆಗೆದುಕೊಂಡಿದ್ದ ಪಣೀಂದ್ರ ಜಿನೆಟ್ ಕಂಪನಿಯಿಂದ ಹೊರ ಹಾಕಿದ್ದ. ಆಗ ಕೆಲಸ ಕಳೆದುಕೊಂಡಿದ್ದವನೇ ಇದೇ ಶಬರೀಶ್ ಅಲಿಯಾಸ್ ಜೊಕರ್ ಫಿಲಿಕ್ಸ್. ಟಿಕ್ ಟಾಕ್ ಅಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿ ಜೊತೆಗೆ ಟ್ರೋಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತಿದ್ದ ಈತ ಕೆಲಸ ಕಳೆದುಕೊಂಡ ಬಳಿಕ ಹೆಚ್ ಆರ್ ಆಗಿದ್ದ ಪಣೀಂದ್ರ ಮೇಲೆ ಕತ್ತಿ ಮಸೆದಿದ್ದ. ಅದರಂತೆ, ಆತನ ಕೊಲೆ ಮಾಡೊದಾಗಿ ಸಹ ಹಿಂದೆ ವಾರ್ನ್ ಮಾಡಿದ್ದ. ಈತ ಸರಿಯಾದ ಸಮಯಕ್ಕೆ ಕಾಯುತಿದ್ದ.

ಮತ್ತೊಂದೆಡೆ ಅರುಣ್ ಎಂಬಾತನ ಮಾಲಿಕತ್ವದ ಜಿ ನೆಟ್ ನಿಂದ ಹೊರ ಬಂದ ಪಣೀಂದ್ರ, ವಿನುಕುಮಾರ್ ಜೊತೆಗೂಡಿ ಏರೋನಿಕ್ಸ್ ಮೀಡಿಯಾ ಕಂಪನಿ ತೆರದು ಕೆಲಸ ಆರಂಭಿಸಿದ್ದರು. ಈ ನಡುವೆ ಜಿನೆಟ್ ಕಂಪನಿಯಲ್ಲಿದ್ದ ಕೆಲ ಸಿಬ್ಬಂದಿಗಳು ಪಣೀಂದ್ರ ತೆರೆದ ಹೊಸ ಕಂಪನಿ ಕಡೆ ಮುಖ ಮಾಡಿದ್ದರು. ಇದು ಜಿನೆಟ್ ಕಂಪನಿಗೆ ಭಾರಿ ಹೊಡೆತ ನೀಡಿತ್ತು. ಇದು ಜಿನೆಟ್ ಮಾಲೀಕ ಅರುಣ್​ಗೆ ಪಣೀಂದ್ರನ ಮೇಲೆ ದ್ವೇಷ ಹುಟ್ಟಿಸಿತ್ತು.

ಜಿ ನೆಟ್ ಕಂಪನಿಯಲ್ಲಿದ್ದವರು ಕೆಲಸದಿಂದ ಹೊರ ಹೋಗುತಿದ್ದಂತೆ ಪಣೀಂದ್ರ ಹೆಚ್​ಆರ್ ಆಗಿದ್ದಾಗ ಕೆಲಸದಿಂದ ತೆಗೆದಿದ್ದ ಜೊಕರ್ ಫೀಲಿಕ್ಸ್ ಮತ್ತೆ ಕಂಪನಿಗೆ ಜಾಯಿನ್ ಆಗಿದ್ದ. ಈ ವೇಳೆ ಮಾಲೀಕ ಅರುಣ್​ಗೆ ಪಣೀಂದ್ರ ಮೇಲೆ ಈತನಿಗಿದ್ದ ಜಿದ್ದು ಗೊತ್ತಾಗಿತ್ತು. ಮತ್ತೊಂದೆಡೆ ಪಣೀಂದ್ರ ಕೂಡ ಕೊಂಚ ರೀಲ್ಸ್ ಗಳ ಮಾಡೊದ್ರ ಜೊತೆಗೆ ಸ್ಟೈಲಿಷ್ ಆಗಿದ್ದ. ಇದು ಸಹ ಫಿಲೀಕ್ಸ್ ಗೆ ಆತನ ಕಂಡರೆ ಎಲ್ಲಿಲ್ಲದ ಕೋಪ ಹೆಚ್ಚಿಸುತಿತ್ತು. ಮೊದಲೇ ಹಳೆ ದ್ವೇಷ ಹೊಂದಿದ್ದ ಫಿಲಿಕ್ಸ್ ನೆನ್ನೆ ತನ್ನ ಹಳೆ ಸ್ಕೂಲಿನ ಕ್ಲಾಸ್​​ಮೆಟ್ ಸಂತೋಷ್ ಹಾಗೂ ವಿನಯ್ ಕುಮಾರ್ ಎಂಬಾತನ ಸೇರಿಸಿಕೊಂಡು ಸಿಲ್ಕ್ ಬೋರ್ಡ್ ಗೆ ತೆರಳಿದ್ದ. ಅಲ್ಲಿ ಮೂವರು ಸಹ ಮಧ್ಯಸೇವಿಸಿ ಪಣೀಂದ್ರ ಹತ್ಯೆಗೆ ನೆನ್ನೆಯ ದಿನವನ್ನು ಫಿಕ್ಸ್ ಮಾಡಿದ್ದಾರೆ. ಮೊದಲೇ ಜೀ ನೆಟ್ ನಿಂದ ಕೆಲ ಸಿಬ್ಬಂದಿಗಳು ಪಣೀಂದ್ರ ಕಂಪನಿಗೆ ಬರುತ್ತಿರೋದನ್ನು ಅರಿತಿದ್ದ ಫೀಲಿಕ್ಸ್ ತನಗೂ ಸಹ ಕೆಲಸ ಕೊಡಿ ಎಂದು ಕೇಳಿದ್ದ. ಅದರಂತೆ ಕುಡಿದು ಮಚ್ಚುಗಳನ್ನು ಸಿದ್ದ ಪಡಿಸಿಕೊಂಡಿದ್ದ ಫಿಲಿಕ್ಸ್ ಅಂಡ್ ಗ್ಯಾಂಗ್ ಸಂಚು ತಿಳಿಯದ ಪಣೀಂದ್ರ ಕಚೇರಿಗೆ ಕರೆದಿದ್ದ. ಅದರಂತೆ, ಸಂಜೆ 4ರ ಸುಮಾರಿಗೆ ಎರಡು ಬೈಕ್ ನಲ್ಲಿ ಅಮೃತಹಳ್ಳಿಯ ಪಂಪಾ ಬಡವಾಣೆಯ ಏರೋನಿಕ್ಸ್ ಕಚೇರಿಗೆ ಮೂವರು ಬಂದಿದ್ದರು. ನಂತರ ಪಣೀಂದ್ರ ಕಚೇರಿಗೆ ತೆರಳಿ ಮಾತು ಸಹ ಆರಂಭಿಸಿದ್ದರು. ಈ ನಡುವೆ ಮಚ್ಚನ್ನು ತೆಗೆದ ಆರೋಪಿಗಳು ಪಣೀಂದ್ರ ಮೇಲೆ ದಾಳಿ ಮಾಡಿದ್ದರು. ಬಳಿಕ ಗಲಾಟೆ ಸದ್ದು ಕೇಳಿ ಬಂದ ವಿನುಕುಮಾರ್ ಮೇಲೂ ಹಲ್ಲೆ ಮಾಡಿದ ಫಿಲಿಕ್ಸ್ ಅಂಡ್ ಗ್ಯಾಂಗ್ ಕಚೇರಿಯ ಹಿಂಬದಿಯ ಬಾಗಿಲಿನಿಂದ ಜಿಗಿದು ಎಸ್ಕೇಪ್ ಆಗಿತ್ತು.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೊಲೆ ಹಿಂದಿದ್ಯಾ ಹೆಣ್ಣಿನ‌ ಕರಿ ನೆರಳು?

ಒಂದು ಕೊಲೆ ಮಾಡಲು ಬಂದು ಕುಡಿದ ಮತ್ತಿನಲ್ಲಿ ಎರಡು ಕೊಲೆ ಮಾಡಿದ ಆರೋಪಿಗಳು ಮೊದಲಿಗೆ ಘಟನಾ ಸ್ಥಳದಿಂದ ಕಾಲ್ಕಿತ್ತು ಕ್ಯಾಬ್ ಮುಖಾಂತರ ಮೆಜೆಸ್ಟಿಕ್ ಗೆ ತೆರಳಿದ್ರು. ನಂತರ ಅಲ್ಲಿಂದ ರೈಲು ಮುಖಾಂತರ ಕುಣಿಗಲ್ ತೆರಳಿದ್ರು. ಮತ್ತೊಂದೆಡೆ ಜೊಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಟೆಕ್ನಕಲ್ ಹಾಗೂ ಮೊಬೈಲ್ ಟವರ್ ಮಾಹಿತಿ ಆಧರಿಸಿ ಕುಣಿಗಲ್ ನಲ್ಲಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಇನ್ನು ಬಂಧನದ ಬಳಿಕ, ಕೊಲೆಗೆ ಪಣೀಂದ್ರ ಮೇಲಿದ್ದ ಫಿಲಿಕ್ಸ್ ನ ಆರು ತಿಂಗಳ ದ್ವೇಷವೇ ಕಾರಣವಾಗಿದೆ ಅನ್ನೊದು ಗೊತ್ತಾಗಿದೆ. ಆದ್ರೆ ಇದರ ಜೊತೆಗೆ ಮತ್ತೊಂದಿಷ್ಟು ಸಂಶಯ ಸಹ ಮೂಡಿದ್ದು, ಪಣೀಂದ್ರ ಹಾಗೂ ವಿನುಕುಮಾರ್ ಕಂಪನಿ ತೊರೆದ ಬಳಿಕ ಜಿ ನೆಟ್ ಕಂಪನಿ ನಷ್ಟದಲ್ಲಿದ್ದು, ಇದೇ ವೇಳೆ ಪಣೀಂದ್ರ ನಡುವೆ ಕೊಂಚ ತಿಕ್ಕಾಟ ಹೊಂದಿದ್ದ ಜಿ ನೆಟ್ ಮಾಲೀಕ ಮಾಲೀಕ ಅರುಣ್ ಪಾತ್ರ ಸಹ ಇದೆಯಾ ಅನ್ನೊ ಅನುಮಾನ ಮೂಡಿದೆ.

ಇದರ ನಡುವೆ ಈ ಹಿಂದೆ ಜಿ ನೆಟ್ ಕಂಪನಿಯಲ್ಲಿ ಹೆಚ್​​ಆರ್ ಆಗಿದ್ದ ಪಣೀಂದ್ರ ಯುವತಿಯೋರ್ವಳ ಜೊತೆ ಸಲುಗೆಯಿಂದ ಮಾತನಾಡಿದ್ದ, ಇದು ಫಿಲಿಕ್ಸ್ ಕೊಪ ಮತ್ತಷ್ಟು ಹೆಚ್ಚಿಸಿ ಆಗಲೂ ಸಹ ಗಲಾಟೆ ಮಾಡಿದ್ದ ಅನ್ನೊ ಮಾತುಗಳು ಕೇಳಿ ಬಂದಿವೆ. ಸದ್ಯ ಇವೆಲ್ಲಾ ಮಾಹಿತಿ ಸಂಗ್ರಹಿಸಿರುವ ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ