ಬಾಬ್ರಿ ಮಸೀದಿ ರೀತಿ ಮೈದಾನದ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಎಫ್ಐಆರ್ ದಾಖಲು

| Updated By: ಆಯೇಷಾ ಬಾನು

Updated on: Aug 09, 2022 | 9:54 PM

ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹರ್ಧತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಹೇಳಿಕೆ ನೀಡಿದ್ದಾರೆ.

ಬಾಬ್ರಿ ಮಸೀದಿ ರೀತಿ ಮೈದಾನದ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಎಫ್ಐಆರ್ ದಾಖಲು
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದ(chamrajpet Idgah Maidan) ವಿವಾದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಬ್ರಿ ಮಸೀದಿ ರೀತಿ ಮೈದಾನದ ಗೋಡೆ ಕೆಡುವುದಾಗಿ ಹೇಳಿದ್ದರು. ಹೀಗಾಗಿ ಭಾಸ್ಕರನ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಒಂದು ವರ್ಷದಿಂದ ಈದ್ಗಾ ಮೈದಾನದ ವಾರಸುದಾರಿಕೆ ವಿಚಾರಕ್ಕೆ ಚರ್ಚೆ ನಡೆಯುತ್ತಿದೆ. ಹಿಂದೂಪರ ಸಂಘಟನೆ, ಬಿಬಿಎಂಪಿ ಹಾಗೂ ಮುಸ್ಲಿಂ ವಕ್ಫ್ ಬೋರ್ಡ್ ನಡುವೆ ಸಂಘರ್ಷ ನಡೆಯುತ್ತಿತ್ತು. ಸದ್ಯ ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಾಗಿದೆ. ಎಲ್ಲರೂ ಆಟದ ಮೈದಾನ ಬಳಸಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ 6 ರೊಳಗೆ ಈದ್ಗಾ ಮೈದಾನದ ಗೋಡೆ ಕೆಡವಬೇಕು. ನಾವು ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ. ಈಗಾಗಲೇ ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ತಯಾರಿ ನಡೆಸಿದ್ದೇವೆ. ಕರ್ನಾಟಕ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರದ ಹಿಂದೂಪರ ಸಂಘಟನೆಗಳ ಜೊತೆ ಟಚ್ನಲ್ಲಿ ಇದ್ದೇವೆ ಎಂದು ಭಾಸ್ಕರನ್ ಹೇಳಿದ್ದರು.

ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹರ್ಧತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಹೇಳಿಕೆ ನೀಡಿದ್ದಾರೆ. ಅಲ್ಲದೇ ಡಿಸೆಂಬರ್ 6 ಡೇಟ್ ಬರೆದಿಟ್ಟುಕೊಳ್ಳಿ. ಈದ್ಗಾ ಮೈದಾನ ಗೋಡೆ ನೆಲಸಮ ಆಗುವುದು ಖಚಿತ ಎಂದು ಭಾಸ್ಕರನ್ ಹೇಳಿಕೆ ನೀಡಿದ್ದಾರೆ ಎಂದು ಪಿಎಸ್ಐ ನಾಗೇಂದ್ರ ದೂರು ದಾಖಲಿಸಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:54 pm, Tue, 9 August 22