ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳವಾಗಿದ್ದು ಯುವತಿಯ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕ್ಯಾಂಟೀನ್ನಲ್ಲಿ ಯುವತಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಮೊದಲಿಗೆ, ಇಬ್ಬರು ಯುವತಿಯರ ನಡುವೆ ಜಗಳ ಶುರುವಾಗುತ್ತೆ. ವಾಗ್ವಾದ ನಡೆಯುತ್ತೆ. ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರೂ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಾರೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡು ಕೆಟ್ಟ ಕೆಟ್ಟ ಶಬ್ದಗಳಿಂದ ಜಗಳವಾಡಿ, ಕೆಟ್ಟದಾಗಿ ಬೆರಳು ತೋರಿಸುತ್ತ ವರ್ತಿಸಿರುವುದನ್ನು ವಿಡಿಯೋ ಮಾಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಸಹಾಯದ ಅಗತ್ಯವಿದೆ ಎಂದು ಸೂಚಿಸುವ ಚಿಹ್ನೆಗಳಿವು
Kalesh B/w Two Girls In College Canteen (DSCE, Bangalore) pic.twitter.com/E5b165yH2w
— r/Ghar Ke Kalesh (@gharkekalesh) October 9, 2022
ಈ ಯುವತಿಯರ ನಡುವೆ ಜಗಳ ಆಗಲು ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಆದ್ರೆ ಯುವತಿಯರು ಹೊಡೆದಾಡಿಕೊಂಡರೂ ಯಾರು ಸಹಾಯಕ್ಕೆ ಬರಾದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇನ್ನು ಇದೇ ರೀತಿಯ ಘಟನೆ ಇತ್ತೀಚೆಗೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಬ್ಬರು ಮಹಿಳೆಯರು ತೂಕದ ಯಂತ್ರಕ್ಕಾಗಿ ಜಗಳ ಮಾಡಿದ್ದರು. ವೀಡಿಯೊದಲ್ಲಿ, ಗುಲಾಬಿ ಬಣ್ಣದ ಬಿಗಿಯುಡುಪು ಧರಿಸಿದ ಮಹಿಳೆ ತೂಕದ ಯಂತ್ರವನ್ನು ಬಳಸಲು ತನ್ನ ಸರದಿಗಾಗಿ ಕಾಯುತ್ತಿದ್ದಳು. ಅಷ್ಟರಲ್ಲಿ ಹಸಿರು ಟೀ ಶರ್ಟ್ ತೊಟ್ಟ ಮತ್ತೊಬ್ಬ ಮಹಿಳೆ ಆ ಯಂತ್ರದತ್ತ ಧಾವಿಸಿ ಅವಳನ್ನು ತಳ್ಳುತ್ತಾಳೆ. ನಂತರ ಇಬ್ಬರೂ ಮಹಿಳೆಯರು ಜಗಳವಾಡುತ್ತಾರೆ, ಒಬ್ಬರನ್ನೊಬ್ಬರು ಕಪಾಳಮೋಕ್ಷ ಮಾಡುತ್ತಾರೆ ಮತ್ತು ಪರಸ್ಪರರ ಕೂದಲನ್ನು ಎಳೆದಾಡಿಕೊಂಡು ಜಗಳವಾಡಿದ್ದರು. ಈ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:03 am, Tue, 11 October 22