ತಲಾಕಾವೇರಿಯಲ್ಲಿ ತೀರ್ಥ ರೂಪಿಣಿಯಾದ ಕಾವೇರಿ, ವಿಸ್ಮಯವನ್ನು ನೀವೂ ಈ ವಿಡಿಯೋನಲ್ಲಿ ಕಣ್ತುಂಬಿಕೊಳ್ಳಿ
ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ನೀರಿನ ಬುಗ್ಗೆಯ ರೀತಿ ಉಕ್ಕುತ್ತಾ ಭಕ್ತರಿಗೆ ದರ್ಶನ ಕರುಣಿಸಿದಳು. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಮತ್ತು ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಮಂತ್ರಘೋಷಗಳ ನಡುವೆ ಕಾವೇರಿ ತೀರ್ಥೋದ್ಭವ ಆಗುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜೈ ಜೈ ಕಾವೇರಿ ಮಾತೆ ಎಂದು ಉದ್ಘೋಷಗಳನ್ನು ಮೊಳಗಿಸಿದ್ರು.
ಕೊಡಗು, (ಅಕ್ಟೋಬರ್ 18): ಜೀವ ನದಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ಮಧ್ಯರಾತ್ರಿ 1. 27 ನಿಮಿಷಕ್ಕೆ ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವವಾಗಿದೆ. ಸಹಸ್ರಾರು ಮಂದಿ ತಿರ್ಥೋದ್ಭವ ಕಣ್ತುಂಬಿಕೊಂಡು ಪುನೀತರಾಗಿದ್ದಾರೆ. ಹೌದು.. ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ನೀರಿನ ಬುಗ್ಗೆಯ ರೀತಿ ಉಕ್ಕುತ್ತಾ ಭಕ್ತರಿಗೆ ದರ್ಶನ ಕರುಣಿಸಿದಳು.. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಮತ್ತು ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಮಂತ್ರಘೋಷಗಳ ನಡುವೆ ಕಾವೇರಿ ತೀರ್ಥೋದ್ಭವ ಆಗುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜೈ ಜೈ ಕಾವೇರಿ ಮಾತೆ ಎಂದು ಉದ್ಘೋಷಗಳನ್ನು ಮೊಳಗಿಸಿದ್ರು. ಬ್ರಹ್ಮಕುಂಡಿಕೆಯಿಂದ ಕಾವೇರಿ ಮಾತೆ ಆವಿರ್ಭವಿಸುತ್ತಿದ್ದಂತೆ ಸ್ಥಳದಲ್ಲಿ ದೇವಲೋಕದ ಕಳೆ ಆವರಿಸಿತು.. ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಉಕ್ಕಿಬಂದ ತೀರ್ಥವನ್ನು ಅರ್ಚಕರು ತುಂಬಿಕೊಂಡು ಸುತ್ತಲೂ ನೆರಿದಿದ್ದ ಭಕ್ತಗಣದತ್ತ ಪ್ರೋಕ್ಷಣೆ ಮಾಡಿದ್ರು.. ತೀರ್ಥಪ್ರೋಕ್ಷಣೆಯಿಂದ ಭಕ್ತರು ಪುನೀತರಾದರು.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ