Bengaluru News: ದರೋಡೆಗೆ ಸಂಚು ರೂಪಿಸಿದ್ದ ರೌಡಿಶೀಟರ್​ನ ಐವರು ಸಹಚರರ ಸೆರೆ

|

Updated on: Jun 18, 2023 | 4:34 PM

ಕಳೆದ ವರ್ಷ ಮದನ್ ಅಲಿಯಾಸ್ ಪಿಟೀಲ್​ನನ್ನು ಗ್ಯಾಂಗ್​ ಹತ್ಯೆಗೈದಿತ್ತು. ವಿಲ್ಸನ್ ಗಾರ್ಡನ್ ನಾಗನ ವಿರೋಧ ಟೀಂ ಲೀಡರ್ ಸಿದ್ದಾಪುರ ಮಹೇಶ್ ಆತನ ಮೇಲೆ ದಾಳಿಗೆ ತಂಡ ಸಂಚು ರೂಪಿಸಿತ್ತು. ಈ ವೇಳೆ ಮಹೇಶ್@ ಸಿದ್ದಾಪುರ ಮಹೇಶ್​ ರೌಡಿಶೀಟರ್​ನ ಐವರು ಸಹಚರರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Bengaluru News: ದರೋಡೆಗೆ ಸಂಚು ರೂಪಿಸಿದ್ದ ರೌಡಿಶೀಟರ್​ನ ಐವರು ಸಹಚರರ ಸೆರೆ
ಬಂಧಿತ ಐವರು ಸಹಚರರು
Follow us on

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಮಹೇಶ್@ ಸಿದ್ದಾಪುರ ಮಹೇಶ್​ ರೌಡಿಶೀಟರ್​ (rowdy-sheeter) ನ ಐವರು ಸಹಚರರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಮದನ್ ಅಲಿಯಾಸ್ ಪಿಟೀಲ್​ನನ್ನು ಗ್ಯಾಂಗ್​ ಹತ್ಯೆಗೈದಿತ್ತು. ವಿಲ್ಸನ್ ಗಾರ್ಡನ್ ನಾಗನ ವಿರೋಧ ಟೀಂ ಲೀಡರ್ ಸಿದ್ದಾಪುರ ಮಹೇಶ್ ಆತನ ಮೇಲೆ ದಾಳಿಗೆ ತಂಡ ಸಂಚು ರೂಪಿಸಿತ್ತು.​ ಹಾಗಾಗಿ ಕೆಎಸ್​ಆರ್​​ಟಿಸಿ ಕೇಂದ್ರ ಕಚೇರಿ ಬಳಿ‌ ಹೊಂಚು ಹಾಕಿ ಕೂತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.

ಕಳೆದ 6-7 ತಿಂಗಳ ಹಿಂದೆ ದಾಳಿ ನಡೆಸಿ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಸಿದ್ದಾಪುರ ಮಹೇಶ್ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದ. ಬಳಿಕ ಮತ್ತೆ ಅರೆಸ್ಟ್​ ಮಾಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.

ಇದನ್ನೂ ಓದಿ: ಈಜಲು ತೆರಳಿದ್ದ ಯುವಕ ನೀರು ಪಾಲು: ಮೃತದೇಹ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

ನಕಲಿ ಪೊಲೀಸ್​ನಿಂದ ಸಾರ್ವಜನಿಕರಿಂದ ಹಣ ವಸೂಲಿ: ಅರೆಸ್ಟ್​​

ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಅರಣ್ಯ ಇಲಾಖೆ ಪೊಲೀಸ್​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್​​ನನ್ನು ಬಂಧಿಸಲಾಗಿದೆ. ಜಿಲ್ಲೆಯ ಗಂಗಾಪುರಪೇಟೆಯ ನಿವಾಸಿ ಸಂಜಯ್ ಕೊಪ್ಪದ ಬಂಧಿತ ಆರೋಪಿ. ಮೇ 25ರಂದು ಕೊಪ್ಪಳ ಬಳಿ ಬೈಕ್ ಸವಾರ ಬೊಚನಹಳ್ಳಿಯ ಹನುಮೇಶ್​​​ ಎಂಬುವವರ ಬಳಿ ಹಣ ವಸೂಲಿ ಮಾಡಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Shivamogga News: ಯುವತಿಯೊಂದಿಗಿನ ಅಶ್ಲೀಲ ವಿಡಿಯೋ ವೈರಲ್, ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಅರೆಸ್ಟ್

ಗಂಧದ ಕಟ್ಟಿಗೆ ಕಳವುವಾಗಿದೆ, ನಿಮ್ಮ ಮೇಲೆ ಅನುಮಾನವಿದೆ ಎಂದು ಓರ್ವ ಬೈಕ್​ ಸವಾರನ ಬಳಿ 49,000 ನಗದು, 2 ಚಿನ್ನದ ಉಂಗುರ ದೋಚಿದ್ದಾನೆ. ಅನುಮಾನ ಬಂದು ಗ್ರಾಮೀಣ ಠಾಣೆಗೆ ಹನುಮೇಶ್ ಎಂಬುವವರು ದೂರು ನೀಡಿದ್ದಾರೆ. ದೂರು ಆಧರಿಸಿ ಆರೋಪಿಯನ್ನು ಅರೆಸ್ಟ್​ ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.