AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಟರಿಯಿಂದ ಮನೋರಂಜನೆಯವರೆಗೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ರೋಬೋಟ್‌ಗಳದ್ದೇ ಹವಾ!

ಬೆಂಗಳೂರಿನ ಬಿಐಇಸಿಯಲ್ಲಿ ನಡೆಯುತ್ತಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಮೈನಿಂಗ್, ಮಿಲಿಟರಿ ಕಾರ್ಯಾಚರಣೆಗೆ ನೆರವಾಗುವ ನಾಲ್ಕು ಕಾಲಿನ ರೋಬೋಟ್ ಹಾಗೂ ಡ್ಯಾನ್ಸ್ ಮಾಡುವ ಹ್ಯೂಮನಾಯ್ಡ್ ರೋಬೋಟ್‌ಗಳು ವಿಶೇಷ ಆಕರ್ಷಣೆಯಾಗಿವೆ. ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್​​ ಸಮಿಟ್​​ ಆಯೋಜಿಸಲಾಗಿದ್ದು, ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

ಮಿಲಿಟರಿಯಿಂದ ಮನೋರಂಜನೆಯವರೆಗೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ರೋಬೋಟ್‌ಗಳದ್ದೇ ಹವಾ!
ಬೆಂಗಳೂರು ಟೆಕ್ ಸಮಿಟ್‌Image Credit source: PTI
ಅನಿಲ್​ ಕಲ್ಕೆರೆ
| Edited By: |

Updated on: Nov 18, 2026 | 6:51 AM

Share

ಬೆಂಗಳೂರು, ನವೆಂಬರ್​​ 18:  ಬಿಐಇಸಿಯಲ್ಲಿ ನಿನ್ನೆಯಿಂದ (ನವೆಂಬರ್​​ 17) ಆರಂಭವಾಗಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್​​ನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ತಂತ್ರಜ್ಞಾನಗಳ ರೋಬೋಟ್‌ಗಳು ನೋಡುಗರ ಕಣ್ಮನ ಸೆಳೆದಿವೆ. ಮನುಷ್ಯರು ಹೋಗಲಾಗದ ಸ್ಥಳಗಳಲ್ಲೂ ಸಂಚರಿಸಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್ ಇವುಗಳಲ್ಲಿ ವಿಶೇಷ ಆಕರ್ಷಣೆಯಾಗಿದೆ. ಚಿನ್ನ, ಕಬ್ಬಿಣದಂತಹ ಖನಿಜಗಳ ಗುಣಮಟ್ಟ ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ ಎನ್ನಲಾಗಿದೆ.

ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲ ಈ ಯಂತ್ರಮಾನವ!

ಇನ್ನು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿರುವ ನಾಲ್ಕು ಕಾಲಿನ ರೋಬೋಟ್‌ಗಳೂ ಪ್ರದರ್ಶನದ ವಿಶೇಷವಾಗಿತ್ತು. ಈ ರೋಬೋಟ್‌ಗಳು ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲವಾಗಿದ್ದು, ಬೆಟ್ಟ, ಗುಡ್ಡ, ಮರಳುಗಾಡಿನಂತಹ ಕಠಿಣ ಪ್ರದೇಶಗಳಲ್ಲೂ ಸಂಚರಿಸುವ ಜೀಪ್ ಮಾದರಿಯ ರೋಬೋಟ್ ಕೂಡ ಗಮನಸೆಳೆದಿದೆ. ಸುಮಾರು 20 ಕೆ.ಜಿ. ತೂಕದ ಈ ರೋಬೋಟ್ 15 ಕೆ.ಜಿ. ವರೆಗೂ ಭಾರ ಹೊರುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:  29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್​​ಗೆ ಸಿಎಂ ಡಿಕೆ ಶಿವಕುಮಾರ್​​ ಚಾಲನೆ

ಮನುಷ್ಯರಂತೆ ನಡೆಯುವ, ಕುಣಿಯುವ ರೋಬೋಟ್​​

ಮನುಷ್ಯನಿಗೆ ಬಾಡಿಗಾರ್ಡ್‌ನಂತೆ ರಕ್ಷಣೆ ನೀಡುವ ಹ್ಯೂಮನಾಯ್ಡ್ ರೋಬೋಟ್ ಕೂಡ ಎಲ್ಲರನ್ನೂ ಬೆರಗುಗೊಳಿಸಿದೆ. ಎದುರಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಈ ರೋಬೋಟ್, ಮನುಷ್ಯರಂತೆ ನಡೆಯುತ್ತೆ, ಕುಣಿಯುತ್ತೆ. ತರ್ಲೆ ಮಾಡಿದ್ರೆ ಹೊಡೆಯುತ್ತೆ! ಮತ್ತೊಂದೆಡೆ ಚಿಕ್ಕ ಗಾತ್ರದ ಮಾನವ ಸ್ನೇಹಿ ರೋಬೋಟ್ ತನ್ನ ಡ್ಯಾನ್ಸ್‌ನಿಂದ ಜನರನ್ನು ರಂಜಿಸುತ್ತಿದೆ. ಸ್ಪೀಕರ್, ಸಿಸಿ ಕ್ಯಾಮರಾ ಹೊಂದಿರುವ ಈ ರೋಬೋಟ್ ವಾಕಿಂಗ್‌ಗೂ ಸಾಥ್ ನೀಡಲಿದೆ.

ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್​​ ಸಮಿಟ್​​ ಆಯೋಜಿಸಲಾಗಿದೆ. ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು, 16 ವಿಷಯಾಧಾರಿತ ವಿಭಾಗಗಳು, 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ಸಮಿಟ್​​ನ ಭಾಗವಾಗಿರಲಿವೆ. ದೇಶದ 100 ನಗರಗಳಿಂದ 1,000ಕ್ಕೂ ಹೆಚ್ಚು ನವೋದ್ಯಮಗಳು ಸೇರಿ ಸ್ವೀಡನ್ ಪಾಲುದಾರ ರಾಷ್ಟ್ರ, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲಿತ ರಾಷ್ಟ್ರಗಳು ಕೂಡ ಸಮಿಟ್​​ನಲ್ಲಿ ಪಾಲ್ಗೊಂಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅನಿಲ್​ ಕಲ್ಕೆರೆ
ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್