ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್; ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ

| Updated By: ಆಯೇಷಾ ಬಾನು

Updated on: Jan 20, 2024 | 6:42 AM

ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ.

ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್; ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ
ಬಿಬಿಎಂಪಿ
Follow us on

ಬೆಂಗಳೂರು, ಜ.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಮಾಯವಾಗ್ತಿರೋ ಹೊತ್ತಲ್ಲೇ, ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ (Kannada Board) ಬಳಸುವಂತೆ ನಿಯಮ ಹಿನ್ನೆಲೆ ಬಿಬಿಎಂಪಿ (BBMP) ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದೆ. ಅಷ್ಟಕ್ಕೂ ಈ ವರೆಗೆ ಬಿಬಿಎಂಪಿ ಅಧಿಕಾರಿಗಳು ಯಾವ ಯಾವ ವಲಯದಲ್ಲಿ ಕನ್ನಡ ಬೋರ್ಡ್ ಅಳವಡಿಕೆಗೆ ನೋಟಿಸ್ ನೀಡಿದೆ ಎಂಬ ಮಾಹಿತಿ ಇಲ್ಲಿದೆ.

ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ – 6762 ಯಲಹಂಕ – 4518, ಬೆಂಗಳೂರು ದಕ್ಷಿಣ – 3747, ಮಹದೇವಪುರ – 4838, ದಾಸರಹಳ್ಳಿ – 1458, ಬೆಂಗಳೂರು ಪಶ್ಚಿಮ – 5650, ಪೂರ್ವ ವಲಯ – 5579 ರಾಜ ರಾಜೇಶ್ವರಿ ವಲಯದಲ್ಲಿ 2010 ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಕನ್ನಡ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಬೋರ್ಡ್​ ಬದಲಾವಣೆಗೆ ಫೆ.28 ಡೆಡ್​​ಲೈನ್​ ನೀಡಿದ ಸಿಎಂ

ಇನ್ನೂ ಈ ಹಿಂದೆ ನಾಮಫಲಕದಲ್ಲಿ ಮೇಲೆ ಕನ್ನಡ ಕೆಳಗಡೆ ಯಾವುದೇ ಭಾಷೆ ಬೇಕಾದರು ಇರಬೇಕು ಎಂದು ಹೇಳಿದ್ದರೂ ಈಗ ಬೋರ್ಡ್ ನಲ್ಲಿ ಕನ್ನಡ 60% ಇರಬೇಕು ಅಂತ ಹೇಳುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ಡ್ ಅಳವಡಿಸಿದ್ದೇವೆ ಈಗ ಮತ್ತೆ ಬೋರ್ಡ್ ಅಳವಡಿಸೋದು ಕಷ್ಟ ಎಂದು ಕೆಲ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಒಂದೆಡೆಗೆ ಬಿಬಿಎಂಪಿ ಕನ್ನಡ ಬೋರ್ಡ್ ಅಳವಡಿಕೆಗೆ ನೋಟಿಸ್ ನೀಡುವ ಮೂಲಕ ಕೈ ತೊಳೆದುಕೊಳ್ಳುತ್ತಿದೆ. ಅತ್ತ ನೋಡಿದ್ರೆ ಅಂಗಡಿಯವರು ಬೋರ್ಡ್ ಅಳವಡಿಕೆ ಕಷ್ಟ ಎನ್ನುತ್ತಿದ್ದಾರೆ. ಈ ಬಗ್ಗೆ ಏನೆಂಬುದು ಪೆಬ್ರವರಿ 28 ರ ಬಳಿಕ ಗೊತ್ತಾಗಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ