Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಬರೋಬ್ಬರಿ 6 ಕೋಟಿಗೆ ಮಾರಾಟವಾಯ್ತು ನೆಕ್ಲೇಸ್! ಏಕಿಷ್ಟು ಡಿಮ್ಯಾಂಡ್ ಗೊತ್ತಾ?

ಅತ್ಯಂತ ಅಪರೂಪದ ಮೂರು ಸಾಲು ನೈಸರ್ಗಿಕ ಉಪ್ಪುನೀರಿನ ಮುತ್ತಿನ ಹಾರ (natural pearl necklace)ವು ಹರಾಜು ಮೂಲಕ ಬರೋಬ್ಬರಿ 6 ಕೋಟಿ ರೂ.ಗೆ ಮಾರಾಟವಾಗಿದೆ. ಮುಂಬೈ ಮೂಲದ AstaGuru ಹರಾಜು ಮನೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ 6,24,91,000 (833,213)ಗೆ ಮಾರಾಟವಾಗಿದೆ. ನೆಕ್ಲೇಸ್​ನ ಮಧ್ಯದ ಸಾಲು ಮುತ್ತುಗಳು ಮೊದಲ ಮತ್ತು ಮೂರನೆಯದಕ್ಕಿಂತ ವಿಭಿನ್ನವಾದ ಛಾಯೆಯನ್ನು ಹೊಂದಿದೆ. ಇದು ಚರಾಸ್ತಿ ಮತ್ತು ವಿಂಟೇಜ್ ಆಭರಣಗಳ ಸಂಗ್ರಹಕಾರರಲ್ಲಿ ಹೆಚ್ಚು ಬೇಡಿಕೆಯಿರುವ ಅತ್ಯಂತ ಅಪರೂಪದ ಚರಾಸ್ತಿ ವಸ್ತುವಾಗಿದೆ. ಇದನ್ನೂ ಓದಿ: Viral Video: ಚೀನಾದಲ್ಲಿ […]

Trending: ಬರೋಬ್ಬರಿ 6 ಕೋಟಿಗೆ ಮಾರಾಟವಾಯ್ತು ನೆಕ್ಲೇಸ್! ಏಕಿಷ್ಟು ಡಿಮ್ಯಾಂಡ್ ಗೊತ್ತಾ?
6 ಕೋಟಿಗೆ ಮಾರಾಟವಾದ ಮುತ್ತಿನ ನೆಕ್ಲೇಸ್
Follow us
TV9 Web
| Updated By: Rakesh Nayak Manchi

Updated on:Jun 06, 2022 | 8:14 PM

ಅತ್ಯಂತ ಅಪರೂಪದ ಮೂರು ಸಾಲು ನೈಸರ್ಗಿಕ ಉಪ್ಪುನೀರಿನ ಮುತ್ತಿನ ಹಾರ (natural pearl necklace)ವು ಹರಾಜು ಮೂಲಕ ಬರೋಬ್ಬರಿ 6 ಕೋಟಿ ರೂ.ಗೆ ಮಾರಾಟವಾಗಿದೆ. ಮುಂಬೈ ಮೂಲದ AstaGuru ಹರಾಜು ಮನೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ 6,24,91,000 (833,213)ಗೆ ಮಾರಾಟವಾಗಿದೆ. ನೆಕ್ಲೇಸ್​ನ ಮಧ್ಯದ ಸಾಲು ಮುತ್ತುಗಳು ಮೊದಲ ಮತ್ತು ಮೂರನೆಯದಕ್ಕಿಂತ ವಿಭಿನ್ನವಾದ ಛಾಯೆಯನ್ನು ಹೊಂದಿದೆ. ಇದು ಚರಾಸ್ತಿ ಮತ್ತು ವಿಂಟೇಜ್ ಆಭರಣಗಳ ಸಂಗ್ರಹಕಾರರಲ್ಲಿ ಹೆಚ್ಚು ಬೇಡಿಕೆಯಿರುವ ಅತ್ಯಂತ ಅಪರೂಪದ ಚರಾಸ್ತಿ ವಸ್ತುವಾಗಿದೆ.

ಇದನ್ನೂ ಓದಿ: Viral Video: ಚೀನಾದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಹೇಗಿರುತ್ತದೆ ಗೊತ್ತಾ? ಇಲ್ಲಿ ನೋಡಿ

ಮೇ 30 ಮತ್ತು 31 ರಂದು ನಡೆದ ಹರಾಜಿನಲ್ಲಿ ಮಾರಾಟವಾದ ನೆಕ್ಲೇಸ್, ನೈಸರ್ಗಿಕ ಉಪ್ಪುನೀರಿನ ಮುತ್ತುಗಳಿಂದ ಮಾಡಲ್ಪಟ್ಟಿದೆ. ಕತ್ತರಿಸಿದ ಹಳೆಯ ವಜ್ರಗಳೊಂದಿಗೆ ಹೊಂದಿಸಲಾದ ಚಿನ್ನದ ಕೊಕ್ಕೆಗೆ ಅಂಟಿಸಲಾಗಿದೆ” ಎಂದು ವರದಿಗಳು ತಿಳಿಸಿವೆ.

ಚಿಕ್ಕದಾದ ಮುತ್ತು 5.25 ಮಿ.ಮೀ. ವ್ಯಾಸವನ್ನು ಅಳೆಯುತ್ತದೆ, ದೊಡ್ಡ ಮುತ್ತುಗಳು 15.60 ಮಿ.ಮೀ.ವರೆಗೆ ಹೋಗುತ್ತದೆ. ಇಂಥ ಮುತ್ತುಗಳಿಗೆ ಬೇಡಿಕೆ ಹೆಚ್ಚಿರಲು ಕಾರಣ ಇದು ತುಂಬಾ ಅಪರೂಪದ ಮುತ್ತುಗಳಾಗಿವೆ. ಸುಮಾರು 10,000 ಉಪ್ಪುನೀರಿನ ಸಿಂಪಿಗಳಲ್ಲಿ ಒಂದು ಅಥವಾ ಎರಡರಲ್ಲಿ ಮಾತ್ರ ಇಂಥ ಮುತ್ತುಗಳು ರೂಪುಗೊಳ್ಳುತ್ತವೆ.

ಇದನ್ನೂ ಓದಿ: Trending: ಚಿಟ್ಟೆಗಾಗಿ ಗುಂಪು ದಾಳಿ, ಮನರಂಜನೆ ವಿಡಿಯೋ ನೀವೂ ನೋಡಿ

ಉತ್ತಮವಾಗಿ ಮಾರಾಟವಾದ ನೆಕ್ಲೇಸ್​ಗಳೆಂದರೆ, ಮಾಣಿಕ್ಯ ಮಣಿ ನೆಕ್ಲೇಸ್ 1.7 ಕೋಟಿ ರೂ., ಐದು ಸಾಲುಗಳ ನೈಸರ್ಗಿಕ ಮುತ್ತಿನ ಹಾರ  1.48 ಕೋಟಿ ರೂ., ಕಾರ್ಟಿಯರ್ ಅವರ ವಜ್ರದ ನೆಕ್ಲೇಸ್ 90.92 ಲಕ್ಷ ರೂ.ಗೆ ಮಾರಾಟವಾಗಿದೆ. ಅದರಂತೆ ಒಟ್ಟು ವಿಜೇತ ಮೌಲ್ಯ 133 ರಲ್ಲಿ 26 ನೆಕ್ಲೇಸ್​ಗಳು 17.92 ಕೋಟಿ ರೂ.ಗೆ ಮಾರಾಟವಾಗಿವೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Mon, 6 June 22