ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಜಿ ಯೋಧನ ಬಂಧಿಸಿದ ಎಚ್ಎಎಲ್ ಪೊಲೀಸರು

| Updated By: ಸಾಧು ಶ್ರೀನಾಥ್​

Updated on: Mar 12, 2022 | 5:42 PM

ಕ್ಷುಲ್ಲಕ ಕಾರಣಕ್ಕೆ ಏರ್ ಫೈರಿಂಗ್ ಮಾಡಿದ್ದ ಮಾಜಿ ಯೋಧರೊಬ್ಬರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಪಾಂಡೆ ಬಂಧಿತ ನಿವೃತ್ತ ಯೋಧ. ಶುಕ್ರವಾರ ಹೆಚ್ಎಎಲ್ ನ ಆನಂದ ರಾಮ್ ರೆಡ್ಡಿ ಲೇಔಟ್ ನಲ್ಲಿ ಘಟನೆ ನಡೆದಿತ್ತು.

ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಜಿ ಯೋಧನ ಬಂಧಿಸಿದ ಎಚ್ಎಎಲ್ ಪೊಲೀಸರು
ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಜಿ ಯೋಧನ ಬಂಧನ
Follow us on

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಏರ್ ಫೈರಿಂಗ್ ಮಾಡಿದ್ದ ಮಾಜಿ ಯೋಧರೊಬ್ಬರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಪಾಂಡೆ ಬಂಧಿತ ನಿವೃತ್ತ ಯೋಧ. ಶುಕ್ರವಾರ ಹೆಚ್ಎಎಲ್ ನ ಆನಂದ ರಾಮ್ ರೆಡ್ಡಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆರೋಪಿ ರಾಜೇಶ್ ಕುಮಾರ್ ಪಾಂಡೆ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿಗಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಕಂಪನಿ ಸಿಬ್ಬಂದಿಗೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮ್ಯೂಸಿಕ್ ಸೌಂಡ್ ಅತಿಯಾಗಿದ್ದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಉಂಟಾಗಿತ್ತು. ಸೌಂಡ್ ಕಡಿಮೆ ಮಾಡುವಂತೆ ಸಮೀಪದ ಅಪಾರ್ಟ್ಮೆಂಟ್ ನಿವಾಸಿ ಸತೀಶ್ ರೆಡ್ಡಿ ಮನವಿ ಮಾಡಲು ಹೋಗಿದ್ದರು. ಈ ವೇಳೆ ಗಲಾಟೆ ಮಾಡಲು ಬಂದಿದ್ದಾರೆ ಎಂದು ನಿವೃತ ಯೋಧನಿಂದ ಫೈರಿಂಗ್ ನಡೆದಿದೆ. ಸತೀಶ್ ರೆಡ್ಡಿ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದರೋಡೆ ಕೇಸ್ ತನಿಖೆ ವೇಳೆ ಪ್ರಕರಣಕ್ಕೆ ರೋಚಕ ತಿರುವು:
ದರೋಡೆ ಕೇಸ್ ತನಿಖೆ ವೇಳೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇದರೊಂದಿಗೆ ಕೆ ಜಿ ಹಳ್ಳಿ ಪೊಲೀಸರಿಂದ ಮನಿ ಡಬಲಿಂಗ್ ಗ್ಯಾಂಗ್ ಬಂಧನವಾಗಿದೆ. 20 ಲಕ್ಷಕ್ಕೆ 60 ಲಕ್ಷ ನೀಡೊದಾಗಿ ಸಂಪರ್ಕಿಸಿದ್ದರು. ಈ ವೇಳೆ ಪ್ರಕರಣದ ದೂರುದಾರರ ಬಳಿಯಿಂದ 8 ಲಕ್ಷ ರೂ ಹೊತ್ತೊಯ್ದಿದ್ದರು. ಆದರೆ ಪೊಲೀಸರಿಗೆ ದೂರು ನೀಡುವ ವೇಳೆ ದೂರುದಾರರು ವಿಚಾರ ಬದಲಾಯಿಸಿದ್ದರು. ಆದರೆ ದೂರುದಾರರ ಹೇಳಿಕೆ ಮೇಲೆ ಅನುಮಾನಗೊಂಡು ಸತ್ಯಾಸತ್ಯತೆ ಪರಿಶೀಲನೆ ವೇಳೆ ಅಸಲಿ ಸಂಗತಿ ಬಯಲಾಗಿದೆ.

ಸೆಕೆಂಡ್ ಹ್ಯಾಂಡ್ ನ ಕಂಟೈನರ್ ಕೊಡಿಸೋದಾಗಿ ಲಕ್ಷ ಲಕ್ಷ ಹಣ ದರೋಡೆ ಮಾಡಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ. ಬೆಂಗಳೂರು ಕೆ.ಜಿ. ಹಳ್ಳಿ ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ. ನಟರಾಜನ್ @ ರಾಜಾರೆಡ್ಡಿ, ಸದಾಶಿವ ನಾಯಕ @ ರವಿ, ಶಿವರಾಜ್ @ ಕೋಳಿ, ದಿಲ್ಲುಬೋನ್, ನಿರ್ಮಲಾ ಬಂಧಿತರು.

ಇದನ್ನೂ ಓದಿ:
ಯಡಿಯೂರಪ್ಪರನ್ನು ಹಾಡಿಹೊಗಳಿದ ಕಾಂಗ್ರೆಸ್ ನೂತನ ಎಂಎಲ್​ಸಿ ಮಂಜುನಾಥ್ ಭಂಡಾರಿ: ಮಧು ಬಂಗಾರಪ್ಪ ಸೇರಿ ಹಲವರಿಗೆ ಅಚ್ಚರಿ

ಇದನ್ನೂ ಓದಿ:
ನಿಷೇಧಿತ ಕ್ಯಾಟ್ ಫಿಶ್​ ಸಾಕಾಣಿಕೆಗೆ ಅಡ್ಡೆಯಾದ ಬೀದರ್​; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Published On - 5:34 pm, Sat, 12 March 22