ಬೆಂಗಳೂರಿನ ಫೋರಂ ಮಾಲ್ ಬಳಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ

| Updated By: ವಿವೇಕ ಬಿರಾದಾರ

Updated on: Oct 18, 2023 | 4:32 PM

ಬೆಂಗಳೂರಿನ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಬೆಂಗಳೂರು ಅ.18: ನಗರದ ಕೊರಮಂಗಲದ (Koramangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8ರಿಂದ 10 ಸಿಲಿಂಡರ್​ಗಳು  ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದಾರೆ. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಾಲ್ಕು ಮಹಡಿಯ ​ಕಟ್ಟಡದಲ್ಲಿ, ಗ್ರೌಂಡ್ ಮತ್ತು ಮೊದಲ ಮಹಡಿಯಲ್ಲಿ ಕಾರು ಷೋ ರೂಂ ಇದೆ. ಎರಡು ಮತ್ತು ಮೂರನೇ ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಆರನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಹುರಿತಿತ್ತು. ಬೆಂಕಿ ಐದನೇ ಮಹಡಿಗೂ ಆವರಿಸಿತ್ತು. ಅಲ್ಲಿ ಸದ್ಯ ಯಾರು ಇರಲಿಲ್ಲ. ಒಟ್ಟು ಆರು ಗ್ಯಾಸ್ ಸಿಲಿಂಡರ್​ಗಳಿದ್ದವು. ನಾಲ್ಕು ಬ್ಲಾಸ್ಟ್ ಆಗಿವೆ, ಇನ್ನು ಎರಡು ಸಿಲೆಂಡರ್​​ಗಳು ಬ್ಲಾಸ್ಟ್​ ಆಗದ ಹಾಗೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

8-10 ಸಿಲಿಂಡರ್​ಗಳು ಇದ್ದವು. ಬ್ಲಾಸ್ಟ್ ಗೊತ್ತಾಗುತಿದ್ದಂತೆ ಕಟ್ಟಡ ಅಂಚಿಗೆ ಬಂದಿದ್ದಾನೆ. ನಂತರ ಬೆಂಕಿಗೆ ಸುಟ್ಟು ಹೋಗುತ್ತೇನೆ ಎಂದು ಕೆಳಗೆ ಹಾರಿದ್ದಾನೆ. ಹುಕ್ಕಾ ಬಾರ್​ನಲ್ಲಿ ಇದ್ದ ಸಿಲಿಂಡರ್​ನಿಂದ ಇಷ್ಟೆಲ್ಲಾ ದುರಂತ ಆಗಿದೆ. ರೂಫ್ ಟಾಪ್ ಸಂಪೂರ್ಣ ಭಸ್ಮವಾಗಿದೆ. ಫರ್ನಿಚರ್ ಮತ್ತು ಬೆಂಡುಗಳಿಂದ ಡೆಕೋರೆಶನ್ ಮಾಡಲಾಗಿತ್ತು ಹೀಗಾಗಿ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬಂದಾಗ ಪಕ್ಕದ ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತಿತ್ತು. ಈ ವೇಳೆ ಮೊದಲಿಗೆ ಪಕ್ಕದಕಟ್ಟಡ ಬೆಂಕಿ ನಂದಿಸಿ ನಂತರ ಬೆಂಕಿ ಹೊತ್ತಿದ್ದ ಕಟ್ಟಡ ಬೆಂಕಿಯನ್ನು ಹತೋಟಿಗೆ ಪಡೆದಿದ್ದಾರೆ.

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗೆ ತಿಲಕ್​​ ನಗರದ ಕೆಜಿಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರೆಸ್ಟೋರೆಂಟ್​​​ ಇದೆ. ರೆಸ್ಟೋರೆಂಟ್​ನ ಕೊಠಡಿಯಲ್ಲಿ 8-10 ಸಿಲಿಂಡರ್​ ಸಂಗ್ರಹಿಸಲಾಗಿತ್ತು. ಸಿಲಿಂಡರ್​​ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಮಾಹಿತಿ ದೊರೆತಿದೆ ಎಂದು ಅಗ್ನಿಶಾಮಕ ದಳ ಎಡಿಜಿಪಿ ಹರಿಶೇಖರನ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Wed, 18 October 23