ಬೆಂಗಳೂರು, ನ.01: ‘ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ, ಬಾಂಬೆ, ಮುಂಬೈ ಕರ್ನಾಟಕ ಎಂದು ವಿಭಿನ್ನ ಭಾವನೆ ಬರಬಾರದು. ಎಲ್ಲರೂ ಇಡೀ ಕರ್ನಾಟಕ ಸಮೃದ್ಧಿಗಾಗಿ ಆರ್ಥಿಕ, ರಾಜಕೀಯವಾಗಿ ಜೊತೆಗೆ ಎಲ್ಲ ಸಮುದಾಯಗಳು ಬೆಳೆಯಲಿಕ್ಕೆ ಸರ್ಕಾರ ಯೋಜನೆ ರೂಪಿಸುವಂತೆ ಕೆಲಸ ಮಾಡುವುದು ಅವಶ್ಯಕ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(HD Deve Gowda) ಹೇಳಿದರು. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ ಬರ ಪರಿಹಾರಕ್ಕಾಗಿ ಸರ್ಕಾರದಿಂದ ಕೇಂದ್ರಕ್ಕೆ ಪ್ರತ್ರ ವಿಚಾರವಾಗಿ ‘ನನ್ನ ಆರೋಗ್ಯ ಸುಧಾರಣೆ ಆದ್ರೆ ಖಂಡಿತವಾಗಿಯೂ ಪ್ರಧಾನಿ ಭೇಟಿಗೆ ಹೋಗುತ್ತೇನೆ. ನಿಮಗೆ ಅರ್ಥ ಆಗುತ್ತೆ ನನ್ನ ಆರೋಗ್ಯ ಸ್ಥಿತಿ ಹೇಗಿದೆ ಎಂದು ಎಂದರು.
‘ಮಧ್ಯ ಕರ್ನಾಟಕದಲ್ಲಿ ರೈತರಿಗೆ ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಕಿದ ಬೆಳೆ ಒಣಗಿದ್ದು, ರೈತರು ಕಿತ್ತು ಹಾಕುತ್ತಿದ್ದಾರೆ. ಇದರಿಂದ ಬೆಳೆ ನಾಶ ಆಗುತ್ತಿದೆ. ನೆಲಗಡಲೆ, ಕಬ್ಬು ಸೇರಿದಂತೆ ವಿವಿಧ ಬೆಳೆಗೆ ಬೆಂಕಿ ಹಾಕಿ ರೈತರು ಸುಡುತ್ತಿದ್ದಾರೆ. ಹೀಗೆ ರಾಜ್ಯದಲ್ಲಿ ಅನೇಕ ಪ್ರಶ್ನೆಗಳಿವೆ. ಸರ್ಕಾರಕ್ಕೆ ಅದೆಲ್ಲವನ್ನು ಎದುರಿಸುವ ಶಕ್ತಿ ಇದೆ. ಈ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಕಾವೇರಿ ವಿವಾದ: ಸಿದ್ದರಾಮಯ್ಯ ಅಭಯಕ್ಕೂ ಮಣಿಯದ ಮಂಡ್ಯದ ರೈತರು, ಮತ್ತೆ 14 ದಿನ ಪ್ರತಿಭಟನೆ
ಪ್ರತಿಯೊಬ್ಬರೂ ನಾಡಿನ ಏಳಿಗೆಗಾಗಿ ಶ್ರಮಿಸಬೇಕು. ನಾವು ಕನ್ನಡಿಗರು ಕಡಿಮೆ ಇಲ್ಲ. ಇಂತಹ ಸಂಕಷ್ಟದಲ್ಲಿ ಸರ್ಕಾರ ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡಲಿ, ಜನ ತುಂಬಾ ಕಷ್ಟ ಮತ್ತು ನೋವಿನಲ್ಲಿದ್ದಾರೆ. ಯಾವುದೋ ಗ್ಯಾರಂಟಿಯಿಂದ ಜನರಿಗೆ ತೃಪ್ತಿ ಆಗಲ್ಲ. ಜನರ ನೋವನ್ನು ನೋಡೋಕೆ ಆಗುತ್ತಿಲ್ಲ. ನಾನು ಅವರನ್ನೆಲ್ಲ ನೋಡಿದಾಗ 91 ನೇ ವಯಸ್ಸಿನಲ್ಲಿರುವ ನನಗೆ ತುಂಬಾ ನೋವು ಆಗುತ್ತೆ ಎಂದು ಮನದಾಳದ ನೋವನ್ನು ತೋಡಿಕೊಂಡರು. ಇದೇ ವೇಳೆ ನಾಡಿನ ಎಲ್ಲ ಜನತೆಗೆ, ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಯ ಕೋರುತ್ತೇನೆ ಎಂದರು.
ಬೆಂಗಳೂರು ಸೇರಿದಂತೆ ಅನೇಕ ಕಡೆ ನೀರಿಲ್ಲ, ಹೆಣ್ಣು ಮಕ್ಕಳು ನೀರಿಗಾಗಿ ಕಿತ್ತಾಡುವ ಪರಿಸ್ಥಿತಿ ಬಂದಿದೆ. ನಾನು ಎನು ಮಾಡಲಿ ಈ ವಯಸ್ಸಿನಲ್ಲಿ. ಹೋರಾಟ ಮಾಡುವ ಕಾಲ ಒಂದು ಇತ್ತು, ಹೋರಾಟ ಮಾಡಿದೆ. ನನಗೆ ಗೊತ್ತಿದೆ ಕಾವೇರಿ ನೀರಿನಲ್ಲಿ ಎಷ್ಟು ಅನ್ಯಾಯ ಆಗಿದೆಯೆಂದು. ಈ ಸರ್ಕಾರ ಯಾವ ರೀತಿ ನಡೆದುಕೊಂಡಿದೆ. ಮೊನ್ನೆನು ಎರಡುವರೆ ಸಾವಿರ ಕ್ಯೂಸೆಕ್ ಬಿಡುವುದಕ್ಕೆ ಹೇಳಿದೆ. ನನಗೆ ಒಂದು ಅರ್ಥ ಆಗುತ್ತಿಲ್ಲ. ಈ ಅಧಿಕಾರಿಗಳು ಏನು ಕೆಲಸ ಮಾಡ್ತಾರೆ?, ಕೆರೆ ತುಂಬಿದ್ದೀವಿ ಎಂದು ಒಂದು ನೆಪ ಹೇಳಿ, ಜನರಿಗೆ ಸಮಾಧಾನ ಮಾಡೋಕೆ ಆಗಿಲ್ಲ. ನನ್ನ ಆರೋಗ್ಯ ಬೇರೆ ಸರಿಯಲ್ಲ ಏನ್ ಮಾಡಲಿ ಎಂದು ಬರಗಾಲ ನಿರ್ವಹಣೆ ಕುರಿತು ಸರ್ಕಾರದ ನಿರ್ವಹಣೆಗೆ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ