ನಿನ್ನೆ ಬೆಂಗಳೂರಲ್ಲಿ ಇಬ್ರಾಹಿಂ ನಡೆಸಿದ ಸಭೆಯಲ್ಲಿ ಇದ್ದವರಾದರೂ ಯಾರು? ಹೆಚ್ ಡಿ ರೇವಣ್ಣ

ನಿನ್ನೆ ಬೆಂಗಳೂರಲ್ಲಿ ಇಬ್ರಾಹಿಂ ನಡೆಸಿದ ಸಭೆಯಲ್ಲಿ ಇದ್ದವರಾದರೂ ಯಾರು? ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 17, 2023 | 7:19 PM

ಇಬ್ರಾಹಿಂ ರಾಜಕೀಯವಾಗಿ ದೇವೇಗೌಡರ ಆಶ್ರಯದಲ್ಲಿ ಬೆಳೆದವರು ಈಗ ಅವರಿಗೆ ಸವಾಲೆಸೆಯುತ್ತಾರೆಯೇ? ಅವರನ್ನು ಮತ್ತು ಅವರು ಮಾಡಿರುವ ದಾವೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ನೋಡಿಕೊಳ್ಳುತ್ತಾರೆ, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ರೇವಣ್ಣ ಹೇಳಿದರು.

ಹಾಸನ: ಜೆಡಿಎಸ್ ಪಕ್ಷ ತಮ್ಮದು ಅಂತ ಹೇಳುತ್ತಿರುವ ಅದರ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂರನ್ನು (CM Ibrahim) ಹೆಚ್ ಡಿ ದೇವೇಗೌಡರ (HD Devegowda) ಕುಟುಂಬ ತರಾಟೆಗೆ ತೆಗೆದುಕೊಂಡು ಲೇವಡಿ ಮಾಡುತ್ತಿದೆ. ಬೆಳಗ್ಗೆ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಇಬ್ರಾಹಿಂ ಮಾಡಿರುವ ದಾವೆಯ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಹ ಇಷ್ಟಪಡಲಿಲ್ಲ, ಇಬ್ಬರೂ ಸಿಡುಕಿದರು. ಸಾಯಂಕಾಲ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್ ಡಿ ರೇವಣ್ಣ, ಅದ್ಯಾರೋ ಏನೋ ಹೇಳಿದರೆ ಅದಕ್ಕೆ ತಲೆ ಯಾಕೆ ಕೆಡಿಸಿಕೊಳ್ಳಬೇಕು? ಇಬ್ರಾಹಿಂ ರಾಜಕೀಯವಾಗಿ ದೇವೇಗೌಡರ ಆಶ್ರಯದಲ್ಲಿ ಬೆಳೆದವರು ಈಗ ಅವರಿಗೆ ಸವಾಲೆಸೆಯುತ್ತಾರೆಯೇ? ಅವರನ್ನು ಮತ್ತು ಅವರು ಮಾಡಿರುವ ದಾವೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ನೋಡಿಕೊಳ್ಳುತ್ತಾರೆ, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ರೇವಣ್ಣ ಹೇಳಿದರು. ನಿನ್ನೆ ಇಬ್ರಾಹಿಂ ನಡೆಸಿದ ಸಭೆಯಲ್ಲಿ ಇದ್ದವರಾದರೂ ಯಾರು? ಜೆಹೆಚ್ ಪಟೇಲ್ ಅವರ ಮಗನನ್ನು ಕೂರಿಸಿಕೊಂಡು ಸಭೆ ಮಾಡಿದರೆ ಅದಕ್ಕೆ ಸಭೆ ಅನ್ನುತ್ತಾರೆಯೇ ಎಂದು ರೇವಣ್ಣ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ