ಯಾರೂ ಅಳೆಯಲಾಗದಷ್ಟು ಹತಾಶೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರಲ್ಲಿ ಮಡುಗಟ್ಟಿದೆ: ಡಿಕೆ ಶಿವಕುಮಾರ್
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರಿಗೆ ಆಮಿಶ ಒಡ್ಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್, ಪಕ್ಷದ ಶಾಸಕರು ಯಾರೆಲ್ಲ ತಮ್ಮನ್ನು ಭೇಟಿಯಾಗಿದ್ದಾರೆ, ಏನೆಲ್ಲ ಆಮಿಶ ಒಡ್ಡಿದ್ದಾರೆ ಅನ್ನೋದನ್ನು ಸಿದ್ದರಾಮಯ್ಯ ಮತ್ತು ತಮ್ಮ ಮುಂದೆ ಹೇಳಿದ್ದಾರೆ, ವಿಧಾನ ಸಭಾ ಅಧಿವೇಶನದಲ್ಲಿ ತಮ್ಮ ಶಾಸಕರಿಂದಲೇ ಎಲ್ಲವನ್ನು ಬಹಿರಂಗಪಡಿಸುವುದಾಗಿ ಹೇಳಿದರು.
ಬೆಂಗಳೂರು: ರಾಜಕಾರಣಿಗಳಿಗೆ ಯಾವುದಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ನೇರವಾಗಿ, ನಿರ್ದಿಷ್ಟವಾಗಿ ಉತ್ತರ ನೀಡುವ ಜಾಯಮಾನ ಅವರದಲ್ಲ ಮಾರಾಯ್ರೇ. ಇವತ್ತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ, ರಮೇಶ್ ಜಾರಕಿಹೊಳಿ (Ramesh Jarkiholi) ಮಂಗಳವಾರದಂದು ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಭೇಟಿಯಾಗಿದ್ದು ಯಾಕೆ, ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುತ್ತಿದ್ದಾರಾ ಅಂತ ಕೇಳಿದಾಗ ಹೌದು ಅಥವಾ ಇಲ್ಲ ಅಂತ ಹೇಳುವ ಬದಲು, ಎಲ್ಲರ ಮೇಲೂ ಅನುಮಾನಪಟ್ಟುಕೊಳ್ಳಲಾಗಲ್ಲ, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹತಾಶ ಸ್ಥಿತಿಯಲ್ಲಿದ್ದಾರೆ, ಅವರಲ್ಲಿ ಯಾವಮಟ್ಟಿಗೆ ಹತಾಶೆ ಮಡುಗಟ್ಟಿದೆ ಅನ್ನೋದನ್ನು ವೈದ್ಯರೇ ಅಳೆಯಬೇಕು. ಜಗದೀಶ್ ಶೆಟ್ಟರ್ ತಮ್ಮ ಶಕ್ತಿ ಏನು ಅನ್ನೋದನ್ನು ತೋರಿಸಿದ್ದಾರೆ ಅಂತ ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರಿಗೆ ಆಮಿಶ ಒಡ್ಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್, ಪಕ್ಷದ ಶಾಸಕರು ಯಾರೆಲ್ಲ ತಮ್ಮನ್ನು ಭೇಟಿಯಾಗಿದ್ದಾರೆ, ಏನೆಲ್ಲ ಆಮಿಶ ಒಡ್ಡಿದ್ದಾರೆ ಅನ್ನೋದನ್ನು ಸಿದ್ದರಾಮಯ್ಯ ಮತ್ತು ತಮ್ಮ ಮುಂದೆ ಹೇಳಿದ್ದಾರೆ, ವಿಧಾನ ಸಭಾ ಅಧಿವೇಶನದಲ್ಲಿ ತಮ್ಮ ಶಾಸಕರಿಂದಲೇ ಎಲ್ಲವನ್ನು ಬಹಿರಂಗ ಪಡಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ