Viral Video: ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದು ವೈರಲ್
ದೆಹಲಿ ನಗರದ ಪ್ರದೇಶದಲ್ಲೊಂದು ಮನೆಮನೆಗೆ ಹಾರಿಕೊಂಡು ಹೋದ ನವಿಲಿನ ವಿಡಿಯೋ ಪರಿಸರ ದಿನದಂದೇ ವೈರಲ್ ಆಗುತ್ತಿದ್ದು, ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇಂದು ವಿಶ್ವ ಪರಿಸರ ದಿನ (World Environment Day). ಪ್ರತಿ ವರ್ಷದ ಈ ದಿನದಂದು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಏಕೆಂದರೆ ಮಾನವ ಕುಲ ಹೆಚ್ಚುತ್ತಿದ್ದಂತೆ ಕಟ್ಟಡಗಳು ಕೂಡ ಮೇಲೆದ್ದವು. ಇದಕ್ಕಾಗಿ ಮರಗಳನ್ನು ಧರೆಗುರುಳಿಸಲಾಗುತ್ತಿದೆ. ಇದರ ಪರಿಣಾಮ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳ ಮೇಲೂ ಬಿದ್ದಿದೆ. ಅದರಂತೆ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಗುತ್ತಿವೆ. ಪಕ್ಷಿಗಳು ಮನೆಗಳಿಗೆ ಬರುವುದು ಸಾಮಾನ್ಯವಾಗಿದ್ದರೂ ದೆಹಲಿಯಂಥ ದೊಡ್ಡದೊಡ್ಡ ನಗರದಲ್ಲಿ ಇದು ದೊಡ್ಡ ಸಂಗತಿ. ಅದರಂತೆ ದೆಹಲಿ ನಗರದ ಪ್ರದೇಶದಲ್ಲೊಂದು ಮನೆಮನೆಗೆ ಹಾರಿಕೊಂಡು ಹೋದ ನವಿಲಿನ (peacock) ವಿಡಿಯೋ (Video) ಪರಿಸರ ದಿನದಂದೇ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸ್ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್
ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆ ಟ್ರಾವೆಲ್ ಬ್ಲಾಗರ್, ಸಫರ್ನಾಮಬಿನಿಧಿ ಅವರು ಹಂಚಿಕೊಂಡಿದ್ದು, “ದೆಹಲಿಯಂತಹ ನಗರದಲ್ಲಿ ನವಿಲನ್ನು ನೋಡುವುದು ಎಂತಹ ಅಪರೂಪದ ದೃಶ್ಯವಾಗಿದೆ. ನಾನು ಇವುಗಳನ್ನು ಈಗ ಒಂದು ದಶಕದಿಂದ ನೋಡುತ್ತಿದ್ದೇನೆ. ಅದು ತುಂಬ ಸುಂದರವಾಗಿದೆ” ಎಂದು ಶೀರ್ಷಿಕೆ ನೀಡಿದ್ದಾರೆ.
View this post on Instagram
ಇದನ್ನೂ ಓದಿ: Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್
ವಿಡಿಯೋದಲ್ಲಿ ನೋಡುವಂತೆ, ಗಂಡು ನವಿಲೊಂದು ಮಹಡಿ ಮೇಲಿನ ಹೂವಿನ ಗಿಡ ಇರುವ ಕಾರಿಡಾರ್ಗೆ ಬಂದಿದೆ. ಅಲ್ಲಿಂದ ಇನ್ನೊಂದು ಮನೆಯ ಬಾಲ್ಕನಿಗೆ ಹಾರುವುದನ್ನು ಕಾಣಬಹುದು. ಈ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 525k ಲೈಕ್ಸ್ಗಳು ಬಂದಿವೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 pm, Sun, 5 June 22