SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್ಐಆರ್​ಗೆ ಹೈಕೋರ್ಟ್ ತಡೆ

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಫಾರಂ 7 ದುರ್ಬಳಕೆ ಆರೋಪದ ಮೇಲೆ ಮಲ್ಲೇಶ್ವರಂ ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್​​​ಐಆರ್​​ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. 778 ಫಾರಂ 7 ಅರ್ಜಿಗಳ ಸಲ್ಲಿಕೆಯ ಹಿಂದೆ ದುರುದ್ದೇಶವಿರಬಹುದು ಎಂಬ ದೂರಿನ ಬಗ್ಗೆ ನ್ಯಾಯಾಲಯವು ಪ್ರಶ್ನಿಸಿದ್ದು, ಇದು ಆತುರದ ದೂರು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

SIR ಫಾರಂ 7 ವಿವಾದ: ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್ಐಆರ್​ಗೆ ಹೈಕೋರ್ಟ್ ತಡೆ
ಹೈಕೋರ್ಟ್
Image Credit source: Getty images
Edited By:

Updated on: Oct 09, 2026 | 9:57 PM

ಮುಖ್ಯಾಂಶಗಳು

  • SIR ವೇಳೆ ತಪ್ಪು ಮಾಹಿತಿ ನೀಡಿ ಫಾರಂ 7 ಸಲ್ಲಿಕೆ ಆರೋಪ
  • ಎಫ್ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್
  • ಇದು ಮೇಲ್ನೋಟಕ್ಕೇ ಆತುರದ ದೂರು ಎಂದ ಹೈಕೋರ್ಟ್

ಬೆಂಗಳೂರು, ಅಕ್ಟೋಬರ್​​ 09: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಫಾರ್ಮ್ 7 ದುರ್ಬಳಕೆ ಆರೋಪ ಸಂಬಂಧ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಮುಖಂಡರ ವಿರುದ್ಧ ದಾಖಲಾಗಿದ್ದ ಎಫ್​​​ಐಆರ್​​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್​​ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್​​ ನೀಡಿದ್ದ ದೂರಿನ ಮೇರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್​​​​​ಐಆರ್ ರದ್ದುಕೋರಿ ಗುಟ್ಟಳ್ಳಿಯ ಜಿ.ಎಸ್‌ ವಸಂತಲಕ್ಷ್ಮಿ, ಯಶವಂತಪುರದ ಆರ್‌. ದೀಪಕ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಇದು ಮೇಲ್ನೋಟಕ್ಕೆ ಆತುರದ ದೂರು ಎಂದು ಅಭಿಪ್ರಾಯಪಟ್ಟಿದ್ದು, ಎಫ್​ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅರ್ಜಿದಾರರ ಪರ ವಕೀಲರ ವಾದವೇನು?

‘ಬಿಎಲ್ಎಗಳಾಗಿ ವೋಟರ್ ಲಿಸ್ಟ್​ನಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ತೀರ್ಮಾನಿಸಲು ಅವಕಾಶವಿದೆ’ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಅರ್ಜಿದಾರರ ವಾದಕ್ಕೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಅನೂಪ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ‘50 ಅರ್ಜಿ ಸಲ್ಲಿಸಬಹುದು, ಆದರೆ 778 ಫಾರಂ 7 ಸಲ್ಲಿಸಿದ್ದಾರೆ. ದುರುದ್ದೇಶದಿಂದ ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದ್ದಾರೆ’ ಎಂದು ವಾದಿಸಿದರು.

50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಯಾವ ಕಾಯ್ದೆಯಡಿ ಅಪರಾಧ?

ಇನ್ನು ವಿಚಾರಣೆ ವೇಳೆ ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರು ಸರ್ಕಾರದ ಪರ ವಕೀಲರಿಗೆ ಕೆಲ ಪ್ರಶ್ನೆಗಳು ಮಾಡಿದರು. 50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಯಾವ ಕಾಯ್ದೆಯಡಿ ಅಪರಾಧ? ಫಾರಂ 7 ಸಲ್ಲಿಸಿದಾಗ ಆ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡುತ್ತಾರಲ್ಲವೇ? ತಪ್ಪು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ತೀರ್ಮಾನಿಸುತ್ತಾರಲ್ಲವೇ? ಡಿಲೀಟ್ ಆಗುವ ಜನರಿಗೂ ನೋಟಿಸ್ ನೀಡುವುದಿಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಇದನ್ನು ಓದಿ: ಬೆಂಗಳೂರಿನಲ್ಲೂ SIR ಫಾರ್ಮ್-7 ವಿವಾದ: ಮಲ್ಲೇಶ್ವರಂನಲ್ಲಿ ಅಕ್ರಮ ಆರೋಪ, ಇಬ್ಬರ ವಿರುದ್ಧ ಎಫ್​​ಐಆರ್​​

ಇನ್ನು ಮತದಾರರು ಇಂಥವರಿಗೇ ಮತ ಹಾಕಿದ್ದಾರೆಂದು ತಿಳಿಯುವುದಿಲ್ಲವಲ್ಲ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಇದು ಮೇಲ್ನೋಟಕ್ಕೇ ಆತುರದ ದೂರು ಎಂದು ಅಭಿಪ್ರಯಾಪಟ್ಟಿದೆ. ವಾದ ಪ್ರತಿವಾದದ ಬಳಿಕ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ದೂರು ಆಧರಿಸಿ ದಾಖಲಿಸಿದ್ದ ಎಫ್ಐಆರ್​ಗೆ ತಡೆಯಾಜ್ಞೆ ನೀಡಿದೆ.

Malleshwaram Voter List Row: Karnataka High Court Stays FIR Over Form-7s

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:52 pm, Fri, 9 October 26

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us