ಅಧಿಕಾರ ಕಳೆದುಕೊಂಡ ಮೇಲೂ ನಾನೆಷ್ಟು ಪುಣ್ಯವಂತ ಅನಿಸುತ್ತಿದೆ: ಮಾಜಿ ಕೇಂದ್ರ ಸಚಿವ ಸದಾನಂದಗೌಡ

ಅಧಿಕಾರ ಕಳೆದುಕೊಂಡ ಮೇಲೂ ನಾನೆಷ್ಟು ಪುಣ್ಯವಂತ ಅನಿಸುತ್ತಿದೆ: ಮಾಜಿ ಕೇಂದ್ರ ಸಚಿವ ಸದಾನಂದಗೌಡ
ಕೇಂದ್ರ ಸಚಿವ ಡಿ ವಿ ಸದಾನಂದಗೌಡ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಪಕ್ಷಕ್ಕೆ ತೊಡಗಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ನನಗೆ ಕರೆ ಮಾಡಿ ಹೇಳಿದ್ದಾರೆ. ಸಂತೋಷದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದೆ ಪಕ್ಷ ಸಂಘಟನೆಯೇ ನನ್ನ ಗುರಿ ಎಂದು ಅವರು ಇದೇ ವೇಳೆ ತಿಳಿಸಿದರು.

TV9kannada Web Team

| Edited By: guruganesh bhat

Jul 09, 2021 | 9:37 PM

ಬೆಂಗಳೂರು: ಅಧಿಕಾರ ಕಳೆದುಕೊಂಡು ಬಂದ ಬಳಿಕವೂ ನೀವು ಸ್ವೀಕಾರ ಮಾಡಿದ ರೀತಿ ನೋಡಿದರೆ ನಾನೆಷ್ಟು ಪುಣ್ಯವಂತ ಎಂದು ಅರ್ಥವಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹರ್ಷ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸೇರಿದ್ದ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಕೆಲ ಕಾಲ ಭಾವುಕರಾದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಪಕ್ಷಕ್ಕೆ ತೊಡಗಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ನನಗೆ ಕರೆ ಮಾಡಿ ಹೇಳಿದ್ದಾರೆ. ಸಂತೋಷದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದೆ ಪಕ್ಷ ಸಂಘಟನೆಯೇ ನನ್ನ ಗುರಿ ಎಂದು ಅವರು ಇದೇ ವೇಳೆ ತಿಳಿಸಿದರು. ಕಳೆದ ಏಳು ವರ್ಷದಲ್ಲಿ ಕ್ಷೇತ್ರದ ಪ್ರತಿ ಕಾರ್ಯಕರ್ತನಿಗೆ ಸಿಕ್ಕಿದ್ದೇನೆ. ಯಾರಲ್ಲೂ ದೊಡ್ಡ ಜಗಳ ಮಾಡಿಕೊಂಡಿಲ್ಲ. ಮುಂದಿನ ಬಾರಿ ಏಳು ಕ್ಷೇತ್ರದಲ್ಲೂ ಬಿಜೆಪಿ ಶಾಸಕರು ಗೆಲ್ಲುವಂತಾಗಬೇಕು. ನನ್ನ ಮೇಲೆ ಬರಬಹುದಾದ ಕಳಂಕಗಳ ಬಗ್ಗೆ ನಾನು ವಿಚಲಿತನಾಗಲ್ಲ. ಪಕ್ಷ ಸಂಘಟನೆಯಲ್ಲಿ ಇರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿ ನಿಲ್ಲೋಣ ಎಂದು ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಮುಂದಿನ ಸಿಎಂ ಎಂಬ ಘೋಷಣೆ ಕಾರ್ಯಕರ್ತರ ಮನಸ್ಸಿನ ಭಾವನೆ. ಅದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಓರ್ವ ಪ್ರೀತಿಯ ಕಾರ್ಯಕರ್ತ ನನ್ನ ನಾಯಕ ದೊಡ್ಡ ಹುದ್ದೆಗೆ ಹೋಗಬೇಕು ಎಂದು ಭಾವಿಸುವುದು ಅವನ ಮನಸ್ಸಿನ ಭಾವನೆ, ಅದು ಪ್ರಚೋದನೆಯಿಂದ ಅಲ್ಲ. ನಾನು ಮಂತ್ರಿಯಾಗಿದ್ದರೂ ನನ್ನ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೂರಕ್ಕೂ ಹೆಚ್ಚು ಬಾರಿ ಹೋಗಿದ್ದೇನೆ. ಮುಂದಿನ ಅವಕಾಶದ ಬಗ್ಗೆ ನಾನೇನು ಹೇಳುವಂತಹದ್ದು ಇಲ್ಲ. ಹಿರಿಯರ ಅಪೇಕ್ಷೆಯಂತೆ ನಡೆದುಕೊಂಡು ಹೋಗುತ್ತೇನೆ/ ನಾನು ಸಿಎಂ ಆಗುವಾಗ, ಕೇಂದ್ರ ಸಚಿವನಾದಾಗ, ರಾಜ್ಯಾಧ್ಯಕ್ಷನಾದಾಗ ನನಗೇನೂ ಆಸಕ್ತಿ ಇರಲಿಲ್ಲ. ಆದರೆ ದೆಹಲಿಯಿಂದ ಬಂದ ನಿರ್ದೇಶನವನ್ನು ಪಾಲಿಸಿದ್ದೇನೆ. ನನಗೆ ಪಕ್ಷದಲ್ಲಿ ನನ್ನ ಮೇಲೆ ಏರಿಸಿದಾಗಲೂ ನಾನು ಬೀಗಲಿಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗು ಅಂತಾ ಹೇಳಿದಾಗಲೂ ನೊಂದುಕೊಂಡಿಲ್ಲ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಸಂತೃಪ್ತ ರಾಜಕಾರಣಿ ನಾನು. ಎತ್ತರ, ತಗ್ಗು, ಮಾನ, ಅಪಮಾನ ಎಲ್ಲವನ್ನೂ ಕಂಡ ವ್ಯಕ್ತಿ. ಪಕ್ಷ ನನ್ನನ್ನು ಎಂದೂ ಕೈ ಬಿಡಲಿಲ್ಲ ಎಂದು ಅವರು ವ್ಯಾಖ್ಯಾನಿಸಿಕೊಂಡಿದ್ದಾರೆ.

ಇದನ್ನೂ ಓದಿ: 

ತನ್ನ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್​ನಿಂದ ನಿರ್ಬಂಧ ತಂದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ

Cabinet Reshuffle: ನರೇಂದ್ರ ಮೋದಿ ಸಚಿವ ಸಂಪುಟ ಸೇರಿದ ನೂತನ ಸಚಿವರ ಕಿರು ಪರಿಚಯ

(Former Union Minister Sadananda Gowda says I feel very blessed even after losing power in Bengaluru)

Follow us on

Related Stories

Most Read Stories

Click on your DTH Provider to Add TV9 Kannada