ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ಫೈನಾನ್ಶಿಯರ್ ಕಚೇರಿಯಲ್ಲೇ ನೇಣಿಗೆ ಶರಣಾದ ಘಟನೆ ಯಲಚೇನಹಳ್ಳಿಯ ಇಂಡಸ್ಟ್ರಿಯಲ್‌ನ ಕಚೇರಿಯಲ್ಲಿ ನಡೆದಿದೆ. ರಾಜು ಆತ್ಮಹತ್ಯೆ ಮಾಡಿಕೊಂಡ ಫೈನಾನ್ಶಿಯರ್.
ಬೆಳಗ್ಗೆ 7 ಗಂಟೆ ಸುಮಾರಿಗೆ ಯಲಚೇನಹಳ್ಳಿಯ ಇಂಡಸ್ಟ್ರಿಯಲ್‌ನ ಕಚೇರಿಯಲ್ಲಿ ರಾಜು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಇತ್ತೀಚೆಗೆ ಹಣಕಾಸಿನ ವಿಚಾರವಾಗಿ ಕೆಲ ಮಾತುಕತೆ ನಡೆದಿತ್ತು. ಇದೇ ವಿಚಾರವಾಗಿ ರಾಜು ಕಳೆದ ಮೂರು ದಿನಗಳ ಹಿಂದೆ ಸಿಸಿಬಿ ವಿಚಾರಣೆಗೂ ಹೋಗಿಬಂದಿದ್ದ. ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ವೆಲ್ಡಿಂಗ್ ವ್ಯವಹಾರ ನಡೆಸುತಿದ್ದ ರಾಜು ಕೊರೊನಾ ಬಂದ ಬಳಿಕ ಚೀಟಿ ವ್ಯವಹಾರ ನಡೆಸುತಿದ್ದ. ಈ ವೇಳೆ ಹಣ ವಾಪಸ್ಸು ನೀಡುವ ವಿಚಾರವಾಗಿ ಮೂವರು ಗೆಳೆಯರ ನಡುವೆ ಸಮಸ್ಯೆ ಎದುರಾಗಿದೆ. ಇದೇ ವಿಚಾರವಾಗಿ ನಿರಂಜನ್ ಎಂಬ ವ್ಯಕ್ತಿ ರಾಜು ವಿರುದ್ಧ ಸಿಸಿಬಿಗೆ ಅರ್ಜಿ ಸಲ್ಲಿಸಿದ್ದ. ಹೀಗಾಗಿ ಗೆಳೆಯರೇ ಹಣದ ವಿಚಾರವಾಗಿ ಕಿರುಕುಳ ನೀಡಿದ ಹಿನ್ನೆಲೆ ಇಂದು ಕಚೇರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿ ಬಂದಿದೆ.
ಇನ್ನು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಶೋಭಾ ಹಂಗನಕಟ್ಟಿ(10) ಮೃತ ಬಾಲಕಿ. ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಾರದ ಹಿನ್ನೆಲೆ ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ. ಶಿಹರಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ‘ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ; ಮತ್ತೆ ದೇವರು ಯಾಕೆ ನೋವು ಕೊಡ್ತಾನೋ ಗೊತ್ತಿಲ್ಲ’: ಶಿವರಾಂ ಬಗ್ಗೆ ಶಿವಣ್ಣನ ಮಾತು