ಕಾವೇರಿ ತೀರ್ಥೋದ್ಭವದ ಚರಿತ್ರೆ ಬಗ್ಗೆ ನಿಮಗೆ ಗೊತ್ತಾ ? ಇಲ್ಲಿದೆ ವಿಡಿಯೋ
ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿ, ಬಳಿಕ ಕಾವೇರಿಯನ್ನು ವಿವಾಹವಾಗುತ್ತಾನೆ. ಆದರೆ, ಒಂದಿನ ಸಂಧ್ಯಾವಂದನೆ ಮಾಡಲು ತೆರಳುವಾಗ ಕಾವೇರಿಯನ್ನು ಮಂತ್ರಿಸಿ ನೀರಿನ ರೂಪ ಮಾಡಿ ತನ್ನ ಕಮಂಡಲಿನಲ್ಲಿ ಮುಚ್ಚಿಟ್ಟು ಹೊಗುತ್ತಾನೆ. ಇದೇ ಸಂದರ್ಭ ಕಾಗೆ ರೂಪದಲ್ಲಿ ಬಂದ ಗಣೇಶ ಕಮಂಡಲಿನಿಯನ್ನು ಮಗಚುತ್ತಾನೆ. ಅಲ್ಲಿಂದ ಕಾವೇರಿ ಬ್ರಹ್ಮಗಿರಿಯಿಂದ ನೀರಿನ ರೂಪದಲ್ಲಿ ನದಿಯಾಗಿ ಹರಿಯುತ್ತಾಳೆ.
ಕೊಡಗು, ಅ.17: ತಲಕಾವೇರಿ ತೀರ್ಥೋದ್ಭವ(Talacauvery Theerthodbhava) ದ ಚರಿತ್ರೆ ಬಗ್ಗೆ ಭಕ್ತರಾದ ಉಳ್ಳಿಯಡ ಎಂ ಪೂವಯ್ಯ ಅವರು ವಿವರಿಸಿದ್ದು ‘ಕೊಡಗಿನ ಬ್ರಹ್ಮಗಿರಿ ಎಂಬ ತಪೋ ಭೂಮಿಯಲ್ಲಿ ನೆಲೆಸಿದ್ದ ಕಾವೇರ ಎಂಬ ಮುನಿಗೆ ಮಕ್ಕಳಿರಲಿಲ್ಲ. ಮಕ್ಕಳಿಗಾಗಿ ಬ್ರಹ್ಮದೇವನ ನೆನೆದು ಪ್ರಾರ್ಥನೆ ಮಾಡುತ್ತಾರೆ. ಕಾವೇರನ ಬೇಡಿಕೆಗೆ ಮಣಿದ ಬ್ರಹ್ಮ, ತನ್ನ ಮಗಳು ಲೋಪಮುದ್ರೆಯನ್ನು ದತ್ತು ನೀಡುತ್ತಾನೆ. ಲೋಪ ಮುದ್ರೆಯನ್ನು ಋಷಿ ಮುನಿಯಾದ ಕಾವೇರನು ದತ್ತು ಪುತ್ರಿಯಾಗಿ ಪಡೆದು ಅವಳೇ ಮುಂದೆ ಕಾವೇರಿಯಾಗುತ್ತಾಳೆ. ನಂತರ ಒಮ್ಮೆ ಅಗಸ್ತ್ಯ ಮುನಿ ಬ್ರಹ್ಮಗಿರಿಗೆ ಬರುತ್ತಾನೆ. ಬಹಳ ರೂಪವತಿಯಾಗಿದ್ದ ಕಾವೇರಿಗೆ ಮನಸೋಲುತ್ತಾನೆ. ವಿವಾಹ ಮಾಡಿಕೊಡುವಂತೆ ಕಾವೇರ ಮುನಿಗೆ ಬೇಡುತ್ತಾನೆ. ಆದರೆ, ಕಾವೇರಿಗೆ ಲೋಕ ಕಲ್ಯಾಣ ಮಾಡುವಾಸೆ ಇದ್ದು, ವಿವಾಹಕ್ಕೆ ಒಪ್ಪುವುದಿಲ್ಲ. ಕೊನೆಗೆ ಒಂದು ಷರತ್ತಿನೊಂದಿಗೆ ಅಗಸ್ತ್ಯ ಮುನಿಯ ಪತ್ನಿಯಾಗಲು ಒಪ್ಪುತ್ತಾಳೆ. ಅಗಸ್ತ್ಯ ಮುನಿ ಯಾವುದೇ ಕಾರಣಕ್ಕೂ ನನ್ನನ್ನು ಒಂದು ಕ್ಷಣವೂ ಬಿಟ್ಟಿರಕೂಡದು ಎಂಬ ಷರತ್ತು ಹಾಕುತ್ತಾಳೆ. ಷರತ್ತಿಗೆ ಒಪ್ಪಿದ ಅಗಸ್ತ್ಯ, ಬಳಿಕ ಕಾವೇರಿಯನ್ನು ವಿವಾಹವಾಗುತ್ತಾನೆ. ಆದರೆ, ಒಂದಿನ ಸಂಧ್ಯಾವಂದನೆ ಮಾಡಲು ತೆರಳುವಾಗ ಕಾವೇರಿಯನ್ನು ಮಂತ್ರಿಸಿ ನೀರಿನ ರೂಪ ಮಾಡಿ ತನ್ನ ಕಮಂಡಲಿನಲ್ಲಿ ಮುಚ್ಚಿಟ್ಟು ಹೊಗುತ್ತಾನೆ. ಇದೇ ಸಂದರ್ಭ ಕಾಗೆ ರೂಪದಲ್ಲಿ ಬಂದ ಗಣೇಶ ಕಮಂಡಲಿನಿಯನ್ನು ಮಗಚುತ್ತಾನೆ. ಅಲ್ಲಿಂದ ಕಾವೇರಿ ಬ್ರಹ್ಮಗಿರಿಯಿಂದ ನೀರಿನ ರೂಪದಲ್ಲಿ ನದಿಯಾಗಿ ಹರಿಯುತ್ತಾಳೆ. ತಲಕಾವೇರಿಯಿಂದ ಭಾಗಮಂಡಲದವರೆಗೆ ಗುಪ್ತಗಾಮಿನಿಯಾಗಿ ಹರಿದು ಲೋಕ ಕಲ್ಯಾಣಕ್ಕೆ ತೆರಳುತ್ತಾಳೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ