ಪರೀಕ್ಷಾ ಗೊಂದಲ ಬಗ್ಗೆ ಮನವಿ ನೀಡಲು ಬಂದಿದ್ದ ಮಾಜಿ ಸಚಿವರಿಗೆ KPSC ಡೋಂಟ್ ಕೇರ್; ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದ ಕಾರ್ಯದರ್ಶಿ

| Updated By: ಆಯೇಷಾ ಬಾನು

Updated on: May 31, 2022 | 5:28 PM

ಲೋಕಾ ಸೇವಾ ಆಯೋಗದ ಕಾರ್ಯದರ್ಶಿ ಆಫೀಸ್ ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ರನ್ನು ಸಿಬ್ಬಂದಿ ಕಚೇರಿ ಒಳಗಡೆ ಬಿಟ್ಟಿಲ್ಲ. ಆಡಳಿತರೂಢ ಪಕ್ಷದ ಶಾಸಕರಿಗೇ ನೋ ಎಂಟ್ರಿ.. ಇನ್ನು ಸಾಮಾನ್ಯ ಅಭ್ಯರ್ಥಿಗಳ ಪಾಡೇನು?

ಪರೀಕ್ಷಾ ಗೊಂದಲ ಬಗ್ಗೆ ಮನವಿ ನೀಡಲು ಬಂದಿದ್ದ ಮಾಜಿ ಸಚಿವರಿಗೆ KPSC ಡೋಂಟ್ ಕೇರ್; ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದ ಕಾರ್ಯದರ್ಶಿ
ಸುರೇಶ್ ಕುಮಾರ್
Follow us on

ಬೆಂಗಳೂರು: 2021ರ ಫೆಬ್ರವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ‌ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಹೀಗಾಗಿ ಕೆಪಿಎಸ್‌ಸಿ ಪರಿಕ್ಷಾ ಗೊಂದಲದ ಬಗ್ಗೆ ಮನವಿ ನೀಡಲು ಮಾಜಿ ಸಚಿವ ಸುರೇಶ್ ಕುಮಾರ್ ಕೆಪಿಎಸ್ಸಿ ಕಚೇರಿಯ ಬಾಗಿಲು ತಟ್ಟಿದ್ದಾರೆ. ಆದ್ರೆ ಆಡಳಿತ ಪಕ್ಷದ ಶಾಸಕ ಬಂದರೂ ಕರ್ನಾಟಕ ಲೋಕ ಸೇವಾ ಆಯೋಗ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

ಲೋಕಾ ಸೇವಾ ಆಯೋಗದ ಕಾರ್ಯದರ್ಶಿ ಆಫೀಸ್ ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ರನ್ನು ಸಿಬ್ಬಂದಿ ಕಚೇರಿ ಒಳಗಡೆ ಬಿಟ್ಟಿಲ್ಲ. ಆಡಳಿತರೂಢ ಪಕ್ಷದ ಶಾಸಕರಿಗೇ ನೋ ಎಂಟ್ರಿ.. ಇನ್ನು ಸಾಮಾನ್ಯ ಅಭ್ಯರ್ಥಿಗಳ ಪಾಡೇನು? ಎಂಬಂತಾಗಿದೆ. ಅಲ್ಲದೆ ಸಿಬ್ಬಂದಿ ಫೋನ್ಗೆ ಕರೆ ಮಾಡಿ ಕಾರ್ಯದರ್ಶಿ ಸತ್ಯವತಿ ಮನವಿ ಆಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ಹೊರ ರಾಜ್ಯದವರ ಆಯ್ಕೆಗೆ ಬೇಸರ ವ್ಯಕ್ತಪಡಿಸಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ

ಕೆಪಿಎಸ್‌ಸಿ ಪರಿಕ್ಷಾ ಗೊಂದಲ ಹಿನ್ನೆಲೆ ಮಾಜಿ ಸಚಿವ ಸುರೇಶ್ ಕುಮಾರ್ ವಿನೂತ ರೀತಿಯಲ್ಲಿ ಪ್ರತಿಭಟನೆಗೆ ತಿಳಿದಿದ್ದಾರೆ. ಸ್ವತಃ ತಾವೇ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು 2021ರ ಫೆಬ್ರವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ‌ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾವು ಸಚಿವರಾಗಿದ್ದ ಸಂದರ್ಭದಲ್ಲಿಯೂ ಹಲವು ಉದ್ಯೋಗಾಂಕ್ಷಿಗಳಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದು, ಸಂಸ್ಥೆಯ ಸ್ವಾಯತ್ತತೆಯೇ ಅದರ ಜವಾಬ್ದಾರಿ‌ ನಿರ್ವಹಣೆಗೆ ಪ್ರತಿಕೂಲವಾಗಿರುವುದು ದುರಾದೃಷ್ಟಕರ‌. ಯುಪಿಎಸ್ಸಿ ಮಾದರಿಯಲ್ಲಿ ಸಂಸ್ಥೆ ವೃತ್ತಿಪರವಾಗಿ ಕಾರ್ಯ‌ ನಿರ್ವಹಿಸಲು ಏಕೆ ಸಾಧ್ಯವಿಲ್ಲ? ಕೆಪಿಎಸ್ಸಿ ಕಳೆದ ಹಲವು ವರ್ಷಗಳಲ್ಲಿ ನಡೆಸಿರುವ ಪರೀಕ್ಷೆಗಳೆಷ್ಟು? ಎಷ್ಟು ಫಲಿತಾಂಶ ನೀಡಲಾಗಿದೆ? ಎಷ್ಟು ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ? ವಿಳಂಬ ಧೋರಣೆಗೆ ಕಾರಣ ಏನು? ದಕ್ಷ, ಪ್ರಾಮಾಣಿಕ‌ ಅಧಿಕಾರಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕ್ರಿಯಾಯೋಜನೆ ಏನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಕದನ: ದ್ವಿತೀಯ ಪ್ರಾಶಸ್ತ್ಯದ ಅಭ್ಯರ್ಥಿ ಗೆಲುವಿನಲ್ಲಿ ದುಡ್ಡೇ ದೊಡ್ಡಪ್ಪ! ಸಮಾಜಸೇವೆಯ ಉದಾತ್ತ ಆಶಯ ಕೊನೆಗಪ್ಪ! -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

Published On - 5:28 pm, Tue, 31 May 22