ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ರುಚಿ ಸವಿದ ಆಸ್ಟ್ರೇಲಿಯಾದ ಫೇಮಸ್ ಮಾಸ್ಟರ್‌ಚೆಫ್

|

Updated on: Nov 27, 2023 | 8:37 AM

ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಎಂಬ ಟಿವಿ ಶೋವೊಂದರ ತೀರ್ಪುಗಾರರಲ್ಲಿ ಒಬ್ಬರಾದ ಮತ್ತು ಜನಪ್ರಿಯ ಮಾಸ್ಟರ್‌ಚೆಫ್ ಗ್ಯಾರಿ ಮೆಹಿಗನ್ ಅವರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ರುಚಿ ಸವಿದ ಆಸ್ಟ್ರೇಲಿಯಾದ ಫೇಮಸ್ ಮಾಸ್ಟರ್‌ಚೆಫ್
ಗ್ಯಾರಿ ಮೆಹಿಗನ್
Follow us on

ಬೆಂಗಳೂರು, ನ.27: ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ (MasterChef Australia) ಎಂಬ ಟಿವಿ ಶೋವೊಂದರ ತೀರ್ಪುಗಾರರಲ್ಲಿ ಒಬ್ಬರಾದ ಮತ್ತು ಜನಪ್ರಿಯ ಮಾಸ್ಟರ್‌ಚೆಫ್ ಗ್ಯಾರಿ ಮೆಹಿಗನ್ (Gary Mehigan) ಅವರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವೆಂದರೆ, ನಗರದ ಫೇಮಸ್ ಹೋಟೆಲ್​ನಲ್ಲಿ ಗರಿಗರಿಯಾದ ದೋಸೆಗನ್ನು ಸೇವಿಸಿ ಆನಂದಿಸಿದ್ದಾರೆ. ಮೆಹಿಗನ್ ಅವರು ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಬೆಂಗಳೂರಿನಲ್ಲಿ ತಾವು ತಂಗಿದ್ದ ಸಮಯದಲ್ಲಿ ಏನು ತಿಂದಿದ್ದಾರೆ ಎಂಬುದರ ಬಗ್ಗೆ ತಿಳಿಸಿದ್ದಾರೆ.

ಪಾಪ್-ಅಪ್ ಡಿನ್ನರ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಎಂಜಿ ರಸ್ತೆಯ ತಾಜ್ ಹೋಟೆಲ್​ಗೆ ಬಂದಿದ್ದೇನೆ ಎಂದು ಮೆಹಿಗನ್ ಅವರು ನಗರಕ್ಕೆ ಭೇಟಿ ಕೊಟ್ಟ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಪ್ರೋಪರ್ ದೋಸೆ, ನನಗೆ ಈ ಸ್ಥಳ ತುಂಬಾ ಇಷ್ಟವಾಯಿತು ಎಂದು ರಾಮೇಶ್ವರಂ ಕೆಫೆಯನ್ನು ಟ್ಯಾಂಗ್ ಮಾಡಿದ್ದಾರೆ. ನಾನು ರಾಗಿ ದೋಸೆ, ಗೀ ರೋಸ್ಟ್ ದೋಸ, ಮೇಡು ವಡಾ, ತುಪ್ಪದ ಇಡ್ಲಿ ಪೋಡಿ, ಕೇಸರಿ ಬಾತ್ ಮತ್ತು ಫಿಲ್ಟರ್ ಕಾಫಿಯನ್ನು ಸೇವಿಸಿ ನಾನು ಹಿಂತಿರುಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕಾಮೆಂಟ್‌ಗಳಲ್ಲಿ ಅನೇಕ ಜನರು ಬೆಂಗಳೂರಿನ ಹೊಸ ಸ್ಥಳಗಳನ್ನು ನೋಡಲು ಮತ್ತು ಆಹಾರವನ್ನು ಆನಂದಿಸಲು ಮಹಿಗನ್‌ಗೆ ಶಿಫಾರಸು ಮಾಡಿದ್ದಾರೆ. ನೆಟ್ಟಿಗರೊಬ್ಬರು, ದೋಸೆಯನ್ನು ಮೂಲತಃ ಉಡುಪಿಯಲ್ಲಿ ಮೊದಲು ಬಾರಿಗೆ ಕಂಡುಹಿಡಿಯಲಾಯಿತು. ಆ ರೀತಿ ಅಧಿಕೃತ ದೋಸೆ ನಿಮಗೆ ಬೆಂಗಳೂರಿನಲ್ಲಿ ಖಚಿತವಾಗಿಯೂ ಸಿಗಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಬೆಂಗಳೂರಿನಲ್ಲಿಂದು ಸಾಲು-ಸಾಲು ಪ್ರತಿಭಟನೆ, ಹಲವು ಮಾರ್ಗ ಬದಲಾವಣೆ

ಇನ್ನೊಬ್ಬ ಬಳಕೆದಾರರು, ನೀವು ಬೆಳ್ಳುಳ್ಳಿ ಹುರಿದ ದೋಸೆಯನ್ನು ಇಲ್ಲಿ ಪ್ರಯತ್ನಿಸಬೇಕು. ಅಲ್ಲದೆ, ದಯವಿಟ್ಟು ಬೆಂಗಳೂರಿನಲ್ಲಿ ಒಳ್ಳೆಯ ದೋಸೆಗಳಿಗಾಗಿ CTR ಅನ್ನು ಭೇಟಿ ಮಾಡಿ ಎಂದು ಬರೆದಿದ್ದಾರೆ.

ಓಹೋ ನೀವು ಬೆಂಗಳೂರಿನಲ್ಲಿದ್ದೀರಿ! ನೀವು ಜಯನಗರ, ಬಸವನಗುಡಿಯ ಅತ್ಯುತ್ತಮ ಸ್ಥಳವನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ಡಿಸೆಂಬರ್ 1 ನೇ ವಾರದಲ್ಲಿ ನಡೆಯಲಿರುವ ಪ್ರಸಿದ್ಧ ಕಡಲೆಕಾಯಿ ಪರಿಷೆಯನ್ನು ನೀವು ವೀಕ್ಷಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ.

ಬೆಂಗಳೂರಿಗೆ ಭೇಟಿ ನೀಡುವ ಅನೇಕ ಸೆಲೆಬ್ರಿಟಿಗಳು ಅನೇಕ ಸ್ಥಳೀಗಳಲ್ಲಿ ಲಭ್ಯವಿರುವ ರುಚಿಕರವಾದ ದೋಸೆಗಳನ್ನು ತಿನ್ನುವುದನ್ನು ತಪ್ಪಿಸುವುದಿಲ್ಲ. ಇತ್ತೀಚೆಗೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಬೆಂಗಳೂರಿನ ಸ್ಥಳೀಯ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ