ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್​​ಗೆ ಹೆಚ್ಚಿತು ಬೇಡಿಕೆ

ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್​​ಗೆ ಹೆಚ್ಚಿತು ಬೇಡಿಕೆ

ರಾಜೇಶ್ ದುಗ್ಗುಮನೆ
|

Updated on: Oct 18, 2023 | 8:32 AM

ಬಿಗ್ ಬಾಸ್ ಮನೆಯಲ್ಲಿ ಎರಡು ಟೀಂ ಮಾಡಲಾಗಿದೆ. ಒಂದು ಟೀಂಗೆ ವಿನಯ್ ಕ್ಯಾಪ್ಟನ್ ಆದರೆ ಮತ್ತೊಂದು ಟೀಂಗೆ ಕಾರ್ತಿಕ್ ನಾಯಕ. ತುಕಾಲಿ ಸಂತೋಷ್ ಅವರನ್ನು ಟೀಂಗೆ ಸೇರಿಸಿಕೊಳ್ಳಲು ಉತ್ಸಾಹ ತೋರಿಸಿದರು ವಿನಯ್.

ಎರಡನೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಜಗಳ ಜೋರಾಗಿದೆ. ತುಕಾಲಿ ಸಂತೋಷ್ ಅವರ ಹಾಸ್ಯದಿಂದ ಹಲವರಿಗೆ ಅವಮಾನ ಆಗುತ್ತಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದಾರೂ ಅವರು ಜೋಕ್ ಮಾಡುವುದನ್ನು ಮುಂದುವರಿಸಿದ್ದಾರೆ. ಈಗ ಬಿಗ್ ಬಾಸ್ (Bigg Boss) ಮನೆಯಲ್ಲಿ ಎರಡು ಟೀಂ ಮಾಡಲಾಗಿದೆ. ಒಂದು ಟೀಂಗೆ ವಿನಯ್ ಕ್ಯಾಪ್ಟನ್ ಆದರೆ ಮತ್ತೊಂದು ಟೀಂಗೆ ಕಾರ್ತಿಕ್ ನಾಯಕ. ತುಕಾಲಿ ಸಂತೋಷ್ ಅವರನ್ನು ಟೀಂಗೆ ಸೇರಿಸಿಕೊಳ್ಳಲು ಉತ್ಸಾಹ ತೋರಿಸಿದರು ವಿನಯ್. ‘ತುಕಾಲಿ ಸಂತೋಷ್ ಅವರು ಎಂಟರ್​ಟೇನ್​ಮೆಂಟ್ ಮಾಡ್ತಾರೆ. ಹೀಗಾಗಿ ಅವರು ನಮ್ಮ ಟೀಂನಲ್ಲೇ ಇರಲಿ’ ಎಂದರು ವಿನಯ್.  ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ