ಸತೀಶ್ ಜಾರಕಿಹೊಳಿ ಜೊತೆ ಯಾವ ವೈಮನಸ್ಸೂ ಇಲ್ಲ, ಅದು ಬಿಜೆಪಿ ಹಾಗೂ ಮಾಧ್ಯಮದ ಸೃಷ್ಟಿ: ಡಿಕೆ ಶಿವಕುಮಾರ್, ಡಿಸಿಎಂ

ಸತೀಶ್ ಜಾರಕಿಹೊಳಿ ಜೊತೆ ಯಾವ ವೈಮನಸ್ಸೂ ಇಲ್ಲ, ಅದು ಬಿಜೆಪಿ ಹಾಗೂ ಮಾಧ್ಯಮದ ಸೃಷ್ಟಿ: ಡಿಕೆ ಶಿವಕುಮಾರ್, ಡಿಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 18, 2023 | 2:01 PM

ಇವತ್ತು ಬೆಳಗಾವಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಸತೀಶ್ ಜಾರಕಿಹೊಳಿ ಅವರಂತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸಹ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಆದರೆ ಶಿವಕುಮಾರ್ ಅದೊಂದು ವಿಷಯವೇ ಅನ್ನೋ ಹಾಗೆ ಮಾತಾಡಿದರು. ಸತೀಶ್ ಜಾರಕಿಹೊಳಿ ಅವರು ಶಿವಕುಮಾರ್ ಅವರ ಅನುಮತಿ ಪಡೆದೇ ರಾಜ್ಯದ ಪ್ರವಾಸ ಮಾಡಬೇಕೆಂದಿರುವ ವಿಷಯ ಕೇಳಿದಾಗ, ಅವರು ತನ್ನಲ್ಲಿಗೆ ಬಂದಿದ್ದು ನಿಜ ಆದರೆ ಪ್ರವಾಸದ ಬಗ್ಗೆ ಮಾತಾಡಲಿಲ್ಲ ಎಂದರು.

ಬೆಳಗಾವಿ: ಬೆಳಗಾವಿ ತಲುಪಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ತಮ್ಮ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಯಾವುದೇ ವೈಮನಸ್ಸಿಲ್ಲ, ಬಿಜೆಪಿ ಹಾಗೂ ಮಾಧ್ಯಮದವರಿಗೆ ಸುದ್ದಿ ಬೇಕು ಹಾಗಾಗಿ ಮುನಿಸಿನ ಸುಳ್ಳು ವದಂತಿ ಹಬ್ಬಿಸಲಾಗಿದೆ ಎಂದು ಹೇಳಿದರು. ಸತೀಶ್ ಒಬ್ಬರೇ ಅಂತಲ್ಲ, ಎಲ್ಲ 136 ಶಾಸಕರ ಜೊತೆ ತನಗೆ ಉತ್ತಮ ಬಾಂಧವ್ಯವಿದೆ, ಮುನಿಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗೋದೇ ಇಲ್ಲ ಎಂದು ಅವರು ಹೇಳಿದರು. ಅವರ ಮಾತಿನ ಅರ್ಥ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರೊಂದಿಗೂ ತನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಅಂತಾಗಿತ್ತೇ? ಯಾಕೆಂದರೆ, ಇವತ್ತು ಬೆಳಗಾವಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಸತೀಶ್ ಜಾರಕಿಹೊಳಿ ಅವರಂತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸಹ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಆದರೆ ಶಿವಕುಮಾರ್ ಅದೊಂದು ವಿಷಯವೇ ಅನ್ನೋ ಹಾಗೆ ಮಾತಾಡಿದರು. ಸತೀಶ್ ಜಾರಕಿಹೊಳಿ ಅವರು ಶಿವಕುಮಾರ್ ಅವರ ಅನುಮತಿ ಪಡೆದೇ ರಾಜ್ಯದ ಪ್ರವಾಸ ಮಾಡಬೇಕೆಂದಿರುವ ವಿಷಯ ಕೇಳಿದಾಗ, ಅವರು ತನ್ನಲ್ಲಿಗೆ ಬಂದಿದ್ದು ನಿಜ ಆದರೆ ಪ್ರವಾಸದ ಬಗ್ಗೆ ಮಾತಾಡಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ