ದುಡ್ಡು ಚೆಲ್ಲುವುದು ಅವರ ಸಂಪ್ರದಾಯವಾಗಿದ್ದರೆ ನಾನದನ್ನು ಬದಲಾಯಿಸಬೇಕಿತ್ತೇ? ಶಿವಾನಂದ ಪಾಟೀಲ್, ಸಕ್ಕರೆ ಸಚಿವ

ದುಡ್ಡು ಚೆಲ್ಲುವುದು ಅವರ ಸಂಪ್ರದಾಯವಾಗಿದ್ದರೆ ನಾನದನ್ನು ಬದಲಾಯಿಸಬೇಕಿತ್ತೇ? ಶಿವಾನಂದ ಪಾಟೀಲ್, ಸಕ್ಕರೆ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 18, 2023 | 4:14 PM

ತಾನು ಹೈದರಾಬಾದ್ ಗೆ ಹೋಗಿದ್ದು ಮದುವೆಯೊಂದರಲ್ಲಿ ಪಾಲ್ಗೊಳ್ಳಲು, ದುಡ್ಡು ಚೆಲ್ಲಿ ಕುಣಿಯುವುದು ಮದುವೆ ಮನೆಯ ಸಂಪ್ರದಾಯವಾಗಿದ್ದರೆ ತಾನದನ್ನು ತಡೆಯಲಾಗುತ್ತೆಯೇ? ಯಾವುದು ವಿಷಯ ಯಾವುದು ವಿಷಯ ಅಲ್ಲ ಅನ್ನೋದು ಸಹ ಬಿಜೆಪಿ ನಾಯಕರಿಗೆ ಗೊತ್ತಾಗುತ್ತಿಲ್ಲವಲ್ಲ? ಎಂದು ಪಾಟೀಲ್ ಹೇಳಿದರು.

ಬೆಂಗಳೂರು: ಹೈದರಾಬಾದ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಜ್ಯದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ (Shivanand Patil) ನೋಟುಗಳ ಮೇಲೆ ನಡೆದಾಡಿದರೆಂಬ ಆರೋಪಕ್ಕೆ ಒಳಗಾಗಿದ್ದು ಬಿಜೆಪಿ ನಾಯಕರು (BJP leaders) ಇದನ್ನು ದೊಡ್ಡ ಇಶ್ಯೂ ಮಾಡಿ, ಒಂದೆಡೆ ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದರೆ ಪಾಟೀಲರು ದುಡ್ಡನ್ನು ಕಾಲ ಕೆಳಗೆ ಹಾಕಿ ತುಳಿಯುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಟೀಕೆಗಳಿಗೆ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಿವಾನಂದ ಪಾಟೀಲ್ ಟೀಕೆಗಳನ್ನು ಲೇವಡಿ ಮಾಡಿದರು. ತಾನು ಹೈದರಾಬಾದ್ ಗೆ ಹೋಗಿದ್ದು ಮದುವೆಯೊಂದರಲ್ಲಿ (wedding ceremony) ಪಾಲ್ಗೊಳ್ಳಲು, ದುಡ್ಡು ಚೆಲ್ಲಿ ಕುಣಿಯುವುದು ಮದುವೆ ಮನೆಯ ಸಂಪ್ರದಾಯವಾಗಿದ್ದರೆ ತಾನದನ್ನು ತಡೆಯಲಾಗುತ್ತೆಯೇ? ಯಾವುದು ವಿಷಯ ಯಾವುದು ವಿಷಯ ಅಲ್ಲ ಅನ್ನೋದು ಸಹ ಬಿಜೆಪಿ ನಾಯಕರಿಗೆ ಗೊತ್ತಾಗುತ್ತಿಲ್ಲವಲ್ಲ? ಎಂದು ಪಾಟೀಲ್ ಹೇಳಿದರು. ಮುಂದುವರಿದು ಮಾತಾಡಿದ ಅವರು, ಹಣ ಚೆಲ್ಲುವ ಕಾರ್ಯಕ್ರಮ ಒಂದೆಡೆ ನಡೆದರೆ ತಾನಿದ್ದಿದ್ದು ಮತ್ತೊಂದು ಜಾಗದಲ್ಲಿ, ಬಿಜೆಪಿ ನಾಯಕರು ಹೇಳಿದ್ದಾರೆ ಅಂತ ಇಂಥ ಪ್ರಶ್ನೆಗಳನ್ನು ಕೇಳುತ್ತೀರಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ