ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೊಲೆ ಹಿಂದಿದ್ಯಾ ಹೆಣ್ಣಿನ‌ ಕರಿ ನೆರಳು?

ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಎಂಡಿ ಫಣೀಂದ್ರನ ಜೊತೆ ಆರೋಪಿ ಫಿಲೆಕ್ಸ್ ಹುಡುಗಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಮಾಡುವ ಬೆದರಿಕೆ ಹಾಕಿದ್ದ.

ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೊಲೆ ಹಿಂದಿದ್ಯಾ ಹೆಣ್ಣಿನ‌ ಕರಿ ನೆರಳು?
ಮೃತ ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಎಂಡಿ ಫಣೀಂದ್ರ ಹಾಗೂ ಆರೋಪಿ ಫಿಲೆಕ್ಸ್
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Jul 12, 2023 | 2:06 PM

ಬೆಂಗಳೂರು: ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ನಡೆದ ಡಬ್ಬಲ್ ಮರ್ಡರ್ ಕೇಸ್​ಗೆ(Double Murder Case) ಸಂಬಂಧಿಸಿ ಹೊಸ ಮಾಹಿತಿ ಹೊರ ಬಿದ್ದಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಬ್ಬಲ್ ಮರ್ಡರ್ ಹಿಂದೆ ಹೆಣ್ಣಿನ‌ ಕರಿ ನೆರಳು? ದುಡ್ಡಿಗಲ್ಲ, ವ್ಯವಹಾರಕ್ಕಲ್ಲ, ಕೊಲೆ ನಡೆದಿದ್ದು ಹುಡ್ಗಿ ವಿಚಾರಕ್ಕಾ? ಎಂಬ ಸಂಶಯ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಎಂಡಿ ಫಣೀಂದ್ರನ ಜೊತೆ ಆರೋಪಿ ಫಿಲೆಕ್ಸ್ ಹುಡುಗಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಕೊಲೆ ಮಾಡುವ ಬೆದರಿಕೆ ಹಾಕಿದ್ದ.

ಡಬಲ್ ಮರ್ಡರ್ ಕೇಸ್ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಈ ಹಿಂದೆ ಬನ್ನೇರುಘಟ್ಟದಲ್ಲಿದ್ದ ಜಿ ನೆಟ್ ಕಂಪನಿಯಲ್ಲಿ ಫಿಲೆಕ್ಸ್ ಹಾಗೂ ಫಣಿಂದ್ರ ಕೆಲಸ ಮಾಡ್ತಿದ್ದರು. ಈ ವೇಳೆ ಆರೋಪಿ ಫಿಲೆಕ್ಸ್ ಸಲುಗೆಯಿಂದಿದ್ದ ಯುವತಿಯ ಜೊತೆಗೆಯೇ ಫಣಿಂದ್ರ ಕೂಡ ಸಲುಗೆ ಬೆಳೆಸಿದ್ದ. ಅಲ್ಲದೆ ಹೆಂಡತಿ ಜೊತೆ ವಿಚ್ಛೇದನ ಪಡೆದು ಒಂಟಿಯಾಗಿದ್ದ ಫಣಿಂದ್ರ ತಾನು ಸಲುಗೆಯಿಂದಿರುವ ಯುವತಿ ಜೊತೆ ಇರೋದು ಫಿಲೆಕ್ಸ್​ಗೆ ಇಷ್ಟ ಆಗುತ್ತಿರಲಿಲ್ಲ. ಹೀಗಾಗಿ ಇದೇ ವಿಚಾರದಲ್ಲಿ ಫಣಿಂದ್ರ ಹಾಗೂ ಪಿಲೆಕ್ಸ್ ಮಧ್ಯೆ ಜಗಳ ನಡೆದಿತ್ತು. ನನ್ನ ಹುಡುಗಿ ವಿಚಾರಕ್ಕೆ ಬಂದ್ರೆ ನಿನ್ನ ಮುಗಿಸಿಬಿಡ್ತೀನಿ ಅಂತ ಫಿಲೆಕ್ಸ್ ಅವಾಜ್ ಹಾಕಿದ್ದನಂತೆ. ಸದ್ಯ ಈ‌ ಆಯಮದಲ್ಲೂ ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣ; ಜೋಕರ್ ಫೆನಿಕ್ಸ್ ಸೇರಿ ಮೂವರ ಬಂಧನ

ಇನ್ನು ಈ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ರು. ನಿನ್ನೆ ಮಧ್ಯಾಹ್ನ 3.30ರಿಂದ ಸಂಜೆ 4 ಗಂಟೆ ನಡುವೆ ಜೋಡಿ ಕೊಲೆಯಾಗಿದೆ. ಆರೋಪಿಗಳು, ಇಬ್ಬರನ್ನು ಕೊಲೆಗೈದು ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಹಳೇ ಕಂಪನಿ ಮಾಲೀಕ ಅರುಣ್ ಕುಮಾರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜಿ ನೆಟ್​ ಮೀಡಿಯಾ ಓನರ್​ ಅರುಣ್​ ಕೂಡ ಶಾಮೀಲಾಗಿರುವ ಶಂಕೆಯಿದೆ. ಪರಾರಿಯಾಗಿದ್ದ ಆರೋಪಿಗಳು ತುಮಕೂರು ಜಿಲ್ಲೆ ಕುಣಿಗಲ್​ನಲ್ಲಿ ಸಿಕ್ಕಿದ್ದಾರೆ. ಜಿ ನೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಫೆಲಿಕ್ಸ್​ ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಕೆಲಸ ಕೇಳುವ ನೆಪದಲ್ಲಿ ಬೈಕ್​ನಲ್ಲಿ ಬಂದು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ.ಲಕ್ಷ್ಮೀಪ್ರಸಾದ್​ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ

ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಎಂಬ ಸಂಸ್ಥೆಗೆ ನುಗ್ಗಿದ್ದ ಮೂವರು ಹಂತಕರು ಮಚ್ಚಿನಿಂದ ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಹಾಗೂ ಸಿಇಓ ವಿನುಕುಮಾರ್ ಮೇಲೆ ಅಟ್ಯಾಕ್ ಮಾಡಿ ಮನ ಬಂದಂತೆ ಕೊಚ್ಚಿ ಕೊಲೆ‌ ಮಾಡಿದ್ದರು. ಕೊಲೆಯಾದ ಫಣೀಂದ್ರ ನಾಲ್ಕು ತಿಂಗಳ ಹಿಂದೆ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಮೀಡಿಯಾ ಪ್ರವೈಟ್ ಲಿಮಿಟೆಡ್ ಅನ್ನೋ ಸಂಸ್ಥೆ ತೆರೆದಿದ್ರು. ಅದಕ್ಕೆ ವಿನುಕುಮಾರ್ ಸಿಇಓ ಆಗಿ ಕೆಲಸ ಮಾಡ್ತಿದ್ರು. ಜು.11ರ ಸಂಜೆ ನಾಲ್ಕು ಗಂಟೆಗೆ ಕಂಪನಿಯ ಸಿಬ್ಬಂದಿ ಜೊತೆ ಎಂಡಿ ಹಾಗೂ ಸಿಇಓ ಮೀಟಿಂಗ್ ಕರೆದಿದ್ರು. ಈ ಸಮಯಕ್ಕೆ ಎಂಡಿ ಹಾಗೂ ಸಿಇಓ ಜೊತೆಗೆ ಬಂದ ಮೂವರು ಹಂತಕರು ಹತ್ಯೆ ಮಾಡಿ ಪರಾರಿಯಾಗಿದ್ದರು.

ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ರೆ ಸಂಸ್ಥೆಯ ಗ್ರೌಂಡ್ ಪ್ಲೋರ್ ನಲ್ಲಿ ಹಾಗೂ ಮೊದಲ ಮಹಡಿಯಲ್ಲಿದ್ದ ಸಂಸ್ಥೆಯ ಎಂಡಿ ಫಣೀಂದ್ರ ಹಾಗೂ ಸಿಇಓ ವಿನುಕುಮಾರ್ ಎಂಬುವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿರೋದು ಬೆಳಕಿಗೆ ಬಂದಿತ್ತು. ಇನ್ನು ಪರಿಶೀಲನೆ ವೇಳೆ ಈ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಸಂಸ್ಥೆ ಇತ್ತೀಚಿಗೆ ಆರು ತಿಂಗಳ ಹಿಂದೆ ಪ್ರಾರಂಭಿಸಲಾಗಿದ್ದು ಪಣಿಂದ್ರ ಹಾಗೂ ವಿನೂ ಕುಮಾರ್ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಬಳಿಕ ತಮ್ಮದೇ ಕಂಪನಿ ತೆರೆದುಕೊಂಡು ಕಂಪನಿಯಿಂದ ಹೊರ ಬಂದಿದ್ದಾರೆ. ಇನ್ನು ಹಳೆ ಕಂಪನಿ ಸಂಬಂಧ ಹಾಗೂ ಪಣೀಂದ್ರ ತೆರೆದ ಹೊಸ ಕಂಪನಿ ನಡುವೆ ಕೊಂಚ ತಗಾದೆ ನಡೆಯುತಿತ್ತು ಎನ್ನಲಾಗಿದೆ. ಇನ್ನು ಇದರ ನಡುವೆ ಫಿಲೆಕ್ಸ್ ತನ್ನ ಮತ್ತಿಬ್ಬರು ಸಹಚರರ ಜೊತೆ ಕಂಪನಿಗೆ ಬಂದಿದ್ದ. ಪಣೀಂದ್ರ ಹಾಗೂ ವಿನು ಜೊತೆ 10 ನಿಮಿಷ ಮಾತನಾಡಿದ್ದ. ಅದಾದ ಬಳಿಕ ಹತ್ಯೆ ನಡೆಸಿದ್ದ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ