ತಲಕಾವೇರಿಯಲ್ಲಿ ರಾತ್ರಿ ಘಟಿಸಿದ ತೀರ್ಥೋದ್ಭವದ ಅಮೃತ ಘಳಿಗೆಯನ್ನು ವೀಕ್ಷಿಸಿ ಪುನೀತರಾದ ಸಂಸದ ಪ್ರತಾಪ ಸಿಂಹ

ತಲಕಾವೇರಿಯಲ್ಲಿ ರಾತ್ರಿ ಘಟಿಸಿದ ತೀರ್ಥೋದ್ಭವದ ಅಮೃತ ಘಳಿಗೆಯನ್ನು ವೀಕ್ಷಿಸಿ ಪುನೀತರಾದ ಸಂಸದ ಪ್ರತಾಪ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 18, 2023 | 10:35 AM

ಪುಷ್ಕರಿಣಿಯ ಮೆಟ್ಟಿಲುಗಳ ಮೇಲೆ ಪ್ರತಾಪ್ ಸಿಂಹ ಜೊತೆ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಮತ್ತು ಭುವನ್ ನಿಂತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಟಿವಿ9 ಕನ್ನಡ ವಾಹಿನಿ ಈ ಅಮೃತ ಘಳಿಗೆಯ ನೇರ ಪ್ರಸಾರ ಮಾಡಿದ್ದರಿಂದ ಕೋಟ್ಯಾಂತರ ಕನ್ನಡಿಗರು ತಮ್ಮ ತಮ್ಮ ಮನೆಗಳಲ್ಲಿ ಕೂತು ಅದನ್ನು ವೀಕ್ಷಿಸುವ ಮೂಲಕ ಪುನೀತ ಭಾವ ತಳೆದರು.

ಮಡಿಕೇರಿ: ಕಳೆದ ರಾತ್ರಿ ನಡೆದ ಮೈನವಿರೇಳಿಸುವ ದೃಶ್ಯವಿದು. ಸಾವಿರಾರರು ಭಕ್ತರು ಆ ಸಂದರ್ಭದಲ್ಲಿ ಹಾಜರಿದ್ದು ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ (Talacauvery) ಮಧ್ಯರಾತ್ರಿ 1.27 ಕ್ಕೆ ತಮ್ಮ ಕಣ್ಣೆದಿರು ಸಂಭವಿಸಿದ ತೀರ್ಥೋದ್ಭವವನ್ನು (Theerthodbhava) ನೋಡಿ ಕೃತಾರ್ಥರಾದರು. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯಗಳಿಗೆಯಲ್ಲಿ ಬ್ರಹ್ಮಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ನೆರೆದ ಭಕ್ತರಿಗೆ ದರ್ಶನ ನೀಡಿದಳು. ಹಲವಾರು ಅರ್ಚಕರ, ಪಂಡಿತರ ಮಂತ್ರಘೋಷದ ನಡುವೆ ತೀರ್ಥೋದ್ಭವ ಸಂಭವಿಸಿತು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಸ್ಥಳದಲ್ಲಿ ಉಪಸ್ಥಿತರಿದ್ದರು. ಪುಷ್ಕರಿಣಿಯ ಮೆಟ್ಟಿಲುಗಳ ಮೇಲೆ ಪ್ರತಾಪ್ ಸಿಂಹ ಜೊತೆ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಮತ್ತು ಭುವನ್ ನಿಂತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಟಿವಿ9 ಕನ್ನಡ ವಾಹಿನಿ ಈ ಅಮೃತ ಘಳಿಗೆಯ ನೇರ ಪ್ರಸಾರ ಮಾಡಿದ್ದರಿಂದ ಕೋಟ್ಯಾಂತರ ಕನ್ನಡಿಗರು ತಮ್ಮ ತಮ್ಮ ಮನೆಗಳಲ್ಲಿ ಕೂತು ಅದನ್ನು ವೀಕ್ಷಿಸುವ ಮೂಲಕ ಪುನೀತ ಭಾವ ತಳೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ