ಬೆಂಗಳೂರು: ನಗರದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಬೈಯ್ಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಿಂದ ಮೊದಲ ಟ್ರೈನ್ ಸಂಚಾರ ಇಂದಿನಿಂದ ಆರಂಭವಾಗಿದೆ. ವಿಮಾನ ನಿಲ್ದಾಣ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣ ಇದಾಗಿದ್ದು ಸಂಪೂರ್ಣ ಎಸಿ ಸೌಲಭ್ಯಹೊಂದಿರೋ ದೇಶದ ಅತ್ಯಾಧುನಿಕ ರೈಲ್ವೆ ನಿಲ್ದಾಣವಾಗಿದೆ. ಇಂದಿನಿಂದ ಈ ರೈಲ್ವೆ ನಿಲ್ದಾಣದಿಂದ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಇಂದು ಸಂಜೆ 7.45ಕ್ಕೆ ಎರ್ನಾಕುಲಂಗೆ ಮೊದಲ ರೈಲು ಹೊರಟಿದೆ.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣದ ಮೇಲಿನ ಹೊರೆ ತಪ್ಪಿಸಲು ಈ ಆಧುನಿಕ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸುಮಾರು 50 ರೈಲುಗಳನ್ನು ಟರ್ಮಿನಲ್‌ನಿಂದ ಓಡಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಸದ್ಯ ಪ್ರಯೋಗಿಕ ಸಂಚಾರ ಮಾತ್ರ ಆರಂಭವಾಗಿದೆ. ಇದನ್ನೂ ಓದಿ: Trending: ಗೆಳತಿಯ ಮೇಲಿನ ಕೋಪಕ್ಕೆ 40 ಕೋಟಿ ಮೌಲ್ಯದ ವಸ್ತುಗಳು ಢಮಾರ್!
ನೈಋತ್ಯ ರೈಲ್ವೆ 314 ಕೋಟಿ ರುಪಾಯಿ ವೆಚ್ಚದ್ದಲ್ಲಿ ವಿಮಾನ ನಿಲ್ದಾಣದ ಮಾದರಿಯ ಸೌಲಭ್ಯಗೊಂದಿಗೆ ನಗರದ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸಿದ್ಧಗೊಂಡು 14 ತಿಂಗಳು ಕಳೆದರೂ ಅದಕ್ಕೆ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಪ್ರಧಾನಿ ಮೋದಿ ಸಮಯ ಸಿಗದ ಹಿನ್ನಲೆ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಸದ್ಯ ಇಂದಿನಿಂದ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ವಾರಕ್ಕೆ ಮೂರು ಬಾರಿ ಇರುವ 12684 ಬಾಣಸವಾಡಿ-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಸರ್. ಎಂ. ವಿ. ಟರ್ಮಿನಲ್ ನಿಂದ ಹೊರಟ ಮೊದಲ ರೈಲು. ಈ ರೈಲು ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಪ್ರತಿ ಸೋಮವಾರ, ಮಂಗಳವಾರ ಮತ್ತು ಗುರುವಾರದಂದು ಸಂಚರಿಸಲಿದೆ. ಅದೇ ರೀತಿ 12683 ಎರ್ನಾಕುಲಂ-ಬಾಣಸವಾಡಿ ರೈಲು ವಾರಕ್ಕೆ ಮೂರು ಬಾರಿ ಎರ್ನಾಕುಲಂ ರೈಲು ನಿಲ್ದಾಣದಿಂದ ಕಾರ್ಯಚಲಿಸಲಿದೆ. ಈ ರೈಲು ಸೋಮವಾರ, ಮಂಗಳವಾರ ಮತ್ತು ಗುರುವಾರದಂದು ಬೆಳಗಿನ ಜಾವ 3.30 ಗಂಟೆಗೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬಂದು ತಲುಪಲಿದೆ.
ಇದರೊಂದಿಗೆ 16320 ಬಾಣಸವಾಡಿ-ಕೊಚುವೆಲಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಮಧ್ಯಾಹ್ನ 1.30 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ. ಜೂನ್ 10ರಿಂದ ಇದರ ಸಂಚಾರ ಆರಂಭವಾಗಲಿದೆ. 16319 ಕೊಚುವೆಲಿ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ಮತ್ತು ಭಾನುವಾರ ಬೆಳಗ್ಗೆ 10.10 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ: ನಾಳೆ ಬಾಗಲಕೋಟೆಯಲ್ಲಿ ಇಬ್ಬರು ಮಾಜಿ ಸಿಎಂಗಳ ಮತ ಬೇಟೆ
ರೈಲು ನಂಬರ್ 22354 ಬಾಣಸವಾಡಿ-ಪಾಟ್ನಾ-ಹಮ್ಸಫರ್ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಸರ್. ಎಂ. ವಿ. ಟರ್ಮಿನಲ್‌ನಿಂದ ಮಧ್ಯಾಹ್ನ 1.50 ಗಂಟೆಗೆ ಹೊರಡಲಿವೆ. ಜೂನ್ 12 ರಿಂದ ಇದರ ಸಂಚಾರ ಆರಂಭವಾಗಲಿದೆ. ಅದೇ ರೀತಿ ವಾಪಸು 22353 ಪಾಟ್ನಾ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪಟ್ನಾ ನಿಲ್ದಾಣದಿಂದ ಹೊರಟು ಶನಿವಾರದಂದು ಸಂಜೆ 5.10 ಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.