‘ರೋಮಾಂಚನ ಆಯಿತು’; ತೀರ್ಥೋದ್ಭವ ನೋಡಿ ಪುಳಕಿತರಾದ ಹರ್ಷಿಕಾ-ಭುವನ್
ನವ ದಂಪತಿ ಭುವನ್ ಪೊನ್ನಣ್ಣ-ಹರ್ಷಿಕಾ ಪೂಣಚ್ಚ ತೀರ್ಥೋಧ್ಬವದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಇಬ್ಬರೂ ಕೊಡವ ಶೈಲಿಯ ಉಡುಗೆ ತೊಟ್ಟಿದ್ದರು.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಇಂದು (ಅಕ್ಟೋಬರ್ 18) ತೀರ್ಥ ಉದ್ಭವ ಆಗಿದೆ. ಸಾವಿರಾರು ಭಕ್ತರು ಇದನ್ನು ನೋಡಿ ಪುನೀತರಾಗಿದ್ದಾರೆ. ನವ ದಂಪತಿ ಭುವನ್ ಪೊನ್ನಣ್ಣ-ಹರ್ಷಿಕಾ ಪೂಣಚ್ಚ (Harshika Poonacha) ಕೂಡ ಭಾಗಿ ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಇಬ್ಬರೂ ಕೊಡವ ಶೈಲಿಯ ಉಡುಗೆ ತೊಟ್ಟಿದ್ದರು. ‘ನಾನು ಇಷ್ಟು ದಿನ ತೀರ್ಥೋದ್ಭವವನ್ನು ಟಿವಿಯಲ್ಲಿ ನೋಡುತ್ತಿದ್ದೆ. ಇದೇ ಮೊದಲ ಬಾರಿಗೆ ಈ ಜಾಗಕ್ಕೆ ಬಂದು ನೇರವಾಗಿ ಇದನ್ನು ವೀಕ್ಷಿಸಿದ್ದೇನೆ. ನಿಜಕ್ಕೂ ರೋಮಾಂಚನ ಎನಿಸಿತು’ ಎಂದಿದ್ದಾರೆ ಹರ್ಷಿಕಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos