AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Angelo Moriondo: ಎಸ್​ಪ್ರೆಸೊ ಕಾಫಿ ಮಷೀನ್ ಆವಿಷ್ಕರಿಸಿದ ಏಂಜೆಲೊ ಮೊರಿಯೊಂಡೊಗೆ ಗೂಗಲ್​ ಡೂಡಲ್​ ಗೌರವ

Google Doodle | Espresso Coffee Machine: ‘ಇಂದಿನ ಕಾಫಿ ಪ್ರಿಯರು ಎಸ್​ಪ್ರೆಸೊ ಮಷೀನ್​ಗಳ ಗಾಡ್​ಫಾದರ್ ಮೊರಿಯೊಂಡೊಗೆ ಕೃತಜ್ಞರಾಗಿರುತ್ತಾರೆ’ ಎಂದು ಗೂಗಲ್​ನ ಟಿಪ್ಪಣಿ ತಿಳಿಸಿದೆ.

Angelo Moriondo: ಎಸ್​ಪ್ರೆಸೊ ಕಾಫಿ ಮಷೀನ್ ಆವಿಷ್ಕರಿಸಿದ ಏಂಜೆಲೊ ಮೊರಿಯೊಂಡೊಗೆ ಗೂಗಲ್​ ಡೂಡಲ್​ ಗೌರವ
ಏಂಜೆಲೊ ಮೊರಿಯೊಂಡೊ ರೂಪಿಸಿರುವ ಎಸ್​ಪ್ರೆಸೊ ಕಾಫಿ ಯಂತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 06, 2022 | 7:58 AM

Share

ಕಾಫಿ ಪ್ರಿಯರು ಮೆಚ್ಚುಗೆಯಿಂದ ಆರಾಧಿಸುವ ಎಸ್​ಪ್ರೆಸೊ ಯಂತ್ರಗಳನ್ನು (Espresso Machines) ಆವಿಷ್ಕರಿಸಿದ ಏಂಜೆಲೊ ಮೊರಿಯೊಂಡೊ (Angelo Moriondo) ಅವರ 171ನೇ ಜನ್ಮದಿನ ಇಂದು. ಕಲಾತ್ಮಕ ಡೂಡಲ್ ಮೂಲಕ ಗೂಗಲ್​ ಮೊರಿಯೊಂಡೊಗೆ ಗೌರವ ಸಲ್ಲಿಸಿದೆ. 1884ರಲ್ಲಿ ಎಸ್​ಪ್ರೆಸೊ ಮಷೀನ್ ಅನ್ನು ಇವರು ಪರಿಚಯಿಸಿದದರು. ಇಂದು ಪ್ರಕಟವಾಗಿರುವ ಕಾಫಿ ಬಣ್ಣದ ಗೂಗಲ್ ಡೂಡಲ್​ಗಾಗಿ ಕಲಾವಿದ ಒಲಿವಿಯಾ (Olivia) ಚಿತ್ರ ಬಿಡಿಸಿದ್ದಾರೆ.

ಜೂನ್ 6, 1851ರಲ್ಲಿ ಇಟಲಿಯ ಟುರಿನ್​ನಲ್ಲಿ ಏಂಜೆಲೊ ಮೊರಿಯೊಂಡೊ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು. ಹೊಸ ವ್ಯಾಪಾರಿ ಯೋಜನೆಗಳ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು. ಮೊರಿಯೊಂಡೊ ಅವರ ತಾತ ಮದ್ಯ ಉತ್ಪಾದನೆ ಕಂಪನಿ ಆರಂಭಿಸಿದ್ದರು. ಮೊರಿಯೊಂಡೊ ಅವರ ತಂದೆ ಅದನ್ನು ನಂತರದ ದಿನಗಳಲ್ಲಿ ನಿರ್ವಹಿಸುತ್ತಿದ್ದರು. ತಮ್ಮ ಸೋದರ ಮತ್ತು ಸಂಬಂಧಿಯೊಬ್ಬರ ನೆರವಿನಿಂದ ಮೊರಿಯೊಂಡೊ ಜನಪ್ರಿಯ ಚಾಕೊಲೇಟ್ ಕಂಪನಿಯೊಂದನ್ನು ಆರಂಭಿಸಿದರು. ‘ಮೊರಿಯೊಂಡೊ ಅಂಡ್ ಗರಿಗ್ಲಿಯೊ’ ಹೆಸರಿನ ಚಾಕೊಲೇಟ್ ಕಂಪನಿಯು ಶೀಘ್ರದಲ್ಲಿಯೇ ವ್ಯಾಪಾರ ವಿಸ್ತರಿಸಿತ್ತು.

ಇಟಲಿಯಲ್ಲಿ ಕಾಫಿ ಅತ್ಯಂತ ಜನಪ್ರಿಯ ಪಾನೀಯವಾಗಿದ್ದನ್ನು ಗಮನಿಸಿದ್ದ ಮೊರಿಯೊಂಡೊ ಅದಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ಆರಂಭಿಸಿದರು. ಕಾಫಿ ಬೀಜ ಹುರಿಯುವುದು, ಡಿಕಾಕ್ಷನ್ ತಯಾರಿಕೆಗೆ ಸಾಕಷ್ಟು ಸಮಯ ವ್ಯಯಿಸಬೇಕಾಗಿದ್ದ ಕಾರಣ ಕಾಫಿ ಪ್ರಿಯರಿಗೆ ತೊಂದರೆಯಾಗುತ್ತಿದೆ. ಇದನ್ನೆ ಗಮನಿಸಿದ ಮೊರಿಯೊಂಡೊಗೆ ಅಲ್ಲೊಂದು ಮಹತ್ವದ ವ್ಯಾಪಾರಿ ಸಾಧ್ಯತೆ ಮನಸ್ಸಿಗೆ ಬಂತು.

‘ಒಂದಾನೊಂದು ಕಾಲದಲ್ಲಿ, 19ನೇ ಶತಮಾನದಲ್ಲಿ ಕಾಫಿ ಇಟಲಿಯಲ್ಲಿ ಅತ್ಯಂತ ಜನಪ್ರಿಯ ಪಾನೀಯವಾಗಿತ್ತು. ಆದರೆ ಆಗ ಪ್ರಚಲಿತದಲ್ಲಿದ್ದ ಕಾಫಿ ಸಿದ್ಧಪಡಿಸುವ ತಂತ್ರಗಳಿಂದಾಗಿ ಕಾಫಿಗಾಗಿ ಗ್ರಾಹಕರು ಕನಿಷ್ಠ 5 ನಿಮಿಷ ಕಾಯಬೇಕಾಗುತ್ತಿತ್ತು. ಈ ಹಂತದಲ್ಲಿ ಮೊದಲ ಎಸ್​ಪ್ರೆಸೊ ಮಷೀನ್ ರೂಪಿಸಿದ ಏಂಜೆಲೊ ಮೊರಿಯೊಂಡೊ ಪ್ರವೇಶವಾಯಿತು’ ಎಂದು ಗೂಗಲ್​ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.

ಟ್ಯುರಿನ್​ನಲ್ಲಿ 1884ರಲ್ಲಿ ಮೊದಲ ಬಾರಿಗೆ ಮೊರಿಯೊಂಡೊ ಎಸ್​ಪ್ರೆಸೊ ಮಷೀನ್​ಗಳನ್ನು ಪ್ರದರ್ಶಿಸಲಾಯಿತು. ಮೊರಿಯೊಂಡೊ ರೂಪಿಸಿದ್ದ ಯಂತ್ರದಲ್ಲಿ ಒಂದು ದೊಡ್ಡ ಬಾಯಲರ್​ ಇತ್ತು. ಇದು ಬಿಸಿನೀರನ್ನು ಕಾಫಿಯ ಮೇಲೆ ಹಾಯಿಸುತ್ತಿತ್ತು. ಎರಡನೇ ಬಾಯ್​ಲರ್ ಆವಿಯನ್ನು (Steam) ಕಾಫಿಯ ಮೇಲೆ ಬಿಡುತ್ತಿತ್ತು. ಹೀಗಾಗಿ ಕಾಫಿಪ್ರಿಯರಿಗೆ ತಮ್ಮಿಷ್ಟದ ಕಾಫಿಯನ್ನು ತಕ್ಷಣ ಪಡೆಯಲು ಸಾಧ್ಯವಾಗುತ್ತಿತ್ತು. ಈ ಯಂತ್ರಕ್ಕೆ ಅಕ್ಟೋಬರ್ 23, 1885ರಂದು ಅಂತರರಾಷ್ಟ್ರೀಯ ಪೇಟೆಂಟ್ ಸಿಕ್ಕಿತು.

‘ಇಂದಿನ ಕಾಫಿ ಪ್ರಿಯರು ಎಸ್​ಪ್ರೆಸೊ ಮಷೀನ್​ಗಳ ಗಾಡ್​ಫಾದರ್ ಮೊರಿಯೊಂಡೊಗೆ ಕೃತಜ್ಞರಾಗಿರುತ್ತಾರೆ’ ಎಂದು ಗೂಗಲ್​ನ ಟಿಪ್ಪಣಿ ತಿಳಿಸಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 am, Mon, 6 June 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!