545 PSI ಹುದ್ದೆಗಳಿಗೆ ಮರುಪರೀಕ್ಷೆ: ಕಾಲಾವಕಾಶ ನೀಡುವಂತೆ ಪ್ರತಿಭಟನೆಗಿಳಿದ ಅಭ್ಯರ್ಥಿಗಳು ಪೋಲಿಸ್ ವಶಕ್ಕೆ
ಪಿಎಸ್ಐ ಪರೀಕ್ಷೆ ಅಕ್ರಮ ಬಯಲಿಗೆ ಎಳೆದಿದ್ದು ನಾವು. ಈ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಪಾತ್ರ ದೊಡ್ಡದು ಎಂದು ಇಂದು ಪ್ರತಿಭಟನೆಗಿಳಿದಿದ್ದ PSI ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇವಲ 30 ದಿನಗಳ ಕಾಲಾವಕಾಶ ಮಾತ್ರ ಕೊಡಲಾಗಿದೆ. ಕನಿಷ್ಠ 2 ತಿಂಗಳ ಕಾಲಾವಕಾಶ ಕೋರಿ ಸಿಎಂ ನಿವಾಸದ ಮುಂದೆ ಪರೀಕ್ಷಾರ್ಥಿಗಳು ಪ್ರತಿಭಟಿಸಿದ್ದರು.
ಬೆಂಗಳೂರು, ನವೆಂಬರ್ 27: ಡಿಸೆಂಬರ್ 23ರಂದು 545 ಪಿಎಸ್ಐ (PSI recruitment re exam) ಹುದ್ದೆಗಳಿಗೆ ಮರುಪರೀಕ್ಷೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಪಿಎಸ್ಐ ಪರೀಕ್ಷಾರ್ಥಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. PSI ಪರೀಕ್ಷೆ ಅಕ್ರಮ ಬಯಲಿಗೆ ಎಳೆದಿದ್ದು ನಾವು. ಈ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಪಾತ್ರ ದೊಡ್ಡದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಕೇವಲ 30 ದಿನಗಳ ಕಾಲಾವಕಾಶ ನೀಡಿದ್ದಾರೆ. ಕನಿಷ್ಠ 2 ತಿಂಗಳು ಕಾಲಾವಕಾಶ ನೀಡಬೇಕೆಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದಾರೆ.
ಇವತ್ತು ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲು ಮನವಿ ಪತ್ರದೊಂದಿಗೆ PSI ಪರೀಕ್ಷಾರ್ಥಿಗಳು ಆಗಮಿಸಿದ್ದರು. ಈ ವೇಳೆ ವಶಕ್ಕೆ ಪಡೆಯಲಾಗಿದೆ.
ದಿನಾಂಕ ಮುಂದೂಡುವಂತೆ ಆಗ್ರಹ
ಡಿ. 23ಕ್ಕೆ ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ದಿನಾಂಕ ನಿಗದಿ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧ ಪಿಎಸ್‌ಐ ಆಕಾಂಕ್ಷಿಗಳ ಆಕ್ರೋಶ ವ್ಯಕ್ತಪಡಿಸಿದ್ದರು. ಏಕಾಏಕಿ ದಿನಾಂಕ ನಿಗದಿ ಸರಿಯಲ್ಲ. 3 ತಿಂಗಳು ಕಾಲಾವಕಾಶ ಕೊಡುವಂತೆ ಆಗ್ರಹಿಸಿದ್ದರು. ಪರೀಕ್ಷೆಗೆ ಸಂಬಂಧಿಸಿ ಸಾಕಷ್ಟು ಗೊಂದಲಗಳಿವೆ. ಅವು ಮೊದಲು ಪರಿಹಾರ ಆಗಬೇಕು.
ಯಾವ ಮಾದರಿಯಲ್ಲಿ ಪರೀಕ್ಷೆ ಅನ್ನೋದನ್ನು ತಿಳಿಸಿ. ಬಳಿಕವಷ್ಟೇ ಪರೀಕ್ಷೆ ನಡೆಸಿ. ಶಿಕ್ಷೆಗೆ ಸಂಬಂಧಿಸಿದ ಮಸೂದೆ ಮೊದಲು ಜಾರಿ ಮಾಡಲಿ. ಆ ಬಳಿಕ ಪರೀಕ್ಷೆ ನಡೆಸಲಿ. ಡಿ. 23ಕ್ಕೆ ಪರೀಕ್ಷೆ ಬರೆಯಲು ನಾವು ಸಿದ್ಧರಿಲ್ಲ. ಈ ದಿನಾಂಕ ಮುಂದೂಡಬೇಕು. ಕನಿಷ್ಠ 2 ತಿಂಗಳು ಕಾಲಾವಕಾಶ ಕೊಡಬೇಕೆಂದು ಎಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದರು.
ಜನತಾ ದರ್ಶನದ ಮೂಲಕ ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನರ ಸಮಸ್ಯೆ, ಸಂಕಷ್ಟಗಳಿಗೆ ಕಿವಿಗೊಡಲಿದ್ದಾರೆ. ನಾಡಿನ ಪ್ರಜೆಗಳ ಅಹವಾಲು ಸ್ವೀಕರಿಸಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ತಮ್ಮ ಸಮಸ್ಯೆಗಳನ್ನ ಹೊತ್ತು ಬರುವ ಸಾಧ್ಯತೆ ಇದೆ. ಜನರ ಅನುಕೂಲಕ್ಕಾಗಿ 20 ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಜನತಾ ದರ್ಶನ: ನಾಡಿನ ಪ್ರಜೆಗಳ ಕಷ್ಟ ಆಲಿಸಲು ಇಂದು ಇಡೀ ದಿನ ಮೀಸಲಿಟ್ಟ ಸಿದ್ದರಾಮಯ್ಯ
ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಎರಡು ಪ್ರತ್ಯೇಕ ಕೌಂಟರ್ಗಳು ಇರಲಿವೆ. ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಖುದ್ದು ಹಾಜರಿರುವಂತೆ ಸೂಚಿಸಲಾಗಿದೆ. 300ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳದಲ್ಲಿ ಇರಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಯತ್ನ ಮಾಡಲಿದ್ದಾರೆ. ಡಿಸಿಪಿ, ಮೂವರು ಎಸಿಪಿ, 19 ಇನ್ಸ್ಪೆಕ್ಟರ್ ಸೇರಿ 550ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:48 am, Mon, 27 November 23