AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಹ್ಮಕುಂಡಿಕೆಯಿಂದ ನೀರಿನ ಬುಗ್ಗೆಯ ರೀತಿ ಕಾವೇರಿ ದರ್ಶನ: ತೀರ್ಥೋದ್ಭವ ವಿಸ್ಮಯ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಬ್ರಹ್ಮಕುಂಡಿಕೆಯಿಂದ ನೀರಿನ ಬುಗ್ಗೆಯ ರೀತಿ ಕಾವೇರಿ ದರ್ಶನ: ತೀರ್ಥೋದ್ಭವ ವಿಸ್ಮಯ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

TV9 Web
| Edited By: |

Updated on:Oct 18, 2023 | 9:44 AM

Share

ಜೀವ ನದಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ಮಧ್ಯರಾತ್ರಿ 1. 27 ನಿಮಿಷಕ್ಕೆ ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವವಾಗಿದೆ. ಸಹಸ್ರಾರು ಮಂದಿ ತಿರ್ಥೋದ್ಭವ ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

ಕೊಡಗು, (ಅಕ್ಟೋಬರ್ 18): ಕನ್ನಡ ನಾಡಿನ ಜೀವನದಿ.. ಕೊಡವರ ಕುಲದೇವತೆ.. ದಕ್ಷಿಣದ ಗಂದೆ.. ಪಾಪನಾಶಿನಿ.. ಪುಣ್ಯ ಪ್ರದಾಯಿನಿ ಕಾವೇರಿ ತೀರ್ಥೋದ್ಭವವಾಗಿದೆ(cauvery theerthodbhava). ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಮಾತೆ, ಈ ಬಾರಿ ಮಧ್ಯರಾತ್ರಿ 1.27 ಕ್ಕೆ ದರ್ಶನ ಕರುಣಿಸಿದ್ದಾಳೆ. ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಹರಿದಿದ್ದಾಳೆ. ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ನೀರಿನ ಬುಗ್ಗೆಯ ರೀತಿ ಉಕ್ಕುತ್ತಾ ಭಕ್ತರಿಗೆ ದರ್ಶನ ಕರುಣಿಸಿದಳು.. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಮತ್ತು ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಮಂತ್ರಘೋಷಗಳ ನಡುವೆ ಕಾವೇರಿ ತೀರ್ಥೋದ್ಭವ ಆಗುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜೈ ಜೈ ಕಾವೇರಿ ಮಾತೆ ಎಂದು ಉದ್ಘೋಷಗಳನ್ನು ಮೊಳಗಿಸಿದ್ರು.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 18, 2023 09:20 AM