AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿದ್ದರು.

ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಇಂದಿರಾನಗರದ ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
TV9 Web
| Edited By: |

Updated on:Mar 12, 2022 | 7:03 PM

Share

ಬೆಂಗಳೂರು: ಶಾಲೆ ಆವರಣದಲ್ಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾನಗರದ ಖಾಸಗಿ ಶಾಲೆಯೊಂದರ ಶಿಕ್ಷಕನಿಗೆ ಬೆಂಗಳೂರು ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇಂದಿರಾನಗರದ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಬೋಧಿಸುತ್ತಿದ್ದ ಹಳೆ ತಿಪ್ಪಸಂದ್ರ ನಿವಾಸಿ ಜಯಶಂಕರ್ (46) ಎಂಬ ಶಿಕ್ಷಕನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈತನ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.

2014ರ ಅಕ್ಟೋಬರ್ 28 ರಂದು ಶಾಲೆಯಿಂದ ಮನೆಗೆ ಮರಳಿದ್ದ ಬಾಲಕಿ ತನ್ನ ಖಾಸಗಿ ಭಾಗಗಳಲ್ಲಿ ನೋವಾಗುತ್ತಿರುವ ಬಗ್ಗೆ ತನ್ನ ತಾಯಿಗೆ ಹೇಳಿಕೊಂಡಿದ್ದಳು. ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಘಟನೆ ನಡೆದ ಮರುದಿನ ಮಗುವಿನ ತಾಯಿ ಶಾಲೆಗೆ ತೆರಳಿ, ಈ ಬಗ್ಗೆ ಶಿಕ್ಷಕರಿಂದ ವಿವರಣೆ ಕೇಳಿದ್ದರು. ಆದರೆ ಶಾಲಾ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ (Sec 376 of IPC relates to rape and Sections 4 and 6 of POCSO Act) ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ಶಿಕ್ಷಕ (Jayashankar) ಬಾಲಕಿಯನ್ನು ಮಧ್ಯಾಹ್ನದ ಊಟದ ವೇಳೆ ಶಾಲೆಯ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕ ಕೆವಿ ಅಶ್ಚತ್ಥನಾರಾಯಣ ವಾದ ಮಂಡಿಸಿದ್ದರು.

ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಜಿ ಯೋಧನ ಬಂಧಿಸಿದ ಎಚ್ಎಎಲ್ ಪೊಲೀಸರು ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಏರ್ ಫೈರಿಂಗ್ ಮಾಡಿದ್ದ ಮಾಜಿ ಯೋಧರೊಬ್ಬರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಪಾಂಡೆ ಬಂಧಿತ ನಿವೃತ್ತ ಯೋಧ. ಶುಕ್ರವಾರ ಹೆಚ್ಎಎಲ್ ನ ಆನಂದ ರಾಮ್ ರೆಡ್ಡಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆರೋಪಿ ರಾಜೇಶ್ ಕುಮಾರ್ ಪಾಂಡೆ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿಗಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಕಂಪನಿ ಸಿಬ್ಬಂದಿಗೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮ್ಯೂಸಿಕ್ ಸೌಂಡ್ ಅತಿಯಾಗಿದ್ದ ಹಿನ್ನೆಲೆ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಉಂಟಾಗಿತ್ತು. ಸೌಂಡ್ ಕಡಿಮೆ ಮಾಡುವಂತೆ ಸಮೀಪದ ಅಪಾರ್ಟ್ಮೆಂಟ್ ನಿವಾಸಿ ಸತೀಶ್ ರೆಡ್ಡಿ ಮನವಿ ಮಾಡಲು ಹೋಗಿದ್ದರು. ಈ ವೇಳೆ ಗಲಾಟೆ ಮಾಡಲು ಬಂದಿದ್ದಾರೆ ಎಂದು ನಿವೃತ ಯೋಧನಿಂದ ಫೈರಿಂಗ್ ನಡೆದಿದೆ. ಸತೀಶ್ ರೆಡ್ಡಿ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಹಳ್ಳಿ ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಡೋಂಟ್ ಕೇರ್, ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರಿಂದ ತರಾಟೆ ಗದಗ: ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ (Shirol village) ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ರಸ್ತೆ ಮಾಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದದರೂ ಸ್ಪಂದಿಸದ ಶಾಸಕ ರಾಮಣ್ಣ ಲಮಾಣಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.

ನಡುರಸ್ತೆಯಲ್ಲೇ ಶಾಸಕರ ಕಾರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ರಾಮಣ್ಣ ಲಮಾಣಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಗ್ರಾಮಕ್ಕೆ ಆಗಮಿಸಿದ್ದ ಶಾಸಕ ರಾಮಣ್ಣ ಲಮಾಣಿಗೆ (Shirahatti BJP MLA Ramanna Lamani) ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಆ ವೇಳೆ ರೈತರ ಆಕ್ರೋಶಕ್ಕೆ ಶಾಸಕ ರಾಮಣ್ಣ ತಡಬಡಾಯಿಸಿದ್ದಾರೆ. ಕೆಲಸ ಮಾಡ್ತಿರೋ, ಇಲ್ವೋ ಅಂತ ಶಾಸಕ ರಾಮಣ್ಣಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪರನ್ನು ಹಾಡಿಹೊಗಳಿದ ಕಾಂಗ್ರೆಸ್ ನೂತನ ಎಂಎಲ್​ಸಿ ಮಂಜುನಾಥ್ ಭಂಡಾರಿ: ಮಧು ಬಂಗಾರಪ್ಪ ಸೇರಿ ಹಲವರಿಗೆ ಅಚ್ಚರಿ

ಇದನ್ನೂ ಓದಿ: ನಿಷೇಧಿತ ಕ್ಯಾಟ್ ಫಿಶ್​ ಸಾಕಾಣಿಕೆಗೆ ಅಡ್ಡೆಯಾದ ಬೀದರ್​; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Published On - 7:00 pm, Sat, 12 March 22