AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಸುರಕ್ಷತಾ ತಪಾಸಣೆ: ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDA

ಬೆಂಗಳೂರಿನಲ್ಲಿ ಸ್ಟಾರ್​​ ಹೋಟೆಲ್​​ಗಳು ಸೇರಿ ಇಂದೀರಾ ಕ್ಯಾಂಟೀನ್​​, ಸ್ವಿಗ್ಗಿ, ಜೊಮ್ಯಾಟೋ ದಾಸ್ತಾನು ಕೇಂದ್ರಗಳ ಮೇಲೆಯೂ ದಾಳಿ ಮಾಡಿ ಭರ್ಜರಿ ಶಾಕ್​​ ಕೊಟ್ಟಿದ್ದ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ (FDA) ಇಲಾಖೆಯ ಕಣ್ಣೀಗ ಮನೆ ಆಧಾರಿತ ಬೇಕರ್ಸ್‌, ಟಿಫಿನ್ ಸೇವೆಗಳನ್ನು ನೀಡುವವರ ಮೇಲೆಯೂ ಬಿದ್ದಿದೆ. ಈ ರೀತಿ ಉದ್ಯಮ ನಡೆಸುತ್ತಿರುವವರು ಅಗತ್ಯ ಪರವಾನಗಿ ಪಡೆದಿದ್ದಾರೆಯೇ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಪರಿಶೀಲನೆಗೆ ಮುಂದಾಗಿದೆ.

ಆಹಾರ ಸುರಕ್ಷತಾ ತಪಾಸಣೆ: ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDA
ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDAImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Aug 16, 2026 | 7:33 AM

Share

ಮುಖ್ಯಾಂಶಗಳು

  • ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ ಆಹಾರ ಸುರಕ್ಷತಾ ಇಲಾಖೆ
  • ಹೋಟೆಲ್​​ಗಳ ಮೇಲೆ ದಾಳಿ ಬೆನ್ನಲ್ಲೇ ಪರಿಶೀಲನೆಗೆ ಮುಂದು
  • ಆಹಾರ ಸುರಕ್ಷತಾ ಮಾನದಂಡಗಳ ಪರಿಶೀಲಿಸಲಿರುವ ಇಲಾಖೆ

ಬೆಂಗಳೂರು, ಆಗಸ್ಟ್​​ 16: ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಐಷಾರಾಮಿ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಮತ್ತು ಆಹಾರ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಿ ಗಮನ ಸೆಳೆದಿರುವ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ (FDA) ಇಲಾಖೆ ಮನೆ ಆಧಾರಿತ ಬೇಕರ್ಸ್‌, ಟಿಫಿನ್ ಸೇವೆಗಳು, ಇನ್‌ಸ್ಟಾಗ್ರಾಂ ಮೂಲಕ ಆಹಾರ ಮಾರಾಟ ಮಾಡುವವರು, ಕ್ಲೌಡ್ ಕಿಚನ್‌ಗಳು ಹಾಗೂ ತಾತ್ಕಾಲಿಕ ಆಹಾರ ಮಳಿಗೆಗಳಲ್ಲಿನ ಆಹಾರ ಪದಾರ್ಥಗಳ ಮೇಲೂ ಕಣ್ಣಿಟ್ಟಿದೆ. ಮನೆ ಆಧಾರಿತ ಆಹಾರ ಉದ್ಯಮಗಳು ಅಗತ್ಯ ಪರವಾನಗಿ ಪಡೆದಿವೆಯೇ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿವೆಯೇ ಎಂದು ಪರಿಶೀಲನೆಗೆ ಮುಂದಾಗಿದೆ.

FSSAI ನೋಂದಣಿ ಕಡ್ಡಾಯ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳ ಪ್ರಕಾರ, ಪ್ರತಿಯೊಬ್ಬ ಆಹಾರ ಉದ್ಯಮ ನಿರ್ವಾಹಕರೂ ನೋಂದಣಿ ಅಥವಾ ಪರವಾನಗಿ ಹೊಂದಿರಬೇಕು. 2026ರ ಏಪ್ರಿಲ್ 1ರಿಂದ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ವಾರ್ಷಿಕ ವಹಿವಾಟು ₹1.5 ಕೋಟಿವರೆಗೆ ಇದ್ದರೆ FSSAI ನೋಂದಣಿ ಸಾಕು. ₹1.5 ಕೋಟಿಯಿಂದ ₹50 ಕೋಟಿವರೆಗೆ ಇದ್ದರೆ ರಾಜ್ಯ ಪರವಾನಗಿ ಕಡ್ಡಾಯವಾಗಿರಬೇಕಿದೆ. ₹50 ಕೋಟಿಗಿಂತ ಹೆಚ್ಚು ವಹಿವಾಟು ಇದ್ದರೆ ಕೇಂದ್ರ ಪರವಾನಗಿ ಪಡೆಯಬೇಕು. ಈ ನಿಯಮಗಳು ತಾತ್ಕಾಲಿಕ ಆಹಾರ ಮಳಿಗೆಗಳಿಗೂ ಅನ್ವಯಿಸುತ್ತವೆ. ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು, ಫ್ಲೀ ಮಾರ್ಕೆಟ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರ ಮಾರಾಟ ಮಾಡುವವರೂ ಆಹಾರ ಸುರಕ್ಷತಾ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರಲಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಶಾಕ್! 6 ಹೋಟೆಲ್​ಗಳಿಗೆ ಒಟ್ಟೂ 1.6 ಲಕ್ಷ ರೂ ಭಾರಿ ದಂಡ

ಹೋಂ ಕಿಚನ್‌ಗಳಿಗೆ ಕಠಿಣ ನೀತಿ ಅಗತ್ಯ: ಖಾದರ್

ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಆಹಾರ ಮಾರಾಟ ಮಾಡುವ ಮನೆ ಆಧಾರಿತ ಉದ್ಯಮಗಳಿಗೆ ಕಠಿಣ ನಿಯಮಗಳನ್ನು ರೂಪಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಹಾರ ವ್ಯವಹಾರವನ್ನು ಪ್ರಚಾರ ಮಾಡುತ್ತಿದ್ದರೆ, ಅವರು ನಿಯಮಗಳ ವ್ಯಾಪ್ತಿಗೆ ಬರಬೇಕು. ಇದಕ್ಕಾಗಿ ಕಠಿಣ ನೀತಿ ರೂಪಿಸುವುದು ಉತ್ತಮ. ಈ ವಿಚಾರವನ್ನು ಪರಿಶೀಲಿಸುತ್ತೇನೆ ಎಂದು ಖಾದರ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:18 am, Sun, 16 August 26

Follow Us
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ