Trending: ದಿನನಿತ್ಯ ಪವರ್ ಕಟ್, ಸಿಟ್ಟಿಗೆದ್ದ ವ್ಯಕ್ತಿ ಮಸಾಲಾ ರುಬ್ಬಲು ಹೋಗುತ್ತಿರುವುದು ಎಲ್ಲಿ ಗೊತ್ತಾ?

ಪವರ್ ಕಟ್​ನಿಂದ ಕಂಗೆಟ್ಟ ವ್ಯಕ್ತಿಯೊಬ್ಬರು ಮಸಾಲಾ ರುಬ್ಬಲು ಮತ್ತು ಮೊಬೈಲ್ ಚಾರ್ಜ್ ಮಾಡಲು ಪ್ರತಿದಿನ ವಿದ್ಯುತ್ ಕಚೇರಿಗೆ ಹೋಗುತ್ತಾರೆ. ಶಿವಮೊಗ್ಗದ ಹನುಮಂತಪ್ಪ ಈ ರೀತಿಯಾಗಿ ಕಳೆದ 10 ತಿಂಗಳಿನಿಂದ ಮಾಡಲುತ್ತಲೆ ಬಂದಿದ್ದಾರೆ.

Trending: ದಿನನಿತ್ಯ ಪವರ್ ಕಟ್, ಸಿಟ್ಟಿಗೆದ್ದ ವ್ಯಕ್ತಿ ಮಸಾಲಾ ರುಬ್ಬಲು ಹೋಗುತ್ತಿರುವುದು ಎಲ್ಲಿ ಗೊತ್ತಾ?
ಎಂ.ಹನುಮಂತಪ್ಪ
Follow us
TV9 Web
| Updated By: Rakesh Nayak Manchi

Updated on:Jun 06, 2022 | 10:41 PM

ನಮ್ಮ ದೇಶದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ವಿದ್ಯುತ್ ಕಡಿತವು ಬಹಳ ಸಾಮಾನ್ಯವಾಗಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಹಾಗೂ ಸಣ್ಣಪುಟ್ಟ ಪಟ್ಟಣಗಳಲ್ಲಿ ತೊಂದರೆಗಳಾಗುತ್ತವೆ. ಜನರ ನಿತ್ಯದ ಕೆಲಸಗಳು ನಿಂತುಹೋಗುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ದೀರ್ಘಾವಧಿಯ ಪವರ್ ಕಟ್‌ನಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬರು ಮಸಾಲಾ ರುಬ್ಬಲು ಮತ್ತು ಮೊಬೈಲ್ ಚಾರ್ಜ್ ಮಾಡಲು ಪ್ರತಿದಿನ ವಿದ್ಯುತ್ ಕಚೇರಿಗೆ ಹೋಗುತ್ತಾರೆ.

ಇದನ್ನೂ ಓದಿ: Trending: ಗೆಳತಿಯ ಮೇಲಿನ ಕೋಪಕ್ಕೆ 40 ಕೋಟಿ ಮೌಲ್ಯದ ವಸ್ತುಗಳು ಢಮಾರ್!

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಿತ್ಯವು ಆಗುತ್ತಿದ್ದ ಪವರ್​ಕಟ್​ನಿಂದಾಗಿ ಸಿಟ್ಟಿಗೆದ್ದ ನಿವಾಸಿ ಎಂ.ಹನುಮಂತಪ್ಪ ಅವರು ವಿಶೇಷ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ನಿತ್ಯವೂ ಹತ್ತಿರದ ವಿದ್ಯುತ್ ಕಚೇರಿಗೆ ಹೋಗಿ ಮಸಾಲಾ ರುಬ್ಬುವುದು ಹಾಗೂ ತನ್ನ ಮೊಬೈಲ್ ಚಾರ್ಚ್​ ಮಾಡುತ್ತಿದ್ದಾರೆ. ಗಮನಿಸಬೇಕಾದ ವಿಷಯವೆಂದರೆ, ಹನುಮಂತಪ್ಪ ಅವರು ಈ ರೀತಿಯಾಗಿ ಕಳೆದ 10 ತಿಂಗಳಿನಿಂದ ಮಾಡಲುತ್ತಲೆ ಬಂದಿದ್ದಾರೆ.

ನ್ಯೂಸ್ 18 ವರದಿ ಪ್ರಕಾರ, ಹನುಮಂತಪ್ಪ ಅವರ ಕುಟುಂಬವು ದಿನಕ್ಕೆ ಕೇವಲ 3-4 ಗಂಟೆಗಳ ಕಾಲ ಮಾತ್ರ ವಿದ್ಯುತ್ ಪೂರೈಕೆಯನ್ನು ಪಡೆಯುತ್ತದೆ. ನೊಂದ ಹನುಮಂತಪ್ಪ ತನ್ನ ಮನೆಗೆ ಸರಿಯಾಗಿ ವಿದ್ಯುತ್ ಇಲ್ಲ ಎಂದು ಅನೇಕ ಬಾರಿ ದೂರು ಸಲ್ಲಿಸಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಇದೇ ವಿಚಾರವಾಗಿ ತೀವ್ರ ವಾಗ್ವಾದ ಕೂಡ ನಡೆದಿದೆ. ಈ ವೇಳೆ ಅಧಿಕಾರಿಯೊಬ್ಬರು ಹೇಳಿದಂತೆ ನಿತ್ಯವೂ ಮೊಬೈಲ್ ಚಾರ್ಚ್​ ಮಾಡಲು, ಮಸಾಲಾ ರುಬ್ಬಲು ಕಚೇರಿಗೆ ಹೋಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Viral video: ದನದ ಮುಂದೆ ಡಾನ್ಸ್ ಮಾಡಿದ ಯುವತಿ, ಹಾಯಲು ಹೋದ ದನ!

ಅಷ್ಟಕ್ಕೂ ಅಧಿಕಾರಿ ಹಾಗೆ ಹೇಳಿದ್ದೇಕೆ?

“ನಾವು ಮನೆಯಲ್ಲಿ ಅಡುಗೆ ಮಾಡಲು ಮಸಾಲಾವನ್ನು ಹೇಗೆ ಪುಡಿ ಮಾಡಬೇಕು ಎಂದು ನೀವು ಭಾವಿಸಿದ್ದೀರಿ? ನಾವು ನಮ್ಮ ಫೋನ್‌ಗಳನ್ನು ಹೇಗೆ ಚಾರ್ಜ್ ಮಾಡಬೇಕು? ಇದು ಮೂಲಭೂತ ಅವಶ್ಯಕತೆಯಾಗಿದೆ, ಇವುಗಳಿಗಾಗಿ ನಾನು ಪ್ರತಿದಿನ ನನ್ನ ನೆರೆಹೊರೆಯವರ ಮನೆಗೆ ಹೋಗಲು ಸಾಧ್ಯವಿಲ್ಲ” ಎಂದು ಹನುಮಂತಪ್ಪ ಅಧಿಕಾರಿ ಬಳಿ ಹೇಳಿದ್ದಾರೆ. ಅದಕ್ಕೆ ಅಧಿಕಾರಿ, ‘’ಹಾಗಾದರೆ ಮೆಸ್ಕಾಂ ಕಚೇರಿಗೆ ಹೋಗಿ ಮಸಾಲಾ ರುಬ್ಬಿಕೊಳ್ಳಿ’’ ಎಂದಿದ್ದಾರೆ.

ಅಧಿಕಾರಿಯ ಮಾತನ್ನು ಗಂಭೀರವಾಗಿ ಪರಿಗಣಿಸಿದ ಹನುಮಂತಪ್ಪ, ಕೆಲವು ಸೆಲ್ ಫೋನ್ ಚಾರ್ಜರ್‌ಗಳು, ಗ್ರೈಂಡರ್ ಮತ್ತು ಜಾರ್‌ನೊಂದಿಗೆ ಮಂಗಳೂರು ವಿದ್ಯುತ್ ಇಲಾಖೆ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಕಛೇರಿಯಲ್ಲಿ ಮಸಾಲೆಗಳನ್ನು ರುಬ್ಬಿ, ತನ್ನ ಮೊಬೈಲ್​ ಅನ್ನು ಚಾರ್ಜ್ ಮಾಡುತ್ತಾರೆ. ಅಲ್ಲದೆ ಹಗಲು ಹೊತ್ತಿನಲ್ಲಿ ಕಚೇರಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.

ಇದನ್ನೂ ಓದಿ: Viral Video: ಚೀನಾದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಹೇಗಿರುತ್ತದೆ ಗೊತ್ತಾ? ಇಲ್ಲಿ ನೋಡಿ

ಹನುಮಂತಪ್ಪ ಅವರು ತಮ್ಮ ಮನೆಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಮೆಸ್ಕಾಂ ಹಾಗೂ ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನ್ಯೂಸ್ 18 ಪ್ರಕಾರ, ಮಳೆಯಿಂದಾಗಿ ಐಪಿ ಸೆಟ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಮೆಸ್ಕಾಂ ಕಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ತಿಂಗಳೊಳಗೆ ಸರಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Mon, 6 June 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ