Trending: ಗೆಳತಿಯ ಮೇಲಿನ ಕೋಪಕ್ಕೆ 40 ಕೋಟಿ ಮೌಲ್ಯದ ವಸ್ತುಗಳು ಢಮಾರ್!
ತನ್ನ ಗೆಳತಿಯೊಂದಿಗೆ ಜಗಳವಾಡಿದ ಪಾಗಲ್ ಪ್ರೇಮಿಯೊಬ್ಬ, ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿದ್ದ 40 ಕೋಟಿ ಮೌಲ್ಯದ ಬೆಳೆಬಾಲುವ ವಸ್ತುಗಳನ್ನು ಪುಡಿಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ
ತನ್ನ ಗೆಳತಿಯೊಂದಿಗೆ ಜಗಳವಾಡಿದ ಪಾಗಲ್ ಪ್ರೇಮಿಯೊಬ್ಬ, ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿದ್ದ 40 ಕೋಟಿ ಮೌಲ್ಯದ ಬೆಳೆಬಾಲುವ ವಸ್ತುಗಳನ್ನು ಪುಡಿಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವರದಿಯ ಪ್ರಕಾರ, ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್‌ಗೆ ನುಗ್ಗಿ ತನ್ನ ಗೆಳತಿಯೊಂದಿಗೆ ಜಗಳವಾಡಿದ ನಂತರ 21 ವರ್ಷದ ಬ್ರಿಯಾನ್ ಹೆರ್ನಾಂಡೆಜ್, ಸುಮಾರು 40.37 ಕೋಟಿ ಮೌಲ್ಯದ ವಸ್ತುಗಳಿಗೆ ಹಾನಿ ಮಾಡಿದ್ದಾನೆ. ಸದ್ಯ ಡಲ್ಲಾಸ್ ಪೊಲೀಸರು ಬ್ರಿಯಾನ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್
ಎನ್ಬಿಸಿ ನ್ಯೂಸ್ ಪ್ರಕಾರ, ರಾತ್ರಿ ವೇಳೆ ಮ್ಯೂಸಿಯಂನ ಪ್ರವೇಶದ್ವಾರದ ಹೊರಗಿನಿಂದ ಹೆರ್ನಾಂಡೆಜ್ ಬರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರ ವಸ್ತುಸಂಗ್ರಹಾಲಯದ ಒಳಗೆ ನುಗ್ಗಿ ಆರನೇ ಶತಮಾನದ ಗ್ರೀಕ್ ಪ್ರತಿಮೆ ಮತ್ತು 450 BC ಯ ಹಿಂದಿನ ಮಡಕೆ ಸೇರಿದಂತೆ ಅಮೂಲ್ಯ ವಸ್ತುಗಳಿಗೆ ಹಾನಿ ಉಂಟುಮಾಡಿದ್ದಾನೆ. ಅದಲ್ಲದೆ, ಸುಮಾರು ರೂ. 77 ಲಕ್ಷ ಮೌಲ್ಯದ ಕೈಲಿಕ್ಸ್ ಹೆರಾಕಲ್ಸ್ ಮತ್ತು ನೆಮಿಯಾನ್ ಸಿಂಹ ಪ್ರತಿಮೆಯನ್ನೂ ಪುಡಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: Trending: ಬರೋಬ್ಬರಿ 6 ಕೋಟಿಗೆ ಮಾರಾಟವಾಯ್ತು ನೆಕ್ಲೇಸ್! ಏಕಿಷ್ಟು ಡಿಮ್ಯಾಂಡ್ ಗೊತ್ತಾ?
“ನಾಶವಾದ ವಸ್ತುಗಳು ಅಪರೂಪದ ಪುರಾತನ ಕಲಾಕೃತಿಗಳಾಗಿವೆ, ಅದು ಅತ್ಯಂತ ಅಮೂಲ್ಯವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅಪರಾಧ ವರ್ತನೆಯ ಹಿಂದಿನ ನಿಜವಾದ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಸದ್ಯ ಶಸ್ತ್ರಸಜ್ಜಿತವಾಗಿಲ್ಲದ ಹೆರ್ನಾಂಡೆಜ್ ಈಗ 2.3 ಕೋಟಿ ರೂ.ಗಿಂತ ಹೆಚ್ಚಿನ ಅಥವಾ ಸಮಾನವಾದ ಕ್ರಿಮಿನಲ್ ಕಿಡಿಗೇಡಿತನದ ಆರೋಪ ಎದುರಿಸುತ್ತಿದ್ದಾನೆ.
ಇದನ್ನೂ ಓದಿ: Trending: ಚಿಟ್ಟೆಗಾಗಿ ಗುಂಪು ದಾಳಿ, ಮನರಂಜನೆ ವಿಡಿಯೋ ನೀವೂ ನೋಡಿ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Mon, 6 June 22