ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ
School building collapsed In Bengaluru: ಬೆಂಗಳೂರಿನ ಶಿವಾಜಿನಗರದಲ್ಲಿ ನರ್ಸರಿ ಶಾಲೆ ಕಟ್ಟಡವೊಂದು ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ.
ಬೆಂಗಳೂರು, (ನವೆಂಬರ್ 27): ಬೆಂಗಳೂರಿನ ಶಿವಾಜಿನಗರದಲ್ಲಿ(Shivajinagar) ನರ್ಸರಿ ಶಾಲೆ ಕಟ್ಟಡವೊಂದು (School building collapsed) ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.
ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಈ ನರ್ಸರಿ ಶಾಲೆಯಲ್ಲಿ ಸುಮಾರು 70ರಿಂದ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಷ್ಟಕ್ಕೂ ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ನಡೆಸುತ್ತಿರುವುದು ಎಷ್ಟು ಸರಿ. ಒಂದು ವೇಳೆ ಶಾಲಾ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಇದು ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್. ಈ ಸ್ಕೂಲ್ ನಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯ ನಡೆದಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ
ಇನ್ನು ಈ ಘಟನೆ ಬಗ್ಗೆ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಶಿವಾಜಿನಗರದ ಕ್ಷೇತ್ರದಲ್ಲಿ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿದ್ದೇವೆ. ಈಗ ಕುಸಿದಿರುವ ಶಾಲಾ ಕಟ್ಟಡ ಸೇರಿ 3 ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆದಿದ್ದೇವೆ. ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Mon, 27 November 23