ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆಗೆ ಅಡ್ಡೆಯಾದ ಬೀದರ್; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ಕಾರಂಜಾ ಡ್ಯಾಂ ಹಿನ್ನೀರಿನಲ್ಲಿ ಹತ್ತಾರು ಎಕರೆಯಷ್ಟು ಜಾಗದಲ್ಲಿ ಬೃಹತ್ ನೀರಿನ ಹೊಂಡಗಳನ್ನ ನಿರ್ಮಾಣಮಾಡಿದ್ದು, ಇಲ್ಲಿ ಕ್ಯಾಟ್ ಫಿಶ್ ಸಾಕಲಾಗುತ್ತಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಿಂದ ಬಂದಿರುವ ಕ್ಯಾಟ್ ಫಿಶ್ ಸಾಕಾಣಿದಾರರು ಬೀದರ್ ಜಿಲ್ಲೆಯನ್ನ ತಮ್ಮ ಅಡ್ಡೇ ಮಾಡಿಕೊಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬೀದರ್: ಕ್ಯಾಟ್ ಫಿಶ್ ಸಾಕಾಣಿಕೆಗೆ ನಿಷೇಧ ಹೇರಲಾಗಿದೆ. ಆದರೆ ಕಾನೂನನ್ನು ಗಾಳಿಗೆ ತೂರಿ ಹತ್ತಾರು ಎಕರೆಯಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡಲಾಗುತ್ತಿದೆ. ಹೌದು ಬೀದರ್ ಜಿಲ್ಲೆ ಕ್ಯಾಟ್ ಫಿಶ್(Catfish) ಸಾಕಾಣಿಕೆಯ ಅಡ್ಡೆಯಾಗಿದೆ. ತೆಲಂಗಾಣದವರಿಗೆ ಇಲ್ಲಿನಿಂದಲೇ ಕ್ಯಾಟ್ ಫಿಶ್ ಪೂರೈಸಲಾಗುತ್ತದೆ. ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಡ್ಯಾಂನ ಹಿನ್ನೀರಿನಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಜೋರಾಗಿದ್ದು. ಕಾರಂಜಾ ಡ್ಯಾಂನ(Karanja dam) ಹಿನ್ನಿರಿನಲ್ಲಿಯೇ ವರುಷಗಳಿಂದ ಕ್ಯಾಟ್ ಫಿಶ್ (Fish) ಸಾಕಾಣಿ ಮಾಡಲಾಗುತ್ತಿದೆ. ಅಧಿಕಾರಿಗಳು ಕೂಡ ಇದನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹುಮ್ನಾಬಾದ್ ತಾಲೂಕಿನ ಮರಕಲ್ ಗ್ರಾಮದ ಸುತ್ತಮುತ್ತಲು ಕಾರಂಜಾ ಡ್ಯಾಂ ಹಿನ್ನೀರಿದೆ. ಇದು ಕ್ಯಾಟ್ ಫಿಶ್ ಸಾಕಾಣಿಕೆಯ ಅಡ್ಡೆಯಾಗಿದೆ. ಹೌದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮರಕಲ್ ಗ್ರಾಮದ ಬಳಿಯ ಕಾರಂಜಾ ಡ್ಯಾಂನ ಹಿನ್ನೀರಿನಲ್ಲಿ ಅವ್ಯಾಹತವಾಗಿ ಕಾನೂನನ್ನ ಗಾಳಿಗೆ ತೂರಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಯನ್ನ ಯಾರುದು ಅಂಜಿಕೆ ಅಳುಕಿಲ್ಲದೆ ಮಾಡಲಾಗುತ್ತಿದೆ.
ಅರ್ಧ ಎಕರೆಯಷ್ಟು ವಿಸ್ತೀರ್ಣದ ಐವತ್ತೂ ಹೆಚ್ಚು ಹೊಂಡಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು, ಸತ್ತಿರುವ ನಾಯಿಗಳು, ಗೋವುಗಳ ಮಾಂಸ, ಕೆಟ್ಟುಹೋದ ಮೊಟ್ಟೆಗಳು, ಸತ್ತ ಕೋಳಿಗಳನ್ನು ಕ್ಯಾಟ್ ಫಿಶ್ಗೆ ಆಹಾರವಾಗಿ ನೀರುತ್ತಿದ್ದು, ಸುತ್ತಮುತ್ತಲಿನ ಪರಿಸರ ಗಬ್ಬು ವಾಸನೆಯಿಂದು ಕೂಡಿದೆ. ಸುತ್ತಮುತ್ತಲಿನ ಜನರು ಮೂಗು ಮುಚಚ್ಚಿಕೊಂಡೆ ಓಡಾಡಬೇಕಾದ ಅನಿವಾರ್ಯತೆ ಇಲ್ಲಿ ನಿರ್ಮಾಣವಾಗಿದೆ.
ಕಾರಂಜಾ ಡ್ಯಾಂ ಹಿನ್ನೀರಿನಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿರುವುದರಿಂದ ಅಲ್ಲಿನ ಮಲೀನ ನೀರು ಕಾರಂಜಾ ಡ್ಯಾಂಗೆ ಬಂದು ಸೇರುತ್ತಿದೆ. ಇದರಿಂದಾಗಿ ಡ್ಯಾಂನಲ್ಲಿ ಮೀನು ಹಿಡಿಯುವ ಮೀನುಗಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಕಾರಂಜಾ ಡ್ಯಾಂನಲ್ಲಿನ ಮೀನು ಸಹ ಸಾವೀಗೀಡಾಗುತ್ತಿವೆ. ಇನ್ನೂ ಕ್ಯಾಟ್ ಫಿಶ್ಗಳು ಡ್ಯಾಂನ ನೀರಿನೊಳಗೆ ಸೇರಿಕೊಂಡು ಇಲ್ಲಿನ ಮೀನಿನ ಮರಿಗಳನ್ನ ತಿನ್ನುತ್ತಿರುವುದರಿಂದ ಮೀನುಗಾರಿಕೆಗೆ ಕಷ್ಟವಾಗುತ್ತಿದೆಂದು ಮೀನುಗಾರರಾದ ಸಂಜು ಕುಮಾರ್ ಆರೋಪಿಸಿದ್ದಾರೆ.
ಕಾರಂಜಾ ಡ್ಯಾಂ ಹಿನ್ನೀರಿನಲ್ಲಿ ಹತ್ತಾರು ಎಕರೆಯಷ್ಟು ಜಾಗದಲ್ಲಿ ಬೃಹತ್ ನೀರಿನ ಹೊಂಡಗಳನ್ನ ನಿರ್ಮಾಣಮಾಡಿದ್ದು, ಇಲ್ಲಿ ಕ್ಯಾಟ್ ಫಿಶ್ ಸಾಕಲಾಗುತ್ತಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಿಂದ ಬಂದಿರುವ ಕ್ಯಾಟ್ ಫಿಶ್ ಸಾಕಾಣಿದಾರರು ಬೀದರ್ ಜಿಲ್ಲೆಯನ್ನ ತಮ್ಮ ಅಡ್ಡೇ ಮಾಡಿಕೊಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇನ್ನೂ ಇಲ್ಲಿ ಸಾಕುವ ಮೀನುಗಳಿಗೆ ಸತ್ತ ಪ್ರಾಣಿಗಳ ಮಾಂಸವನ್ನ ಹಾಕಲಾಗುತ್ತಿದ್ದು, ಇದರಲ್ಲಿನ ನೀರು ವಿಷಕಾರಿಯಾಗಿ ಮಾರ್ಪಾಡಾಗಿದೆ. ಅದೇ ವಿಷಕಾರಕ ಲಕ್ಷಾಂತರ ಲೀಟರ್ ನೀರನ್ನ ಕಾಂರಜಾ ಡ್ಯಾಂಗೆ ಹರಿ ಬಿಡಲಾಗುತ್ತಿದ್ದು, ಅದೇ ನೀರನ್ನ ಬೀದರ್, ಭಾಲ್ಕಿ, ಹುಮ್ನಾಬಾದ್ ತಾಲೂಕಿನ ಜನರು ಕುಡಿಯಲು ಬಳಸುತ್ತಿದ್ದು ಇದನ್ನ ಕುಡಿಯುವ ಜನರ ಆರೋಗ್ಯದ ಮೇಲೆ ಗಂಭಿರವಾದ ಪರಿಣಾಮ ಬೀರುವ ಸಾಧ್ಯತೆ ಇಲ್ಲಿ ದಟ್ಟವಾಗಿದೆ.
ಸಾಕಷ್ಟು ವರ್ಷಗಳಿಂದ ಕಾನೂನನ್ನ ಗಾಳಿಗೆ ತೂರಿ ಇಲ್ಲಿ ಕ್ಯಾಟ್ ಫಿಶ್ ಸಾಕಾಣಿಗೆ ಮಾಡಲಾಗುತ್ತಿದೆ. ಇಲ್ಲಿ ಸಾಕಿದ ಮೀನುಗಳನ್ನ ರಾತ್ರಿ ಹೊತ್ತು ಲಾರಿಗಳಲ್ಲಿ ತುಂಬಿಕೊಂಡು ರಾಜ್ಯ ಹಾಗೂ ನೆರೆಯ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದ್ದರೂ, ಪೊಲೀಸರಾಗಲಿ ಇದಕ್ಕೆ ಸಂಬಂಧಿಸಿ ಅಧಿಕಾರಿಗಳು ಕಂಡು ಕಾಣದಂತೆ ವರ್ತನೆ ಮಾಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆಯಿಂದ ಮೀನುಗಾರರಿಗೆ ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಇಲ್ಲಿ ಮೀನು ಸಾಕಾಣಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಕೊಳೆತ ಟೊಮೆಟೊ ವಿಚಾರಕ್ಕೆ ಮಹಿಳೆಯ ಕೊಲೆ; ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ
Published On - 4:04 pm, Sat, 12 March 22